ದೊಡ್ಡಬಳ್ಳಾಪುರ: ತಾಲೂಕಿನ ಹಿರಿಯ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ(78) ಡಿಸೆಂಬರ್15ರ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮಧ್ಯಾಹ್ನ 11 ಗಂಟೆಗೆ ಪ್ರಾರ್ಥಿವ ಶರೀರ ತೂಬಗೆರೆಗೆ ಬರಲಿದೆ. ಮಾಜಿ ಶಾಸಕ ನರಸಿಂಹ ಸ್ವಾಮಿ ಅವರ ನಿಧನಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಇದರ ನಿವೃತ್ತ ಸಹಾಯಕ ಆಯುಕ್ತ ಎಸ್. ಕೆ. ಸತ್ಯನಾರಾಯಣ ಬೆಂಗಳೂರು ಅವರು ಸಂತಾಪ ಸೂಚಿಸಿದ್ದಾರೆ
























































































































































































