ಮೇ 12 ರ ಆದಿತ್ಯವಾರ ಸಂಜೆ 4ಕ್ಕೆ ಪಡೀಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ. ಇಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ: ಮಾಲಕ ಪ್ರಕಾಶ್ ಕೆ. ಪಾಂಡೇಶ್ವರ.

107.7K Views 11 May 2024

ಮಂಗಳೂರು : ಪಡೀಲ್ ಬಳಿ ಇರುವ ಪಡೀಲ್ ಗೇಟ್‌ನಲ್ಲಿ ಮೇ 12ರಂದು ಸಂಜೆ 4 ಗಂಟೆಗೆ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿದೆ.
ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಮಿಥುನ್ ರೈ, ವೈನ್ ಮರ್ಚಂಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ,ಡೈಜಿವರ್ಲ್ಡ್‌ನ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಶ್ರೀ ಡೆವಲಪರ್ಸ್‌ನ ಮಾಲಕ ಗಿರೀಶ್ ಎಂ. ಶೆಟ್ಟಿ ಕಟೀಲು, ಮನಪಾ ಸದಸ್ಯೆ ರೂಪಾಶ್ರೀ ಪೂಜಾರಿ, ಚಿತ್ರನಟ ನವೀನ್ ಡಿ.ಪಡೀಲ್ ಭಾಗವಹಿಸಲಿದ್ದಾರೆ ಎಂದು ಮೆಹಂದಿ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
ಮೆಹಂದಿ ರೆಸ್ಟೋರೆಂಟ್‌ನಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಅರ್ಗಾನಿಕ್ (ಸಾವಯವ) ಉತ್ಪನ್ನಗಳನ್ನೇ ಆಹಾರ ಪದಾರ್ಥಗಳಿಗೆ ಬಳಸುವು ದರಿಂದ ನೈಜ ರುಚಿಯ ಆಸ್ವಾದನೆ ಗ್ರಾಹಕರಿಗೆ ಆಗುತ್ತದೆ. ಇಲ್ಲಿ ಉಪ್ಪಿನಿಂದ ಹಿಡಿದು ಎಲ್ಲ ಆಹಾರ ವಸ್ತುಗಳು ಸಾವಯವ ಆಗಿರುವುದರಿಂದ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಉಪಯೋಗಿಸುವುದಿಲ್ಲ.
ವಿವಿಧ ವಿಭಾಗಗಳು:
‘ಮೆಹಂದಿ’ ರೆಸ್ಟೋರೆಂಟ್‌ನಲ್ಲಿ ಕೌಟುಂಬಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕ್ಯಾಬಿನ್‌ಗಳಿವೆ. ರೂಫ್ ಟಾಪ್, ಓಪನ್ ಗಾರ್ಡನ್ ಇದೆ. ತೋಟದ ಮಧ್ಯೆ ಕುಳಿತು ನೈಜ ಆಹಾರದ ಸ್ವಾದವನ್ನು ಸವಿಯಬಹುದು. ಯಾವುದೇ ಸಮಸ್ಯೆಯಿಲ್ಲದೆ ಆಹಾರದ ಸವಿಯೊಂದಿಗೆ ಕಳೆಯಬಹುದು. ಕಾರ್ಪೋರೆಟ್ ಸಂಸ್ಥೆಗಳು ಮೀಟಿಂಗ್, ಸಭೆ ಸಮಾರಂಭಗಳನ್ನು ನಡೆಸಲು ಇಚ್ಚಿಸಿದರೆ ಅವರಿಗೆ ಬೇಕಾದ ವ್ಯವಸ್ಥೆಯೂ ಇದೆ. ಎ.ಸಿ ಮತ್ತು ನಾನ್ ಎಸಿ ವಿಭಾಗಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ವಹಿಸಲ್ಪಡುತ್ತದೆ. ಇಲ್ಲಿ ಸಂಪೂರ್ಣ ಸಸ್ಯಾಹಾರಿ ವಿಭಾಗವೂ ಇದೆ. ಸಮುದ್ರ ಖಾದ್ಯವನ್ನು ಸವಿಯುವವವರಿಗೆಂದೇ ಪ್ರತ್ಯೇಕ ವಿಭಾಗವಿದೆ.
ಆಹ್ಲಾದಕರ ವಾತಾವರಣ:
‘ಮೆಹಂದಿ’ ರೆಸ್ಟೋರೆಂಟ್ ಕೇವಲ ಖಾದ್ಯ ಸವಿಯಲು ಮಾತ್ರವಲ್ಲ, ದಕ್ಷಿಣ ಭಾರತದ ಸಂಸ್ಕೃತಿ, ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ವಿನ್ಯಾಸದ ಕಟ್ಟಡದಲ್ಲಿ ನೆಲೆಗೊಂಡಿರುವ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಹಸಿರಿನ ಮಿನುಗು, ಶಾಂತಿಯುತ, ಅಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾಗಿದೆ. ಕೈಗೆಟಕುವ ಬೆಲೆಯಲ್ಲಿ ಅಧಿಕೃತ ಸುವಾಸನೆಯೊಂದಿಗೆ ಇಲ್ಲಿನ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಪಾಂಡೇಶ್ವ‌ರ್ ತಿಳಿಸಿದ್ದಾರೆ.

Read More News

Scroll to Top