ಅಭಿಯಂತರ ಎನ್ ನಾಗೇಂದ್ರ ರವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ.

117.7K Views 8 Jan 2025

ಬೆಂಗಳೂರು: ಸುರ್ವೆ ಕಲ್ಚರಲ್ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಸೇವೆ ಹಾಗೂ ಗಾಯನ ಕ್ಷೇತ್ರದಲ್ಲಿ ಗುರುತಿಸಿ ಕೊಂಡ ಮಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ಸಹಾಯಕ ಯೋಜನಾಧಿಕಾರಿಯಾಗಿದ್ದ ಪ್ರಸ್ತುತ ಉಡುಪಿಯಲ್ಲಿ ಅಭಿಯಂತರ ಆಗಿ ಕರ್ತವ್ಯದಲ್ಲಿರುವ ಎನ್ ನಾಗೇಂದ್ರ ಅವರನ್ನು ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಫಲಕದೊಂದಿಗೆ ಶಾಲು ಹಾರ ಮೈಸೂರು ಪೇಟ ತೊಡಿಸಿ ಅಭಿನಂದಿಸಲಾಯಿತು.
ಸುರ್ವೆ ಕಲ್ಚರಲ್ ಅಕಾಡೆಮಿ ಸ್ಥಾಪಕ ಅಧ್ಯಕ್ಷ ರಮೇಶ್ ತುರ್ವೆ ಪದಾಧಿಕಾರಿಗಳಾದ ಡಾ. ಎಲ್ಲಪ್ಪ, ಹಾಸ ಕಲಾವಿದೆ ಕವಿತಾ ಸುಧೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Read More News

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

Scroll to Top