ಬಂಟ್ಸ್ ಅಸೋಸಿಯೇಷನ್ ಪುಣೆ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರ. ‘ಆರೋಗ್ಯ ಪೂರ್ಣ ಜೀವನ ಪಡೆಯಲು ಎಲ್ಲರೂ ಬಯಸುತ್ತಾರೆ’ -ರೋಹಿತ್ ಶೆಟ್ಟಿ

90.9K Views 22 Jan 2025

ವರದಿ: ಹರೀಶ್ ಮೂಡಬಿದ್ರಿ.
ಪುಣೆ : ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ಅತ್ಯಂತ ಬಿಡುವಿಲ್ಲದ ಕೆಲಸದಲ್ಲಿ ನಿರತನಾಗಿರುತ್ತಾನೆ ಹಿಂದಿನ ಜೀವನ ಶೈಲಿಗೆ ಹೋಲಿಸಿದರೆ ಇಂದಿನ ಜೀವನ ಶೈಲಿಯೇ ಬೇರೆ .ಜೀವನದ ಜಂಜಾಟದಲ್ಲಿ ಉದ್ಯೋಗ ಒತ್ತಡ ,ಉದ್ಯಮದ ಜವಾಬ್ದಾರಿ,ಮನೆ ಮಕ್ಕಳ ಉಸ್ತುವಾರಿಯಲ್ಲಿ ನಿತ್ಯವು ಸಮಯದ ಕೊರತೆ ನಮಗೆ ಬರುತ್ತದೆ .ಇದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಏರುಪೇರುಗಳು ಆಗುತ್ತವೆ ,ನಂತರ ತನ್ನಿಂತಾನೆ ಯಾವುದಾದರೊಂದು ರೋಗಕ್ಕೆ ತುತ್ತಾಗುತ್ತೇವೆ , ಇಂದಿನ ದಿನಗಳಲ್ಲಿ ಮನುಷ್ಯರಲ್ಲಿ ಕಾಣಸಿಗುವ ಯಾವುದಾದರೊಂದು ಆರೋಗ್ಯ ತೊಂದರೆಗಳು ಸಾಮಾನ್ಯವಾಗಿವೆ . ಆದರೆ ,ಈಗಿನ ದೈಹಿಕ ,ಮಾನಸಿಕ ,ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರೂ ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ .ಇದರಿಂದ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಬಹಳ ಮುಖ್ಯ , ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾದರೂ ಮೊದಲಾಗಿ ನಾವು ಡಾಕ್ಟರ್ಸ್ ನವರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿವುದು ಮುಖ್ಯ . ಆರೋಗ್ಯ ಪೂರ್ಣ ಜೀವನ ಎಲ್ಲರೂ ಬಯಸುತ್ತಾರೆ ಆದರೆ, ನಿರ್ಲಕ್ಷ್ಯ ವಹಿಸದೆ ಸೂಕ್ತ ಸಮಯದಲ್ಲಿ ಸಲಹೆ ಪಡೆಯುದು ಮುಖ್ಯ ಎಂದು ಪುಣೆ ಬಂಟ್ಸ್ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿ ಗುತ್ತು ನುಡಿದರು.


ಹಾಗೂ ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು , ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ .ನಮ್ಮ ಉಪಾಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು ಬಂದಿರುವ ಡಾಕ್ಟರ್ಸ್ ನವರ ಸಹಕಾರದಿಂದ ಈ ಆರೋಗ್ಯ ತಪಾಸಣೆ ಸಮಾಜದ ಜನ ಸಾಮಾನ್ಯರಿಗೆ ಸಹಕಾರಿಯಾಗಿದೆ ಎಂದರು.ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸೇವಾ ಕಾರ್ಯದಂಗವಾಗಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ಸಮಾಜ ಭಾಂದವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವು ಜನವರಿ 19 ರವಿವಾರದಂದು ,ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ , ಪುಣೆ ಇಲ್ಲಿ ನಡೆಯಿತು .


ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿಸ್ಪೆಷಾಲಿಟಿ ಆರೋಗ್ಯ ತಪಾಸಣೆ , ಸ್ತ್ರೀರೋಗ ಶಾಸ್ತ್ರ ಮಕ್ಕಳ ರೋಗ ತಪಾಸಣೆ , ಕಣ್ಣು ,ಹಲ್ಲು ತಪಾಸಣೆ ,ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ , ಸಕ್ಕರೆ ತಪಾಸಣೆ ನಡೆಸಲಾಯಿತು .ಈ ಶಿಬಿರವನ್ನು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ಶಿಬಿರದ ಸಂಯೋಜಕರಾದ ಸಂಘದ ಉಪಾಧ್ಯಕ್ಷರಾದ ಡಾ ಸುಧಾಕರ್ ಶೆಟ್ಟಿ ,ಸತೀಶ್ ರೈ ಕಲ್ಲಂಗಳ ಗುತ್ತು ,ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷ ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ , ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್ ಸಂತ್ ಸಿಂಗ್ ಮೋಕ್ಷಾ ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ ,ಕೋಶಾಧಿಕಾರಿ ಸಿ ಎ ಮನೋಹರ್ ಶೆಟ್ಟಿ ,ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ,ಮಹೇಶ್ ಹೆಗ್ಡೆ ಪೊಳಲಿ ,ಅಶೋಕ್ ಶೆಟ್ಟಿ ,ಯುವ ವಿಬಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮಹಿಳಾ ವಿಬಾಗದ ಶಾಲಿನಿ ಶೆಟ್ಟಿ ,ಪೂರ್ಣಿಮಾ ಶೆಟ್ಟಿ ,ಪ್ರೀತಿ ಶೆಟ್ಟಿ ,ಲತಾ ಶೆಟ್ಟಿ ಮಾಜಿ ಅಧ್ಯಕ್ಷೆಯರುಗಳಾದ ಸುಜಾತ್ ಎಸ್ ಹೆಗ್ಡೆ ,ದೀಪಾ ಎ ರೈ , ಮತ್ತು ಸಮಿತಿ ಪದಾಧಿಕಾರಿಗಳು .ಮಹಿಳಾ ವಿಭಾಗ ,ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು .
ಈ ಆರೋಗ್ಯ ತಪಸಣಾ ಶಿಬಿರದ ವೈದ್ಯಕೀಯ ಸಲಹೆಗಾರರ ಬೋರ್ಡ್ ನ ಪ್ರಮುಖರಾದ ಡಾ ಹಂಸರಾಜ್ ಶೆಟ್ಟಿ ಎಂ ಬಿ ಎ ,ಡಾ ಸಂಜಯ್ ಕುಲಕರ್ಣಿ , ಡಾ ಸುಜಯ್ ಹೆಗ್ಡೆ ,ಡಾ ಜ್ಯೋತಿ ಶೆಟ್ಟಿ ,ಡಾ ಪ್ರವೀಣ್ ಅರ್ ಶೆಟ್ಟಿ ,ಡಾ ವಿವೇಕ್ ಹೆಗ್ಡೆ ,ಡಾ ಸಂಜಯ್ ತೆಕವಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರುಗಳಾದ ಡಾ.ಚಿತ್ತರಂಜನ್ ಶೆಟ್ಟಿ , ಡಾ.ಸುಧಾಕರ್ ಶೆಟ್ಟಿ , ಡಾ.ಉರ್ವಿ ಕೊಥಾರಿ,ಡಾ ರೋಬರ್ಟ್ ಲೋಬೊ ,ಡಾ.ವಿಕಾಸ್ ಮಂತೋಲೆ ,ಡಾ ಸಮಿತಾ ಮೂಲಾನಿ ,ಡಾ ಸತ್ಯಶೀಲ ನ್ಯಾ ಕ್ ರವರು ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನಿಡಿದರು .ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಹಾಗೂ ಎಲ್ಲಾ ಸಮಾಜದ ಭಾಂದವರು ವಿವಿದ ವಿಬಾಗಗಳಲ್ಲಿ ಮತ್ತು ಹಲವಾರು ರೀತಿಯ ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು .


ಸಮಾಜ ಭಾಂದವರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಈ ಶಿಭಿರ ಆಯೋಜಿಸಲಾಗಿದೆ .ಪ್ರತಿ ವರ್ಷ ವು ಈ ಶಿಭಿರ ನಡೆಯಬೇಕು ,ನಮ್ಮ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು .ವಿವಿದ ಸ್ತರದ ತಪಾಸಣಾ ಡಾಕ್ಟರ್ಸ್ ಒಂದೇ ಕಡೆ ಇದ್ದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಸದಾವಕಾಶ ದೊರೆಯುತ್ತದೆ .ಇದು ಸಮಾಜ ಕಲ್ಯಾಣಕ್ಕಾಗಿ ಮಾಡುವ ಸೇವೆ ನಮ್ಮದು.ಸುಮಾರು 28 ವರ್ಷಗಳಿಂದ ಗುರುನಾನಕ್ ಮೆಡಿಕಲ್ ಫೌಂಡೇಶನ್ ಅರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ, ನಮ್ಮ ಸಂಘಕ್ಕೆ ಉತ್ತಮ ಸಹಕಾರ ನೀಡುತಿದ್ದಾರೆ .ಆರೋಗ್ಯದ ಬಗ್ಗೆ ನಿಮ್ಮ ಸೇವೆಗೆ ನಾವು ಸದಾ ಸಿದ್ದರಿದ್ದೇವೆ .ಡಾ .ಸುಧಾಕರ್ ಶೆಟ್ಟಿ –ಉಪಾಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ಪುಣೆ

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top