ಕಟೀಲ್ ಬಗ್ಗೆ ಪದ್ಮರಾಜ್ ಆರ್.ಹೇಳಿದ್ದೇನು?

108.8K Views 29 Apr 2024

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು : ಏಪ್ರಿಲ್ 26 ಶುಕ್ರವಾರ ಲೋಕಸಭೆ ಚುನಾವಣೆ ದಿವಸ ಲೇಡಿಹಿಲ್ ನ ಏಲೋಶಿಯಸ್ ವಿದ್ಯಾ ಸಂಸ್ಥೆ ಬಳಿ ಮತದಾನಕ್ಕೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರನ್ನು ಕಂಡಾಗ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಕಟೀಲ್ ಕಾಲಿಗೆ ನಮಸ್ಕರಿಸಿದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ವೈರಲ್ ಆಯಿತು.

ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಇದರಲ್ಲಿ ತಪ್ಪೇನಿದೆ? ನಳಿನ್ ಕುಮಾರ್ ಕಟೀಲ್ ಅವರು ಒಬ್ಬ ಉತ್ತಮ ಮತ್ತು ಪ್ರಬುದ್ಧ ರಾಜಕಾರಣಿ. ನನಗಿಂತ ಹಿರಿಯರು. ಹಿರಿಯರ ಕಾಲಿಗೆ ನಮಸ್ಕರಿಸಿದರೆ ತಪ್ಪೇನಿದೆ? ಇಲ್ಲಿ, ಪಕ್ಷ ಭೇದವಿಲ್ಲ. ನನಗೆ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಅಪಾರ ಗೌರವವಿದೆಯೆಂದು ಪದ್ಮರಾಜ್ ಅವರು ಹೇಳಿದ್ದಾರೆ. 2009 ರಲ್ಲಿ ಬಿ. ಜನಾರ್ಧನ ಪೂಜಾರಿಯವರ ಎದುರು ನಳಿನ್ ಕುಮಾರ್ ಕಟೀಲ್ ಅವರು ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಕಟೀಲ್ ಅವರು ಪೂಜಾರಿಯವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಅವಾಗ ಕಟೀಲ್ ಪರ ಭಾರೀ ಜನ ಅಲೆ ಎದ್ದು ಕಟೀಲ್ ಗೆದ್ದಿದ್ದರು. ಪದ್ಮರಾಜ್ ಅವರು ಇದೇ ಫಾರ್ಮುಲಾವನ್ನು ಬಳಸಿರಬಹುದೇ ಅನ್ನುವುದು ಬಹು ಚರ್ಚಿತ ಪ್ರಶ್ನೆಯಾಗಿ ಉಳಿದಿದೆ. ಯಾವುದಕ್ಕೂ ಜೂನ್ 4 ರ ಫಲಿತಾಂಶ ಎಲ್ಲದ್ದಕ್ಕೂ ಉತ್ತರ ನೀಡಲಿದೆ.

Read More News

Scroll to Top