ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ (KCDA ) ಇದರ 68ನೇ ವಾರ್ಷಿಕ ಮಹಾಸಭೆ

96.6K Views 1w ago

ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ 68ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ದೇರೆಬೈಲ್ ಚರ್ಚ್ ಹಾಲ್ ನಲ್ಲಿ ಸೆಪ್ಟೆಂಬರ್ 06 ರಂದು ನಡೆಯಿತು . ದಕ್ಷಿಣ ಕನ್ನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ (ರಿ ) SKDCDAಇದರ ಆತಿಥ್ಯ ವಹಿಸಿತ್ತು . ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 300ಕ್ಕೂ ಹೆಚ್ಚು ಪ್ರತಿನಿಧಿಗಳು , ಜಿಲ್ಲಾ ಸಂಘಗಳ ಅದ್ಯಕ್ಷರು , ಪದಾಧಿಕಾರಿಗಳೂ ಈ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ದ ಅದ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಇವರು ಸಂಘದ ಕ್ರಿಯಾಶೀಲ ಚಟುವಟಿಕೆಗಳು ಹಾಗೂ ನಡೆದು ಬಂದ ಹಾದಿಯನ್ನು ಪ್ರಾಸ್ತಾ ವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಶಶಿಧರ ಪಳಂಗಾಯ ಇವರು ಕರಾವಳಿಯ ಸಾಂಪ್ರದಾಯಿಕ ವೈಶಿಷ್ಟ್ಯ , ಶ್ರೀಮಂತ ಪರಂಪರೆ , ಸಂಸ್ಕ್ರತಿ , ಕಲೆ, ಸಾಹಿತ್ಯ, ವೈದ್ಯಕೀಯ ಸೇವಾ ಪರಂಪರೆಯನ್ನು ಸಭೆ ಮುಂದಿರಿಸಿದರು
ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ ದ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ.ಕೆ. ಜೀವನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಕರಾವಳಿಯ ಫಲವಂತಿಕೆಯ ಸಂಕೇತವಾದ ಭತ್ತ ತುಂಬಿದ ಕಳಸದಲ್ಲಿ ತೆಂಗಿನ ಕೋಡನ್ನು ತೆರೆಯುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆಯನ್ನು ವೇದಿಕೆಯಲ್ಲಿ ನೀಡಲಾಯಿತು . ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತ ಅನಾವರಣ ಗೊಳಿಸಲಾಯಿತು
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ ದ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ .ಕೆ ಜೀವನ್ , ಉಪಾಧ್ಯಕ್ಷರಾದ ಶ್ರೀ ಬಿ. ಕೆ ಪ್ರಸನ್ನ ಕುಮಾರ್ , ಶ್ರೀ ಶಿವರಾಜ್ ಪಾಟೀಲ್ , ಖಜಾಂಚಿ ಬಿ.ಉಮೇಶ್ , ಸಹ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಕೆಳಗಾರ್ , ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್ ಎಸ್ ಬುರುಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಹಾಗೂ ಕಾರ್ಯದರ್ಶಿ ಶ್ರೀ ಡಾ. ಎ. ಕೆ. ಜಮಾಲ್.ಜಮಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಧನ್ಯವಾದ ಸಮರ್ಪಿಸಿದರು. ಶ್ರೀ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು
ನಂತರ ನಡೆದ 68ನೇ ವಾರ್ಷಿಕ ಮಹಾಸಭೆಯ ಸರ್ವಾಧ್ಯಕ್ಷತೆಯನ್ನು ವಹಿಸಿದ KCDA ಇದರ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿಯವರು ಪ್ರಸ್ತುತ ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಸಮಾಜದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಘದ ವಾರ್ಷಿಕ ಲೆಕ್ಕಪತ್ರ ವನ್ನು ಸಭೆಯ ಮುಂದಿರಿಸಿ ಅನುಮೋದನೆ ಪಡೆಯಲಾಯಿತು . ಔಷಧಿ ವ್ಯಾಪಾರಿಗಳಾಗಿ ಸಾಮಾಜಿಕ ಅಭ್ಯುದಯಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ಮೂವರು ಹಿರಿಯ ಫಾರ್ಮಸಿಸ್ಟ್ ಗಳಾದ
1ಶ್ರೀ ಸದಾನಂದ ಶೆಟ್ಟಿ, ಗಣೇಶ್ ಮೆಡಿಕಲ್ಸ್, ಮಂಗಳೂರು
2ಶ್ರೀ ಅಶೋಕ್ ವಿ. ಬಿಜ್ಜಲ್, ಅಶೋಕ್ ಮೆಡಿಕಲ್ ಸ್ಟೋರ್ಸ್, ಬಾಗಲಕೋಟೆ.
3ಶ್ರೀ ಕೆ. ಪ್ರಭಾಕರನ್, ಭಾರ್ಗವಿ ಫಾರ್ಮ್, ಮಂಡ್ಯ
“ಕೆಮಿಸ್ಟ್ ರತ್ನ ಪ್ರಶಸ್ತಿ-2026” ಪ್ರಧಾನ ಮಾಡಲಾಯಿತು , KCDA ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ. ಕೆ. ಜೀವನ್ ಔಷಧ ವ್ಯಾಪಾರದಲ್ಲಿರುವ ಸವಾಲುಗಳ ಸಮರ್ಪಕ ನಿರ್ವಹಣಾ ಮನವಿಯನ್ನು ಸಭೆಯ ಮುಂದಿರಿಸಿ ಕರ್ನಾಟಕ ಸರಕಾರದ ಆರೋಗ್ಯ ಮಂತ್ರಿಗಳಾದ ಶ್ರೀ ಯು.ಟಿ ಖಾದರ್ ರವರಿಗೆ ಸಲ್ಲಿಸುವುದಾಗಿ ತಿಳಿಸಿದರು. ರಾಜ್ಯದ ವಿವಿದೆಡೆಯಿಂದ ಭಾಗವಹಿಸಿದ ಪ್ರತಿನಿಧಿಗಳಿಗೆ ನೆನಪಿನ ಸ್ಮರಣಿಕೆ ನೀಡುವುದರೊಂದಿಗೆ 68ನೇ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು.

Read More News

Scroll to Top