ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಮಾಜಿ ಬಿ. ರಮಾನಾಥ ರೈ ಅವರಿಗೆ ಅಭಿನಂದನೆ

90.5K Views 1w ago

ಬಂಟ್ವಾಳ -ದಿನಾಂಕ 01-10-2026 ರಂದು ಬೆಂಗಳೂರಿನ ವಸಂತನಗರದಲ್ಲಿ ರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಲು ಹಾಗೂ ಸಮುದಾಯದ ಮೂಲಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸರ್ಕಾರದಿಂದ ಅನುದಾನ ಘೋಷಣೆಯಾಗಲು ಮೂಲ ಕಾರಣಕರ್ತರಾದ, ಆದಿದ್ರಾವಿಡ ಸಮುದಾಯದ ಭರವಸೆಯ ಬೆಳಕಾಗಿರುವ ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರಾದ ಬಿ. ರಮಾನಾಥ ರೈ ಅವರನ್ನು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಕೃತಜ್ಞತಾಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಆದಿದ್ರಾವಿಡ ಸಮುದಾಯದ ಮುಖಂಡರಾದ ಶ್ರೀನಿವಾಸ ಅರ್ಬಿಗುಡ್ಡೆ, ರಾಜ ಚೆಂಡ್ತಿಮಾರ್, ಮೋಹನ್ ಚೆಂಡ್ತಿಮಾರ್, ಚಂದ್ರಹಾಸ ಅರ್ಬಿಗುಡ್ಡೆ, ರಾಮ ಚೆಂಡ್ತಿಮಾರ್, ಮಾಧವ್ ವಿ.ಎಸ್ ಕಡೇಶಿವಾಲಯ, ಸಂತೋಷ್ ಭಂಡಾರಿಬೆಟ್ಟು, ಪ್ರಕಾಶ್ ಅರ್ಬಿಗುಡ್ಡೆ ಹಾಗೂ ಲಕ್ಷ್ಮಣ್ ಚೆಂಡ್ತಿಮಾರ್ ಅವರು ಉಪಸ್ಥಿತರಿದ್ದರು.

Read More News

Scroll to Top