ಕರ್ನಾಟಕ ರಾಜ್ಯ ಕಂಡ ಭ್ರಷ್ಟಾಚಾರ ರಹಿತ ಅತ್ಯುತ್ತಮ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಗೆಲ್ಲಲೇ ಬೇಕಾದ ಎಂಪಿ ಅಭ್ಯರ್ಥಿ. ಈ ಬಗ್ಗೆ ಜನ ಸಮೀಕ್ಷೆ ಹೇಗಿದೆ?

95.5K Views 11 Apr 2024

ಸಮೀಕ್ಷಾ ವರದಿ : ಡಾ. ಅಶೋಕ್ ಶೆಟ್ಟಿ. ಬಿ. ಎನ್.

ಉಡುಪಿ -ಚಿಕ್ಕ ಮಗಳೂರು:ಜಯಪ್ರಕಾಶ್ ಹೆಗ್ಡೆ ಯವರು ನಮ್ಮ ರಾಜ್ಯ ಕಂಡ ಅತ್ಯುತ್ತಮ ಜನ ನಾಯಕ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣಿ ಹಾಗೂ ಅವರು ಮುಖ್ಯಮಂತ್ರಿ ಹುದ್ದೆಗೂ ಅರ್ಹರು ಎಂದು ಕೆಲ ವರ್ಷಗಳ ಹಿಂದೆ ಮಂಗಳೂರಿನ ಸಮಾರಂಭವೊಂದಕ್ಕೆ ಆಗಮಿಸಿದ ವೇಳೆ ಹೆಸರಾಂತ ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದರು. ಇದು ವಾಸ್ತವ ಸತ್ಯ. ಜಯಪ್ರಕಾಶ್ ಹೆಗ್ಡೆಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದವರು. ಇಂಥ ಒಂದು ಸಾಧನೆಯನ್ನು ಮಾಡಿದವರು ಕರ್ನಾಟಕ ರಾಜ್ಯದಲ್ಲಿ ಯಾರೂ ಇಲ್ಲ. ತನ್ನ ವೈಯಕ್ತಿಕ ವರ್ಚಸ್ಸಿನಿಂದ ಜನ ಮನ್ನಣೆ ಗಳಿಸಿ ಶಾಸಕರಾಗಿ, ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ಜಯಪ್ರಕಾಶ್ ಹೆಗ್ಡೆಯವರು 2011ರಲ್ಲಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಉಡುಪಿ -ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದವರು. ಇದೀಗ ಅವರು ಮತ್ತೇ ಇದೇ ಕ್ಷೇತ್ರದಿಂದ ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಅವರ ಗೆಲುವು ಅತ್ಯಗತ್ಯವಾಗಿದೆ ಮತ್ತು ಅನಿವಾರ್ಯವೂ ಆಗಿದೆಂದು ಇಲ್ಲಿನ ಜನಾಭಿಪ್ರಾಯಗಳಲ್ಲಿ ಸ್ಪಷ್ಟವಾಗುತ್ತಿದೆ. ಈ ಹಿಂದಿನ ಎಂಪಿ ಮತ್ತು ಕೇಂದ್ರದ ಮಂತ್ರಿ ಶೋಭಾ ಕರಂದ್ಲಾಜೆಯವರು ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಹೆಚ್ಛೇಕೆ ಅವರು ಈ ಕಡೆ ಮುಖವೆತ್ತಿಯೂ ನೋಡಲಿಲ್ಲ. ಜನ ವಿರೋಧದ ಹಿನ್ನಲೆಯಲ್ಲಿ ಅವರು ಬೆಂಗಳೂರು ಉತ್ತರಕ್ಕೆ ಕ್ಷೇತ್ರ ಪಲಾಯನ ಮಾಡಬೇಕಾಯಿತು . ಇದು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದ್ದೂ, ಒಟ್ಟು 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಇನ್ನು 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದೆ. ಬಿಜೆಪಿಯವರಿಗೆ ಮೋದಿ ಅಲೆ ಮೇಲೆ ಹೆಚ್ಚಿನ ನಂಬಿಕೆ ಇದ್ದರೆ, ಜಯಪ್ರಕಾಶ್ ಹೆಗ್ಡೆಯವರಿಗೆ ಅವರ ವೈಯಕ್ತಿಕ ವರ್ಚಸ್ಸು, ಅವರು ಸಲ್ಲಿಸಿದ ಅಭಿವೃದ್ಧಿ ಕೆಲಸ ಕಾರ್ಯಗಳೇ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೈಕೋರ್ಟ್ ವಕೀಲರಾಗಿ, ಅನುಭವಿ ರಾಜಕಾರಣಿಯಾಗಿ, ಜಾತ್ಯತೀತ ನಾಯಕರಾಗಿ, ನುಡಿದಂತೆ ನಡೆದ ಜನ ನೇತಾರರಾಗಿ, ಅಜಾತಶತ್ರುವಾಗಿ ಜಯಪ್ರಕಾಶ್ ಹೆಗ್ಡೆಯವರು ಸಮರ್ಥ ಅಭ್ಯರ್ಥಿಯೆಂದು ಜನ ಸಮೀಕ್ಷೆ ವೇಳೆ ಜನ Mp mlas news tv ಗೆ ತಿಳಿಸಿದ್ದಾರೆ.

Read More News

Scroll to Top