ಮಂಗಳೂರು :ನಗರದ ರೂಪಾ ಹೋಟೆಲ್ ಎದುರುಗಡೆ, ಬಲ್ಮಠ ರಸ್ತೆಯ 14-2-103/12 ನಂಬರಿನ ಸಣ್ಣ ಕಚೇರಿಯಲ್ಲಿ ಒಂದು ದೊಡ್ಡ ಕನಸು ಹುಟ್ಟಿಕೊಂಡಿತು. ಆ ಕನಸು ಕಂಡವರು ಹಾಜಿ ಬಿ. ಎಂ. ಶರೀಫ್ ಜೋಕಟ್ಟೆ ಮತ್ತು ಮುಮ್ತಾಜ್ ಶರೀಫ್* ದಂಪತಿಗಳು. ಅವರ ಕನಸಿನ ಹೆಸರೇ *“ವೈಟ್ ಸ್ಟೋನ್ ಡೆವಲಪರ್ಸ್”*.




ಇಂದು ವೈಟ್ ಸ್ಟೋನ್ ಎಂದರೆ ಮಂಗಳೂರಿನಲ್ಲಿ ನಂಬಿಕೆಯ ಇನ್ನೊಂದು ಹೆಸರು. ಪಾರ್ಟನರ್ಶಿಪ್ ಸಂಸ್ಥೆಯಾಗಿ 2017 ರಲ್ಲಿ GST ನೋಂದಣಿಯಾದರೂ, ಅದರ ಬೇರುಗಳು ತುಂಬಾ ಆಳವಾಗಿವೆ.
*ಬಿಲ್ಡರ್ ಅಲ್ಲ, ಒಬ್ಬ ಮಾನವತಾವಾದಿ*
ಹಾಜಿ ಬಿ. ಎಂ. ಶರೀಫ್ ಹೋಕಟ್ಟೆ ಅವರನ್ನು ಜನರು “ವೈಟ್ ಸ್ಟೋನ್ ಶರೀಫ್” ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರು ಕಟ್ಟಿದ್ದು ಕೇವಲ ಕಟ್ಟಡಗಳಲ್ಲ, ಸಾವಿರಾರು ಕುಟುಂಬಗಳ ಕನಸುಗಳನ್ನು.
ಆದರೆ, ಅವರ ನಿಜವಾದ ಎತ್ತರ ಗೊತ್ತಾಗುವುದು ಅವರ ಸಮಾಜ ಸೇವೆಯಲ್ಲಿ.
*41 ಲಕ್ಷದ ವಿದ್ಯಾದಾನ – 272 ವಿದ್ಯಾರ್ಥಿಗಳ ಬಾಳಿಗೆ ಬೆಳಕು*
ಇತ್ತೀಚೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ, *ವೈಟ್ ಸ್ಟೋನ್ ಶರೀಫ್ ಚಾರಿಟೇಬಲ್ ಟ್ರಸ್ಟ್* ವತಿಯಿಂದ 272 ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಬರೋಬ್ಬರಿ *41 ಲಕ್ಷ ರೂಪಾಯಿ ಸ್ಕಾಲರ್ಶಿಪ್* ವಿತರಿಸಲಾಯಿತು.
ಪುತ್ತೂರು ಕಮ್ಯುನಿಟಿ ಸೆಂಟರ್ ಮತ್ತು ಟೀಂ ಬಿ-ಹ್ಯೂಮನ್ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, MBBS ನ 79, BDS ನ 25, BAMS ನ 26, CA ಯ 85, Law ನ 35 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 836 ವಿದ್ಯಾರ್ಥಿಗಳಿಗೆ ನೆರವಾಗಲಾಗುತ್ತಿದೆ.
ವಿಶೇಷ ಏನೆಂದರೆ, ಈ ಸಹಾಯ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ಹಾಜಿ ಬಿ. ಎಂ.ಶರೀಫ್ ಜೋಕಟ್ಟೆ ಅವರು ಆಸರೆಯಾಗಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ *ವೈಟ್ ಸ್ಟೋನ್ ಗ್ರೂಪ್ CEO ಮತ್ತು ಟೀಂ ಬಿ-ಹ್ಯೂಮನ್ ಅಧ್ಯಕ್ಷ ಹಾಜಿ ಬಿ.ಎಂ. ಶರೀಫ್ ಜೋಕಟ್ಟೆ ಅವರು ಹೇಳಿದರು – “ಸಮುದಾಯದ ಅಭಿವೃದ್ಧಿಯೇ ನಮ್ಮ ಟ್ರಸ್ಟ್ನ ಗುರಿ. ಈ ವರ್ಷ 272 ವಿದ್ಯಾರ್ಥಿಗಳಿಗೆ ನೆರವಾಗಲು ನಮಗೆ ಅತೀವ ಸಂತೋಷವಾಗಿದೆ” ಎಂದು.
*ಬಿಳಿ ಕಲ್ಲಿನಂತೆ ಶುದ್ಧ ಮನಸ್ಸು*
ವೈಟ್ ಸ್ಟೋನ್ ಎಂಬ ಹೆಸರಿನಂತೆ ಹಾಜಿ ಬಿ. ಎಂ.ಶರೀಫ್ ಜೋಕಟ್ಟೆ ಅವರ ಮನಸ್ಸು ಕೂಡ ಬಿಳಿ ಕಲ್ಲಿನಂತೆ ಶುದ್ಧ. ಕಟ್ಟಡ ಕಟ್ಟುವಾಗ ಗುಣಮಟ್ಟದಲ್ಲಿ ರಾಜಿ ಇಲ್ಲ, ದಾನ ಮಾಡುವಾಗ ಪ್ರಚಾರದ ಹಂಬಲವಿಲ್ಲ.
ಬಲ್ಮಠದಿಂದ ಆರಂಭವಾದ ಅವರ ಪಯಣ ಇಂದು ಮಂಗಳೂರಿನ ಹೆಮ್ಮೆಯಾಗಿ ಬೆಳೆದಿದೆ. ಅವರು ಕಟ್ಟುವ ಪ್ರತಿ ಮನೆಯಲ್ಲಿ ಒಂದು ಕುಟುಂಬದ ನೆಮ್ಮದಿ ಇದೆ, ಅವರು ನೀಡುವ ಪ್ರತಿ ಸ್ಕಾಲರ್ಶಿಪ್ನಲ್ಲಿ ಒಬ್ಬ ವಿದ್ಯಾರ್ಥಿಯ ಭವಿಷ್ಯವಿದೆ.
ಇಂತಹ ಸಾಧಕರನ್ನು ನಮ್ಮ ಕರಾವಳಿ ಎಂದಿಗೂ ಮರೆಯುವುದಿಲ್ಲ.


















































































































































































