ಜೇವರ್ಗಿಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ತ್ಯ ಕಾರ್ಯಕ್ರಮ.

102.3K Views 13 Jun 2024

ಜೇವರ್ಗಿ : ಜೇವರ್ಗಿ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರ, ನೆಲೋಗಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂದೇವಾಲ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಆವರಣದಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ* (RKSK) ದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಪ್ರಯುಕ್ತ ಅಂತರರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಹಮ್ಮಿಕೊಂಡಿತ್ತು. ಸದರಿ ಕಾರ್ಯಕ್ರಮದಲ್ಲಿ ಮಂದೇವಾಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ ಗೌಡ ಪಾಟೀಲ್ ರವರ ಜೊತೆಗೆ ಆರೋಗ್ಯ ಸಿಬ್ಬಂದಿಗಳು ಮತ್ತು KHPT ಸಿಬ್ಬಂದಿಗಳು ಸ್ನೇಹ ಕ್ಲಿನಿಕ್ ಪೋಸ್ಟರಗಳನ್ನು ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕಾರ್ಯಕ್ರಮಕ್ಕೆ ಬಂದ ಅತಿಥಿ ಗಣ್ಯರಿಗೆ ಕೆಂಪು ಬಣ್ಣದ ರಿಬ್ಬನ್ ಕಟ್ಟುವುದರ ಮೂಲಕ ಸ್ವಾಗತಿಸಿದರು.

ಮಂದೇವಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರೇಣುಕಾದೇವಿ ದೇವರಮನಿರವರು ಹೆಣ್ಣು ಮಕ್ಕಳಲ್ಲಿ ಆಗುವ ಮಾಸಿಕ ಋತುಶ್ರಾವದ (ಮುಟ್ಟು) ಬಗ್ಗೆ ಕಿಶೋರಿಯರಿಗೆ ಚರ್ಚೆ ಮೂಲಕ ಸಮಗ್ರ ಮಾಹಿತಿ ನೀಡಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ವ್ಯಯಕ್ತಿಕ ಶುಚಿತ್ವದ ಕುರಿತು RKSK ಆಪ್ತ ಸಮಾಲೋಚಕರಾದ ನಿಂಗಣ್ಣಗೌಡ. ಎಸ್. ಪಾಟೀಲ್ ರವರು ತಿಳಿಸಿದರು. ಅದೇ ರೀತಿಯಾಗಿ ,KHPT ಸಂಸ್ಥೆಯ ಸಮುದಾಯ ಸಂಘಟಕರಾದ ಮತಿ ಮೇಘಾ ಅವರು ನಿರೂಪಣೆ ಮಾಡುತ್ತಾ ಹದಿಹರೆಯದ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಮತಿ ಲಕ್ಷ್ಮೀ ಮುದಗಲ್ ರವರು ವಂದಿಸಿದರು. ಸದರಿ ಕಾರ್ಯಕ್ರಮದಲ್ಲಿ PHCO ರಾದ ಶ್ರೀಮತಿ ಚಂದ್ರಕಲಾ ಹಚ್ಚಡ KHPT ಸಮುದಾಯ ಸಂಘಟಕಾರದ ಮತಿ ಈರಮ್ಮ ,ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಮತಿ ದಾನಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಕಿಶೋರಿಯರ ಪಾಲಕರು ಮತ್ತು ಪೋಷಕರು ಭಾವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..

Read More News

Scroll to Top