ಮಧೂರು ಬ್ರಹ್ಮಕಲಶೋತ್ಸವ” ಮಂಗಳೂರಿನಲ್ಲಿ ನಾಳೆ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಉದ್ಘಾಟನೆ

103.3K Views 15 Mar 2025

ಶ್ರೀ ಕ್ಷೇತ್ರ ಮಧೂರಿನಲ್ಲಿ ಜರಗಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ” ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ” ದ ಉದ್ಘಾಟನೆಯು ನಾಳೆ ತಾ.15, ಶನಿವಾರ ಬೆಳಿಗ್ಗೆ ಗಂಟೆ 10-00 ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿರುವುದು.
ಕೊಂಡೆವೂರಿನ ಪ.ಪೂ.ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕಟೀಲು ಹರಿನಾರಾಯಣ ಆಸ್ರಣ್ಣ, ಮಧೂರು ಕ್ಷೇತ್ರದ ತಂತ್ರಿಗಳಾದ ದೇರೆಬೈಲು ಶಿವಪ್ರಸಾದ್ ತಂತ್ರಿ, ಶರವು ರಾಘವೇಂದ್ರ ಶಾಸ್ತ್ರಿ , ಇತರ ಧಾರ್ಮಿಕ ಕ್ಷೇತ್ರಗಳ ಪ್ರಮುಖರು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿರುವರು.
ಬನ್ನಿ ಭಾಗವಹಿಸಿ
ಎಸ್.ಪ್ರದೀಪ ಕುಮಾರ ಕಲ್ಕೂರ , 9845083736

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

Scroll to Top