ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ಸದಸ್ಯೆ ನಿಶೆಲ್ ಫೆರ್ನಾಂಡಿಸ್ ಅವರನ್ನು ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಯುಕ್ತ ಕ್ಯಾಥೊಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು. ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಎಡ್ವಿನ್ ಸಂತೋಷ್ ಮೋನಿಸ್ ಅವರು ಮಾತನಾಡಿ ನಿಶೆಲ್ ಅವರು ಬಹುಮುಖ ಪ್ರತಿಭೆ ಹೊಂದಿದ್ದು, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಚರ್ಚಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿ ಆಕೆಯನ್ನು ಮತ್ತು ಅಕೆಯ ಹೆತ್ತವರನ್ನು ಆಭಿನಂದಿಸಿದರು.
ಸಮಾರಂಭದಲ್ಲಿ ವಂದನೀಯ ಫಾ. ಲಾಯ್‌ಸ್ಟನ್ ಕೊರ್ಡೇರೊ, ಚರ್ಚಿನ ಉಪಾಧ್ಯಕ್ಷ ಡೆನ್ನಿಸ್ ಸಿಕ್ವೇರಾ, ಕಾರ್ಯದರ್ಶಿ ಜೆತ್ರುದ್ ಡಿ’ಸೋಜಾ, ಕ್ಯಾಥೊಲಿಕ್ ಸಭಾ ಘಟಕದ ಅಧ್ಯಕ್ಷ ಅರುಣ್ ಡಿ’ಸೋಜಾ, ಕಾರ್ಯದರ್ಶಿ ಗ್ರೇಸಿ ನೊರೊನ್ಹಾ ಅವರು ಜತೆಗೂಡಿ ಫಲ, ಪುಷ್ಪ ನೀಡಿ ಶಾಲು ಹೊದಿಸಿ ನಿಶೆಲ್ ಅವರನ್ನು ಸನ್ಮಾನಿಸಿದರು. ಕ್ಯಾಥೊಲಿಕ್ ಸಭಾ ಮಾಜಿ ಕೇಂದ್ರೀಯ ಅಧ್ಯಕ್ಷ ಎಲ್.ಜೆ. ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ನಿಶೆಲ್ ಅವರು ಚರ್ಚ್ ಗಾಯನ ಮಂಡಳಿಯಲ್ಲಿ ಕೀ ಬೋರ್ಡ್ ನುಡಿಸಿ ಸಹಕರಿಸುತ್ತಿದ್ದಾರೆ. ಅವರು ಚರ್ಚಿನ ಗಾಯನ ಮಂಡಳಿಯ ಮುಖ್ಯಸ್ಥ ಆಲ್ವಿನ್ ಫೆರ್ನಾಂಡಿಸ್ ಮತ್ತು ಅನಿತಾ ಡಾಯಸ್ ಅವರ ಪುತ್ರಿ.








































































































































































































