ಸಂಘಟನೆಗಳು ಸಮಾಜದ ದೀಪವಾಗಬೇಕು: ಮಹಾಬಲ ಪೂಜಾರಿ ಕಡಂಬೋಡಿ.ಸುರತ್ಕಲ್ ನಲ್ಲಿ ಹಿರಿಯರ ಕ್ರಿಕೆಟ್ ಹಬ್ಬ

111K Views 8 Apr 2025

ಸುರತ್ಕಲ್: ಸಂಘಟನೆಗಳು ಸಮಾಜದ ದೀಪವಾಗಬೇಕು ಸಮಾಜಕ್ಕೆ ಮಾದರಿಯದಂತಹ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಂಘಟನೆ ಪದದ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ನುಡಿದರು.


ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ರಾಜ್ಯ ಮಟ್ಟದ ಹಿರಿಯರ ಕ್ರಿಕೆಟ್ ಹಬ್ಬ ಸೀಸನ್ 4 ಸುರತ್ಕಲ್ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಬಿ,ಎ,ಎಸ್,ಎಪ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಭಂದಕರಾದ ಸಂತೋಷ್ ಪೈ, ಮನಪಾ ಮಾಜಿ ಸದಸ್ಯ ವರುಣ್ ಚೌಟ, ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್, ಎನ್ ಐ ಟಿ ಕೆ ಮಾಜಿ ಜಂಟಿ ಕುಲಪತಿ ರಾಮಮೋಹನ್ ಎಣ್ಮಕಜೆ, ಮಂಗಳೂರು ಎಸ್ ಡಿ ಸಿ ಸಿ ಬ್ಯಾಂಕ್ ಎ.ಜಿ.ಎಂ ರಾಜೇಶ್ ಶೆಟ್ಟಿ, ಬಾಲಕೃಷ್ಣ ಕೆಂಚನೂರು, ಮಂಗಳೂರು ಬಿ.ಎಂ.ಅರ್ ಗ್ರೂಪ್ ಮಾಲಕರು ದಾವೂದ್ ಹಕಿಂ, ಸುರತ್ಕಲ್ ಸ್ಪೋರ್ಟ್ಸ ಕ್ಲಬ್ ಸಂಚಾಲಕರು ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಕಿರಣ್ ಅಚಾರ್ಯ ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ದುರ್ಗಾಂಬ ತಡಂಬೈಲ್, ದ್ವೀತಿಯ ವೀರಕೇಸರಿ ತಡಂಬೈಲ್, ತೃತೀಯ ಬಿ.ಜೆ,ಸ್ಪಾರ್ಕ್ ಉಡುಪಿ ಚತುರ್ಥ ಆನಂದಿಲೆವೆನ್ ಬೆಂಗಳೂರು ಪಡೆಯಿತು. ಇದೇ ಸಂದರ್ಭದಲ್ಲಿ ಬಬಿತಾ ಜೆ ಶೆಟ್ಟಿ ಮತ್ತು ಅರ್ಜುನ್ ಭಂಡಾರ್ಕರ್ ಇವರನ್ನು ಸನ್ಮಾನಿಸಲಾಯಿತು.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top