ಮಂಗಳೂರು: ಭಾರತೀಯ ವೈದ್ಯಕೀಯ ಸಂಘ (ರಿ), ಮಂಗಳೂರು ಘಟಕ ಇದರ ವತಿಯಿಂದ ಡಾ. ಅವಿನ್ ಆಳ್ವ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ (ರಿ) ಮತ್ತು ಇವರ ತಂಡದ ನೇತೃತ್ವದಲ್ಲಿ “ವೈದ್ಯರ ನಡೆ ತಾಂಡಾದ ಕಡೆ” (ಬುಡಕಟ್ಟು ಜನಾಂಗದ ಆರೋಗ್ಯ ತಪಾಸಣೆ) ಎಂಬ ವಿಶಿಷ್ಟ ಕಾರ್ಯಕ್ರಮ ಇಂದು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ನಡೆಯಿತು.

ಈ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಸ್ಥಳೀಯರು, ಸಾರ್ವಜನಿಕರು ಭಾಗವಹಿಸಿ, ಚಿಕಿತ್ಸೆಯ ಪ್ರಯೋಜನ ಪಡೆದು ಕೊಂಡರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ, ವಿದ್ಯಾ ಸರಸ್ವತಿ ಮಹಿಳಾ ಮಂಡಲ, ವಿದ್ಯಾ ಸರಸ್ವತಿ ಸ್ವಸಹಾಯ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.



























































































































































































