ಉಡುಪಿ-ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2025 ವಿದ್ಯುಕ್ತವಾಗಿ ಉದ್ಘಾಟನೆ ನೆರವೇರಿತು.
ದೀಪ ಬೆಳಗಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಬಹಳಷ್ಟು ವರ್ಷಗಳಿಂದ ಹಲವಾರು ಕ್ರೀಡಾಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಿದೆ”ಎಂದರು.
ಈ ಸಂದರ್ಭ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದರಾಜ್ ಕಾಂಚನ್,ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ,ಉದ್ಯಮಿ ಅಬ್ದುಲ್ ರೆಹಮಾನ್,ವಕೀಲರಾದ ಗಣೇಶ್ ಕುಮಾರ್ ಮಟ್ಟು,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ,ಕ್ರೀಡಾಕೂಟ ಪ್ರಮುಖ ಆಯೋಜಕರಲ್ಲೋರ್ವರಾದ ಶಾಲಿನಿ ಶೆಟ್ಟಿ,ಬಿಗ್ ಬೀಟರ್ಸ್ ಮಾಲೀಕ ಸುದೇಶ್ ಶೆಟ್ಟಿ, ರಾಯ್ ರಾಕರ್ಸ್ ನ ಆಲ್ವಿನ್ ಪಿಂಟೋ,ರ‌್ಯಾಕೆಟ್ ರೇಂಜರ್ಸ್ ನ ಗುರುರಾಜ್ ಸಾಲ್ಯಾನ್ ಮತ್ತು ಕಾಶೀರಾಮ್ ಪೈ,ನ್ಯಾಷನಲ್ ಸ್ಮ್ಯಾಷರ್ಸ್ ನ ಅಬ್ದುಲ್ ರೆಹಮಾನ್,ಮಟ್ಟುಮಿತ್ ವಾರಿಯರ್ಸ್ ನ ಗಣೇಶ್ ಮತ್ತು ಅಮಿತ್,ಮಾಲ್ಸಿ ಸ್ಟ್ರೈಕರ್ಸ್ ನ ಚಂದ್ರಕಾಂತ್ ಶೆಣೈ ಮತ್ತು ಗೌತಮ್ ಶೆಣೈ,ಕೋಸ್ಟಲ್ ಸ್ಟಾರ್ ಸುರತ್ಕಲ್ ನ ಅರುಣ್.ಎಮ್.ಡಿಸೋಜಾ,ಮತ್ಸ್ಯರಾಜ್ ಗ್ರೂಪ್ ಮಲ್ಪೆಯ ಅಭಿಜಿತ್ ಕೋಟ್ಯಾನ್,ಗ್ಯಾಲಕ್ಸಿ ಸ್ಪೋರ್ಟ್ಸ್ ನ ಕೃಷ್ಣಮೂರ್ತಿ ಶೇಟ್ ಮತ್ತು ಸದಾನಂದ ನಾವಡ,ಫೆದರ್ ಫೈಟರ್ಸ್ ನ ಆರ್.ಉದಯ್ ಕುಮಾರ್ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ, ಡೇರಿಂಗ್ ಜಾಗ್ವರ್ಸ್ ನ ಹರ್ಷ ಕುಮಾರ್ ಗೌಡ ಮತ್ತು ಕೋಸ್ಟಲ್ ನೈಲ್ ಮಾಲೀಕರಾದ ಡಾಲ್ಫಿ ಸಾರೆಸ್ ಮತ್ತು ಶಮ್ಶೀರ್ ಉಪಸ್ಥಿತರಿದ್ದರು.
ಸುರೇಶ್ ಭಟ್ ಸ್ಪೋರ್ಟ್ಸ್ ಕನ್ನಡ ಕಾರ್ಯಕ್ರಮ ನಿರೂಪಿಸಿದರು.



























































































































































































