ಸಿಎಸ್ಆರ್ ಅಡಿಯಲ್ಲಿ ಪಾರದೀಪ್ ಫಾಸ್ಪೆಟ್ಸ್ ನಿಂದ ವಿಶೇಷ ಮಕ್ಕಳ ಶಾಲೆಗೆ ವ್ಯಾನ್ ಕೊಡುಗೆ

98.5K Views 27 Oct 2025

ಪಣಂಬೂರು, ಅ. 24: ಸಿಎಸ್ಆರ್ ನಿಧಿಯಡಿ ಪಣಂಬೂರಿನ ಪಾರದೀಪ್ ಫಾಸ್ಪೆಟ್ಸ್ ನಿಂದ ಕುಲಶೇಖರದಲ್ಲಿರುವ ಶ್ರೀ ದುರ್ಗಾ ನಡೆಸುತ್ತಿರುವ ಐಕ್ಯಮ್ ವಿಶೇಷ ಮಕ್ಕಳ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯಾನ್ ನ ಕೊಡುಗೆ ನೀಡಲಾಯಿತು.
ಪಿಪಿಎಲ್ ಕಂಪನಿಯ ಸಿಎಂಓ ಎಸ್. ಗಿರೀಶ್ ಅವರು ಸಂಸ್ಥೆಯ ವತಿಯಿಂದ ಸಿಎಸ್ ಆರ್ ಯೋಜನೆ ಹಮ್ಮಿ ಕೊಂಡು ಅಗತ್ಯ ವುಳ್ಳ ಈ ಶಾಲೆಗೆ ಕೊಡುಗೆ ನೀಡಲಾಗಿದೆ ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ ವಿಶೇಷ ಸಾಮರ್ಥ್ಯದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಮೂಲಕ ಮುಖ್ಯ ವಾಹಿನಿ ಗೆ ತರ ಬೇಕಾಗಿದೆ ಎಂದರು.
ದುರ್ಗಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕಮಲಾಕ್ಷಿ ಅವರು ಪಿಪಿಎಲ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಪಿಪಿ ಎಲ್ ಜೆ ಜಿ ಎಂ ಚೇತನ್ ಮೆಂಡೋನ್ಸ, ಸುರತ್ಕಲ್ ರೋಟರಿ ಕ್ಲಬ್ ಉಪಾಧ್ಯಕ್ಷ ರಮೇಶ್ ರಾವ್ ಮಧ್ಯ, ಕಾರ್ಯದರ್ಶಿ ರಾಮಮೋಹನ್. ವೈ., ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ಪಬ್ಲಿಕ್ ಇಮೇಜ್ ನಿರ್ದೇಶಕ ಡಾ. ರಾಜಮೋಹನ್ ರಾವ್. ಕೆ. ದುರ್ಗಾ ಟ್ರಸ್ಟ್ ಪದಾಧಿ ಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು. ದುರ್ಗಾ ಟ್ರಸ್ಟ್ ಕಾರ್ಯ ದರ್ಶಿ ಸಂತೋಷ್ ಕುಮಾರ್ ನಿರೂಪಿಸಿದರು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top