ಮಂಗಳೂರು: ದ.ಕ. ಜಿಲ್ಲಾ ನಾಮಫಲಕ ಕಲಾಕಾರರ ಸಂಘದ ಸದಸ್ಯರಿಗೆ ಅಪಘಾತ ವಿಮಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ದಿನಾಂಕ ಆಗಸ್ಟ್ 12 ರಂದು ಬಬ್ಬುಸ್ವಾಮಿ ದೈವಸ್ಥಾನ ಕೊಪ್ಪಳ ಹಿತ್ಲು ಕುದ್ರೋಳಿಯಲ್ಲಿ ಜರಗಿತು.
ಈ ಅಪಘಾತ ವಿಮಾ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಅಪಘಾತ ಯಾವಾಗ ಸಂಭವಿಬಹುದು ಎಂಬುವುದು ತಿಳಿಯದು, ಆರೋಗ್ಯ ವಿಮೆಯ ಸೌಲಭ್ಯವು ಆಸ್ಪತ್ರೆಯ ವೆಚ್ಚವನ್ನು ಭರಿಸಬಹುದು. ಆದರೆ ಅಪಘಾತ ಸಂಭವಿಸಿ ದುಡಿಯಲಾಗದಿದ್ದರೆ ಅಥವಾ ಮರಣ ಸಂಭವಿಸಿದರೆ ಈ ಅಂಚೆ ಇಲಾಖೆಯ ವಿಮಾ ಸೌಲಭ್ಯವು ತಮ್ಮ ಅವಲಂಬಿತರಿಗೆ ಪ್ರಯೋಜನವಾಗಬಹುದು ಎಂದು ಪ್ರಾಸ್ತಾವಿಕ ಮಾತಿನಲ್ಲಿ ಕೆ.ಮಾಧವ ಕೋಟ್ಯಾನ್‌ರವರು ನುಡಿದರು.
ಉದ್ಯಮಿ ಚಂಪಾಲಾಲ್ (ಮಹಾಲಕ್ಷ್ಮಿ ಸ್ಟಿಕ್ಕರ್ಸ್) ವಿಮಾ ಪ್ರಮಾಣ ಪತ್ರ ವಿತರಿಸಿದರು. ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಆಚಾರ್ಯ ಪ್ರಾರ್ಥಿಸಿದರು. ದಯಾನಂದ್ ಕಾರ್ಯಕ್ರಮ ನಿರೂಪಿಸಿಸಿದರು.



























































































































































































