ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಸುವರ್ಣ ಆಯ್ಕೆ

97.1K Views 2w ago

ಮೂಲ್ಕಿ 93 ವರ್ಷದ ಇತಿಹಾಸ ಇರುವ ಮೂಲ್ಕಿಯ ಪ್ರತಿಷ್ಠಿತ ಬಿಲ್ಲವ ಸಮಾಜ ಸೇವಾ ಸಂಘದ 2026- 28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಅಧ್ಯಕ್ಷ ರಾಘವ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಮೂಲ್ಕಿ ಚಂದ್ರಶೇಖರ ಸುವರ್ಣ ರವರು ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಮೂಲ್ಕಿ ಯುವವಾಹಿನಿ ಘಟಕದ ಸ್ಥಾಪಕ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರೀಯ ಸಮಿತಿಯ ಮಾಜೀ ಅಧ್ಯಕ್ಷರಾಗಿ, ಮೂರ್ತೇದಾರ ಸೇವಾ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಕುದ್ರೋಳಿಯ ನವರಾತ್ರಿಯ ನವದುರ್ಗೆಯರ ವೈಭವದ ರುವಾರಿ ಅಗಿದ್ದಾರೆ.
ಪದಾಧಿಕಾರಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಉಪಾಧ್ಯಕ್ಷರಾಗಿ ಸತೀಶ್ ಅಂಚನ್ ಬಾಳೆಹಿತ್ಲು, ಇಂದಿರಾ ಸಿ. ಅಮೀನ್ ಕೊಲ್ಲೂರು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ವಿ. ಅಂಚನ್, ಜೊತೆ ಕಾರ್ಯದರ್ಶಿಯಾಗಿ ಜಯಸಿ ಸಿ. ಪೂಜಾರಿ ಮಾನಂಪಾಡಿ ಹಾಗೂ ನರೇಂದ್ರ ಕೆರೆಕಾಡು, ಕೋಶಾಧಿಕಾರಿಯಾಗಿ ಹರೀಂದ್ರ ಸುವರ್ಣ, ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕೋಟ್ಯಾನ್ ಮಾನಂಪಾಡಿ, ಆಯ್ಕೆಯಾಗಿದ್ದಾರೆ.

೦-೦

Read More News

Scroll to Top