ಮಂಗಳೂರು – ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸಕಾರ್ಯಗಳಿಂದ ಜನಾನುರಾಗಿಯಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ವೇದವ್ಯಾಸ ಕಾಮತ್ ಅವರಿಗೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಇಲ್ಲ ಎಂಬ ಮಹತ್ವದ ಮಾಹಿತಿ MP MLA*S NEWS ಗೆ ಸಿಕ್ಕಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣದಲ್ಲಿ ಜಿಎಸ್ ಬಿ ಅಭ್ಯರ್ಥಿ ಬದಲು ಬಂಟ ಅಭ್ಯರ್ಥಿಗೆ ಬಿಜೆಪಿಯಿಂದ ಎಂಎಲ್ ಎ ಟಿಕೆಟ್ ನೀಡಲಾಗುವುದು. ಈ ಕಾರಣಕ್ಕೆ ಜಿಎಸ್ ಬಿ ಸಮುದಾಯದ ವೇದವ್ಯಾಸ ಕಾಮತ್ ಅವರಿಗೆ ಟಿಕೆಟ್ ಇಲ್ಲ ಎಂಬ ಸ್ಪಷ್ಟ ಮಾಹಿತಿ ಹೊರ ಬಿದ್ದಿದೆ. ಪುತ್ತೂರಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರಿಗೆ ಬೆಂಬಲಿಸಿದ ಬಾಮಿ ಫ್ಯಾಮಿಲಿ ಅಂದರೆ ಜಿ ಎಸ್ ಬಿ ಸಮುದಾಯದ ಪ್ರಬಲ ಅಭ್ಯರ್ಥಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗುವುದೆಂದು ಮಾಹಿತಿ ಹೇಳಿದೆ.



















































































































































































