ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ. ಎನ್.

119.6K Views 13 Nov 2025

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಷ್ಪರಾಜ್ ಬಿ.ಎನ್ ಮಂಗಳೂರು ವಾರ್ತಾಭಾರತಿ ದಿನ ಪತ್ರಿಕೆಯ ಬ್ಯೂರೋ ಮುಖ್ಯಸ್ಥನಾಗಿ ಕಳೆದ 22ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು,ಈ ಹಿಂದೆ ಜನವಾಹಿನಿ ಪತ್ರಿಕೆಯ ಉಪ ಸಂಪಾದಕನಾಗಿ,ಪುತ್ತೂರು ವರದಿಗಾರನಾಗಿ, ಕೊಡಗು ಜಿಲ್ಲಾ ಪ್ರಧಾನ ವರದಿಗಾರನಾಗಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿ ಸಿರುತ್ತಾರೆ. ನಿರಂತರ ಶಿಕ್ಷಣ ಪತ್ರಿಕೆ, ನಿಯತಕಾಲಿಕಗಳಲ್ಲಿ ಸುದ್ದಿ ಬಿಡುಗಡೆ ಸೇರಿದಂತೆ ಪತ್ರಿಕೆಗಳಲ್ಲಿ ಒಟ್ಟು ಮೂರು ದಶಕಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸಿರುತ್ತಾರೆ.1990-91ರ ದಕ್ಷಿಣ ಕನ್ನಡ ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ, ನಿರಂತರ ಶಿಕ್ಷಣ ಯೋಜನೆಯಲ್ಲಿ ಸಂಯೋಜಕನಾಗಿ ಕಾರ್ಯನಿರ್ವ ಹಿಸಿರು ವುದು.ಈ ನಡುವೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು,1997-98ರಲ್ಲಿ ಉಪ್ಪಿನಂಗಡಿ ಜೇಸೀಸ್ (ಇಂಟರ್ ನ್ಯಾಶನಲ್ ) ಘಟಕದ ಅಧ್ಯಕ್ಷ ನಾಗಿ,ಅಂತರಾಷ್ಟ್ರೀಯ ಜೇಸೀಸ್ ಸಂಸ್ಥೆಯ ವಲಯ ತರಬೇತು ದಾರನಾಗಿ ಕೊಯಿಲದ ಕರ್ನಾಟಕ ಜಾಗೃತಿ ಸಭಾದ ಅಧ್ಯಕ್ಷನಾಗಿ, ಕೊಯಿಲ ರಾಮಕುಂಜ ರೋಟರಿ ಗ್ರಾಮೀಣ ದಳದ ಅಧ್ಯಕ್ಷನಾಗಿ ,ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ರುವುದು. ಪುತ್ತೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅರೆ ಕಾಲಿಕ ಅತಿಥಿ ಉಪನ್ಯಾಸಕನಾಗಿ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವುದು. ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಿರುವುದು, ಸೇರಿದಂತೆ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ, ಪತ್ರಿಕೋದ್ಯಮ ದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುವುದು.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಯಾಗಿ,ಪ್ರಸ್ತುತ ಮಂಗಳೂರು ಪ್ರೆಸ್ ಕ್ಲಬ್‌ ನ ಕಾರ್ಯದರ್ಶಿ ಯಾಗಿ,ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕ ನಾಗಿ,ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯ ದರ್ಶಿಯಾಗಿ ,ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆ ಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
*ಶೈಕ್ಷಣಿಕ ಅರ್ಹತೆ :-ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,ರಾಮಕುಂಜ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಬಳಿಕ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ, ಪತ್ರಿಕೋದ್ಯಮದಲ್ಲಿ ( ಎಂಸಿಜೆ ) ಸ್ನಾತಕೋತ್ತರ ಪದವಿ ಹಾಗೂ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.
*ಪದವಿ ಪುರಸ್ಕಾರ:-ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುಶಸ್ತಿ 2024,ಟ್ಯಾಲೆಂಟ್‌ ರೀಸರ್ಚ್ ಫೌಂಡೇಶನ್ ಪ್ರಶಸ್ತಿ,ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಪುರಸ್ಕಾರ, ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ 2023 ಸೇರಿದಂತೆ ಗೌರವ ಪಡೆದಿರುತ್ತಾರೆ.
*ಇತರ ಚಟುವಟಿಕೆ ಗಳು :-ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕೊಡಗು,ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಾಹಿತ್ಯ ,ಕವಿಗೋಷ್ಠಿಯಲ್ಲಿ ಕವಿತಾ ವಾಚನ,ಅಧ್ಯಕ್ಷತೆವಹಿಸಿರುವುದು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದು.
ವೈಯಕ್ತಿಕ ವಿವರ:-
ಮೂಲತಃ ಪುತ್ತೂರು ತಾಲೂಕಿನ (ಈಗಿನ ಕಡಬ ತಾಲೂಕಿನ) ರಾಮಕುಂಜ ಗ್ರಾಮದ ನೀರಾಜೆ ನಿವಾಸಿ.ಹಾಲಿ ಉಳ್ಳಾಲ ತಾಲೂಕಿನ
ಪಿಲಾರು ದಾರಂದ ಬಾಗಿಲಿನಲ್ಲಿ ವಾಸವಾ ಗಿದ್ದು, ಮಂಗಳೂರಿನ ವೆಲೆನ್ಸಿಯಾದ ವಾರ್ತಾಭಾರತಿ ಕಚೇರಿಯಲ್ಲಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Read More News

Scroll to Top