ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಜೂನ್ 15 ರಂದು ಬೆಳಗ್ಗೆ ಬಲಿಪೂಜೆಯ ಬಳಿಕ ನೆರವೇರಿತು. ಚರ್ಚಿನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿ’ಸೋಜಾ ಅವರು ಪ್ರಮಾಣ ವಚನ ಬೋಧಿಸಿದರು.
ಸಂಘದ ಅಧ್ಯಕ್ಷೆಯಾಗಿ ವಿನೀಶಾ ಬ್ರ್ಯಾಗ್ಸ್, ಉಪಾಧ್ಯಕ್ಷರಾಗಿ ರಾಯನ್ ನೊರೊನ್ಹಾ, ಕಾರ್ಯದರ್ಶಿಯಾಗಿ ಆ್ಯಶಲ್ ಲೋಬೊ, ಜತೆ ಕಾರ್ಯದರ್ಶಿಯಾಗಿ ಡ್ಯಾರನ್ ಅರಾನ್ಹಾ, ಖಜಾಂಚಿಯಾಗಿ ಗ್ಲೇವಿನ್ ಡಿ’ಸೋಜಾ, ‘ಆಮ್ಚೊ ಯುವಕ್’ ಇದರ ಪ್ರತಿನಿಧಿಯಾಗಿ ವಿನೊಲಾ ಪಿಂಟೊ, ರೆಡ್ ಡ್ರೊಪ್ ಪ್ರತಿನಿಧಿಯಾಗಿ ಬ್ರೆಂಡನ್ ಪಿರೇರಾ, ಆಧ್ಯಾತ್ಮಿಕ ಕಾರ್ಯದರ್ಶಿ ಫ್ರೀಡಲ್ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿಯಾಗಿ ಡಿಯೋನ್ ಫೆರ್ನಾಂಡಿಸ್, ನಿಕಟ ಪೂರ್ವ ಅಧ್ಯಕ್ಷ ವಿಲ್‌ಸನ್ ಪಿಂಟೊ ಅವರು ಪ್ರತಿಜ್ಞೆ ಸ್ವೀಕರಿಸಿದರು.
ಸಂಘದ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡ್ ನ ಮುಖ್ಯಸ್ಥ ರೋಶನ್ ಮೊಂತೇರೊ ಉಪಸ್ಥಿತರಿದ್ದರು.








































































































































































































