ಸೇಂಟ್ ಜೋಸೆಫ್ಸ್ ಯುನಿವರ್ಸಿಟಿ, ಬೆಂಗಳೂರಿನ ಶಿಫ್ಟ್ IIIರ ಅಂತರವರ್ಗ ಸಾಂಸ್ಕೃತಿಕೋತ್ಸವ – ತೇಜಸ್ 2025

113.3K Views 7 Apr 2025

ಶಿಫ್ಟ್ IIIರ ಪ್ರಮುಖ ಅಂತರವರ್ಗ ಸಾಂಸ್ಕೃತಿಕೋತ್ಸವವಾದ ತೇಜಸ್ 2025, 7ರಿಂದ 19 ಮಾರ್ಚ್ 2025ರವರೆಗೆ ನಡೆದು, ಸಾಮಾನ್ಯ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಗದ 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಕೆಲಸ ಮಾಡುವ ವೃತ್ತಿಪರರು ಮತ್ತು ವಿದ್ಯಾರ್ಥಿ ಉದ್ಯಮಿಗಳು ಸೇರಿದಂತೆ) ಭಾಗವಹಿಸಿದರು. ನೃತ್ಯ, ಸಾಹಿತ್ಯ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡ 27 ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಗುರುತಿಸಲಾಯಿತು.


ನೃತ್ಯ ಸಂಘದಿಂದ ಫ್ಲ್ಯಾಶ್ ಮಾಬ್’ನಿಂದ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು ಮತ್ತು ಸ್ವಯಂಸೇವಕ ವಿದ್ಯಾರ್ಥಿಗಳ ಸಮರ್ಪಿತ ಪ್ರಯತ್ನಗಳಿಂದ ಈ ಕಾರ್ಯಕ್ರಮ ನಿರ್ವಹಿಸಯಿತು. ತೇಜಸ್ 2025ರ ಹೈಲೈಟ್ ಆಗಿ, BCA ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ‘ಕಟ್‌ದ ಕ್ಯೂ’ ಡಿಜಿಟಲ್ ಅಪ್ಲಿಕೇಶನ್‌ನ ಲಾಂಚ್ ನಡೆಯಿತು.
ಪ್ರೊ ಚಾನ್ಸಲರ್ ಫಾ। ಸ್ವಿಬರ್ಟ್ ಡಿಸಿಲ್ವಾ ಎಸ್‌ಜೆ, ವೈಸ್ ಚಾನ್ಸಲರ್ ಫಾ। ಡಾ। ವಿಕ್ಟರ್ ಲೋಬೋ ಎಸ್‌ಜೆ, ಸ್ಕೂಲ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ಡೀನ್ ಫಾ। ಡೆನ್ಜಿಲ್ ಲೋಬೋ ಎಸ್‌ಜೆ ಮತ್ತು ಶಿಫ್ಟ್ IIIರ ಡೈರೆಕ್ಟರ್ ಫಾ। ಫ್ರಾನ್ಸಿಸ್ ಪಿಂಟೋ ಎಸ್‌ಜೆ ಅವರ ಹಾಜರಿಯೊಂದಿಗೆ ಉತ್ಸವದ ಸಮಾಪ್ತಿ ಸಮಾರಂಭ ನಡೆಯಿತು.

Read More News

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

ರಂಗಭೂಮಿ, ಚಲನಚಿತ್ರ ರಂಗದ ಅಭಿಜಾತ ಕಲಾವಿದ, ಎಸ್ ಡಿಸಿಸಿ ಬ್ಯಾಂಕ್ ನ ನಿವೃತ್ತ ಅಧಿಕಾರಿ, ರಂಗಭೂಷಣ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರಿಗೆ ರಾಜ್ಯೋತ್ಸವದ ದಿನದಂದೇ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಸ್ಥಾಪಕತ್ವದ ರಂಗಚಾವಡಿ ಸಂಸ್ಥೆಯಿಂದ ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಂಗು ರಂಗಿನ ರಂಗೋತ್ಸವದಲ್ಲಿ ಪ್ರತಿಷ್ಟಿತ ರಂಗಚಾವಡಿ ಪ್ರಶಸ್ತಿ ಪ್ರದಾನ. ರಂಗಚಾವಡಿ ಸಂಸ್ಥೆಯ ನಿಸ್ವಾರ್ಥ ಕಲಾಸೇವೆಯನ್ನು ಶಾಘಿಸಿದ ಐಕಳ ಹರೀಶ್ ಶೆಟ್ಟಿ ಸಹಿತ ಗಣ್ಯರನೇಕರು.

Scroll to Top