ಬೆಳಗಾವಿ: ಬೆಳಗಾವಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ 7ನೇ ವೇತನ ಆಯೋಗದಲ್ಲಿ ವೇತನ ನಷ್ಟ ಸರಿಪಡಿಸುವ ಬಗ್ಗೆ ಸರಕಾರಕ್ಕೆ ಒತ್ತಾಯಿಸಿ ಸುವರ್ಣ ಸೌಧದ ಎದುರು ಇಂದು (ಡಿಸೆಂಬರ್16 ರಂದು) ಬೆಳಿಗ್ಗೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಯಿತು.



ಈ ಪ್ರತಿಭಟನೆಯಲ್ಲಿ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿಗಳಾದ ರಾಜಶೇಖರ್ (Ex-ACCT), ಎಸ್. ಕೆ. ಸತ್ಯನಾರಾಯಣ ಬೆಂಗಳೂರು(Ex-ACCT),ಅಂಜನಾಮೂರ್ತಿ (Ex-ACCT), ಬಿ. ಇಂದಿರಾ ಕುಮಾರ್ (Ex-CTO), ವೆಂಕಟೇಶ್ (Ex-CTO), ಗಂಗಾಧರ್(Ex-CTI).ಅನಂತ ಪದ್ಮನಾಭ(Ex-CTO). ರಂಗಣ್ಣ (Ex-CTI). ಎನ್. ಜಿ. ರಂಗಸ್ವಾಮಿ (Ex-CTO) ಸೇರಿದಂತೆ 8 ಸಾವಿರಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಿಂದ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಿನ್ನೆ ನಿವೃತ್ತ ಸರಕಾರಿ ನೌಕರರ ನಿಯೋಗ ಸ್ಪೀಕರ್ ಯು. ಟಿ. ಖಾದರ್ ಅವರನ್ನು ಭೇಟಿ ಮಾಡಿ ಪ್ರಸುತ್ತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತ್ತು. ಇಂದು ಪ್ರತಿಭಟನೆ ನಡೆಯುವಲ್ಲಿಗೆ ಬೈಂದೂರು ಮತ್ತು ಪುತ್ತೂರು ಶಾಸಕರು ಆಗಮಿಸಿ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಭರವಸೆ ನೀಡಿದರು. ಎಂಪಿಎಂ ಷಣ್ಮುಖಯ್ಯ ಅವರು ಸಂಘಟನೆಯ ಪ್ರಧಾನ ಸಂಚಾಲಕರಾಗಿದ್ದಾರೆ
























































































































































































