ಮೈಸೂರು: ಎನ್. ವಿ. ರಮೇಶ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ನಮನ ಕಲಾ ಮಂಟಪದಲ್ಲಿ ರಾಜ್ಯದ ಲೇಖಕರಿಗೆ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಲೇಖಕರಿಗೆ “ನಾನೇಕೆ ಬರೆಯುತ್ತೇನೆ ” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣವು ಡಿ. 1ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಲೇಖಕಿ , ಕವಯತ್ರಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಮಾತನಾಡಿ ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿ ಬರುವಂತೆ ಬರಹ ಓಡಿದಷ್ಟು ಮತ್ತೆ ಮತ್ತೆ ಓದಬೇಕು ಎನ್ನುವ ಹಂಬಲ ಹುಟ್ಟಬೇಕೆ ಹೊರತು ಈ ಕೃತಿ ಯಾಕಾದರೂ ಓದುತ್ತಿದ್ದೇನೆ ಎಂಬ ಭಾವನೆ ಓದುಗರಿಗೆ ಮೂಡಬಾರದು ಎಂದ ಅವರು ಭಾವನೆ ಕಲ್ಪನೆಗಳ ಆಗರ ಬರಹ ಎಂದು ಹೇಳಿದರು.

ಮುಂದುವರಿದು ಮಾತನಾಡುತ್ತಾ, ತನ್ನ ಬರಹಕ್ಕೆ ಹಲವಾರು ಕಿರಿಯ,ಹಿರಿಯ ಸಾಹಿತಿಗಳ ಜೀವನ ಗಾತೆ ಪ್ರೇರಣೆ ಎಂದು ಅವರು ಹೇಳಿದರು.
ಕೊಪ್ಪಳದ ಲೇಖಕಿ ಅನುಸೂಯ ಜಹಾಂಗೀರ್ ಧಾರ್ ಅಧ್ಯಕ್ಷತೆ ವಹಿಸಿದ್ದರು
ವೇದಿಕೆಯಲ್ಲಿ ಎನ್.ವಿ.ರಮೇಶ್, ಸ್ಮೈಲ್ ಶಿವ್, ಲೇಖಕ ದಾ.ಕೊಲ್ಚಪ್ಪೇ ಗೋವಿಂದ ಭಟ್. ಕಾದಂಬರಿಕಾರ ಪೀ .ವಿ. ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
























































































































































































