ಪಾಲ್ದನೆ ಚರ್ಚ್ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರಿಗೆ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ವತಿಯಿಂದ ಬೀಳ್ಕೊಡುಗೆ

117.8K Views 25 Jun 2025

ಮಂಗಳೂರು: ಮಂಗಳೂರು ನಗರದ ಪಾಲ್ದನೆ ಸಂತ ತೆರೆಸಾ ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ನಿವೃತ್ತಿ ಹೊಂದಿ ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಚರ್ಚಿನ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ (ತಿಸ್ರೀ ಓಡ್ಡ್) ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಂಗಳೂರು ಮತ್ತು ಅಖಿಲ ಕರ್ನಾಟಕ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ಇದರ ಪ್ರಾಂತೀಯ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಪ್ರಕಾಶ್ ಲೋಬೊ ಅವರು ನಿವೃತ್ತಿ ಹೊಂದಿದ ಫಾ. ಆಲ್ಬನ್ ಡಿ ಸೋಜಾ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಾಲ್ದನೆ ಘಟಕದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸ್ವೀಬರ್ಟ್ ಡಿ ಸೋಜಾ ಸ್ವಾಗತಿಸಿದರು. ಅಥಿತಿಗಳಾಗಿ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಫಾ. ಆಲ್ಬನ್ ಡಿ ಸೋಜಾ ಅವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Read More News

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಯಶಸ್ವಿಯಾಗಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ತುಂಬೆ ಸಮೂಹ ಸಂಸ್ಥೆಗಳ ಆರೋಗ್ಯ, ಶಿಕ್ಷಣ, ವೈದ್ಯಕೀಯ ಸಮಾಜಮುಖಿ ಬಹು ಯೋಜನೆಗಳ ಬಗ್ಗೆ ಹುಟ್ಟೂರು ತುಂಬೆ ಹಿಲ್ಸ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ತುಂಬೆ ಗ್ರೂಪ್ಸ್ ಸಂಸ್ಥಾಪಕ ಡಾ. ತುಂಬೆ ಮೊಯ್ದೀನ್

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top