ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ. ಕ್ಯಾಪ್ಟನ್ ಚೌಟರ ಪರ ವ್ಯಾಪಕ ಜನ ಶ್ಲಾಘನೆ

114.9K Views 18 Jul 2024

ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಸಂಸದರ ವಿಶೇಷ ಕೋರಿಕೆಯ ಮೇರೆಗೆ ಸಚಿವರು ತುರ್ತಾಗಿ ಬಿಸಿ ರೋಡ್ ರೈಲ್ವೆ ಸ್ಟೇಷನ್ ಗೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಡಿವಿಷನಲ್ ರೈಲ್ವೆ ಮ್ಯಾನೇಜರ್ ಅವರನ್ನು ಕಳುಹಿಸಿ ನಿಧಾನಗತಿಯ ಹಾಗೂ ಕಳಪೆ ಕಾಮಗಾರಿಯ ಬಗ್ಗೆ ವೀಕ್ಷಿಸಿ ರಿಪೋರ್ಟ್ ನೀಡಲು ಆದೇಶಿಸಿದ್ದರು.
ಅದರಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸಂಸದರ ಈ ರೀತಿಯ ತುರ್ತು ಕಾರ್ಯವೈಖರಿಗೆ ಎಲ್ಲ ಕಡೆಯಿಂದಲೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತಿದ್ದಾರೆ

Read More News

Scroll to Top