ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ‘ಹೇ ಪ್ರಭು’ ಬಹುಭಾಷಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ ಸುಧಾಕರ್ ಶೆಟ್ಟಿ.

113.2K Views 24 Nov 2024

ಬೆಂಗಳೂರು: ವೆಂಕಟ್ ಭಾರಧ್ವಜ್ ನಮ್ಮ ದೇಶ ಕಂಡ ಪ್ರತಿಭಾವಂತ ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದಾರೆ. ಇವರ ನಿರ್ದೇಶನದ ಭಾರೀ ನಿರೀಕ್ಷೆಯ ಹೇ ಪ್ರಭು ಬಹುಭಾಷಾ ಚಿತ್ರವಾಗಿದೆ. ಇದರಲ್ಲಿ ಮೂಡಬಿದ್ರೆ ಮೂಲದ ಪುಣೆಯ ಹೊರನಾಡ ಕನ್ನಡ ರತ್ನ,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಗ್ರಾಮೀಣ, ಆರೋಗ್ಯ ಮತ್ತು ವೈದ್ಯಕೀಯ ಸಂದೇಶ ಸಾರುವ ಚಿತ್ರವಾಗಿರುವುದ್ದರಿಂದ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಾಗಿದೆ.

ಪ್ರಸಿದ್ದ ವೈದ್ಯ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ವೈದ್ಯಕಿಯ ಜಗತ್ತು ಸೇರಿದತೆ ಕರ್ನಾಟಕ, ಮಹಾರಾಷ್ಟ್ರದ ಜನ ‘ಹೇ ಪ್ರಭು’ ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

Read More News

Scroll to Top