ಏನೆಪೋಯ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ. ‘ಮಹಾತ್ಮರ ಬದುಕು ಇಂದಿನ ಪೀಳಿಗೆಗೆ ದಾರಿದೀಪ’: ಭಾಸ್ಕರ ರೈ ಕುಕ್ಕುವಳ್ಳಿ

112.7K Views 19 Jan 2025

ಮಂಗಳೂರು: ನಗರದ ಕೂಳೂರಿನಲ್ಲಿರುವ ಏನೆಪೋಯ ಶಿಕ್ಷಣ ಸಂಸ್ಥೆ ವೈಐಎಎಸ್ ಸಿಎಂ ಇದರ ಎನ್.ಎಸ್.ಎಸ್ 2,9,17 ಮತ್ತು 18ನೇ ಘಟಕಗಳು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆ ಸಲುವಾಗಿ (ದಿನಾಂಕ 15 ರಂದು) ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಕೂಸು


‘ನಮ್ಮ ದೇಶದಲ್ಲಿ ಜನಿಸಿದ ಅನೇಕ ಮಹಾತ್ಮರು ಸ್ವದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ತಮ್ಮ ವರ್ಚಸ್ಸಿನ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಪಾದಿಸಿ ಜಗತ್ಪ್ರಸಿದ್ಧರಾಗಿದ್ದಾರೆ. ಅಂತವರ ಬದುಕು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದ ಮೂಲಕ ಪ್ರಾಚ್ಯದ ಮಹಾಪ್ರವಾದಿಯಾಗಿ ಹೊರಹೊಮ್ಮಿದ್ದಲ್ಲದೆ ‘ಏಳಿ ಎದ್ದೇಳಿ’ ಎಂಬ ಅಮೃತವಾಣಿಯ ಮೂಲಕ ಯುವಜನರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಅವರು ನುಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ ರಾಜ್ ‘ಇಂದಿನ ಯುವಜನರು ಹಿರಿಯರ ಆದರ್ಶಗಳನ್ನು ಪಾಲಿಸಿ ಯೋಗ್ಯ ದಾರಿಯಲ್ಲಿ ನಡೆಯಬೇಕು’ ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲ ಡಾ.ಅರುಣ್ ಎ.ಭಾಗವತ್ ಅವರ ನಿರ್ದೇಶನದಂತೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಭಾಸ್ಕರ ರೈ ಕುಕ್ಕುವಳ್ಳಿ ಬಹುಮಾನ ವಿತರಣೆ ಮಾಡಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ದಿನಕರ ಎಸ್. ಪಚ್ಚನಾಡಿ, ನಿಯಾಜ್ ಪಿ.ಮತ್ತು ಸುಮಂಗಲ ರಾವ್ ಉಪಸ್ಥಿತರಿದ್ದರು. ಡಾ.ಧನುಷ್ ಬಿ., ಡಾ.ಶರೀನಾ ಪಿ.,ನಾರಾಯಣ್ ಸುಕುಮಾರ್ ಮತ್ತು ಮೈಕ್ರೋಬಯಾಲಜಿ ಮತ್ತು ಫೋರೆನ್ಸಿಕ್ ಸಾಯನ್ಸ್ ವಿಭಾಗಗಳಿಂದ ಎನ್ಎಸ್ಎಸ್ ಘಟಕಗಳ ಸದಸ್ಯರಾದ ಸುಮಾರು 60 ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ. ಶರೀನಾ ಪಿ. ನಾರಾಯಣ್ ಸುಕುಮಾರ್ ಶುಭ ಕೋರಿದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top