MPMLA’S NEWS – FOREIN REPORT. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ಶ್ರೀಲಂಕಾ ತಮಿಳು ಯುವಕನಿಗೆ ಸೌದಿ ಕೋರ್ಟ್‌ನಿಂದ ಗಲ್ಲು ಶಿಕ್ಷೆ ಘೋಷಣೆ!

106.3K Views 3w ago

*ಕೊಲಂಬೊ/ಜೆದ್ದಾ (ವಿದೇಶಿ ವರದಿ):* ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಶ್ರೀಲಂಕಾ ಮೂಲದ ತಮಿಳು ಯುವಕನಿಗೆ ಸೌದಿ ಅರೇಬಿಯಾ ನ್ಯಾಯಾಲಯವು ಗಲ್ಲು ಶಿಕ್ಷೆ (ಮರಣದಂಡನೆ) ಘೋಷಿಸಿದೆ.

*ಆರೋಪಿ ವಿವರ:*
ಶಿಕ್ಷೆಗೆ ಒಳಗಾದ ಯುವಕನನ್ನು *ಸಿವರಾಸ ಅನೋಜನ್ (ಶಿವರಾಜನ್)* ಎಂದು ಗುರುತಿಸಲಾಗಿದೆ. ಶ್ರೀಲಂಕಾದ ಪೂರ್ವ ಪ್ರಾಂತ್ಯದ ಅಂಪಾರ ಜಿಲ್ಲೆಯ ಕಲ್ಮುನೈನ ನಾಟ್ಪಿಟ್ಟಿಮುನೈ ಗ್ರಾಮದವನು. ಕಳೆದ 9 ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿಗೆ ತೆರಳಿದ್ದನು.

*ಏನಾಗಿತ್ತು?*
ಶ್ರೀಲಂಕಾದ ಕತಾರಗಾಮ ಪಾದಯಾತ್ರೆಯಲ್ಲಿ ಭಕ್ತರ ಜೊತೆ ನೂರಾರು ಕಿ.ಮೀ ನಡೆದು ಬಂದ ‘ಸುಬ್ರಮಣ್ಯಂ’ ಎಂಬ ನಾಯಿಯ ವಿಚಾರದಲ್ಲಿ ಫೇಸ್‌ಬುಕ್‌ನಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನೋಜನ್ ಪವಿತ್ರ ಕಾಬಾವನ್ನು ದೇವಾಲಯದಂತೆ ಬಿಂಬಿಸುವ AI ಚಿತ್ರ ಹಾಕಿ hಪ್ರವಾದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪ.

ಕಾಮೆಂಟ್ ಮಾಡಿದ 10 ನಿಮಿಷದಲ್ಲೇ ಡಿಲೀಟ್ ಮಾಡಿದ್ದರೂ, ಅದನ್ನು ಅರೇಬಿಕ್‌ಗೆ ಅನುವಾದಿಸಿ ಸೌದಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

*ಕೋರ್ಟ್ ತೀರ್ಪು:*

– ಜುಲೈ 15: ಅಲ್-ಅಹ್ಸಾ ಕ್ರಿಮಿನಲ್ ಕೋರ್ಟ್ – *5 ವರ್ಷ ಜೈಲು + 30 ಲಕ್ಷ ರಿಯಾಲ್ ದಂಡ*

– ಸೆ. 17: ಸೌದಿ ಪ್ರಾಸಿಕ್ಯೂಷನ್ ಮೇಲ್ಮನವಿ ಮೇರೆಗೆ *ಮೇಲ್ಮನವಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಏರಿಕೆ*

*ಮುಂದೇನು?*
ಶ್ರೀಲಂಕಾ ವಿದೇಶಾಂಗ ಸಚಿವಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಯಭಾರ ಕಚೇರಿ ಮೂಲಕ ಕಾನೂನು ನೆರವು ನೀಡುತ್ತಿದೆ. ಶ್ರೀಲಂಕಾ ಅಧ್ಯಕ್ಷರ ಕ್ಷಮಾದಾನ ಮನವಿಯೊಂದಿಗೆ ನಿಯೋಗ ಸೌದಿಗೆ ತೆರಳಲಿದೆ.

ಭಾರತದಲ್ಲಿ *ಹಿಂದೂ ಮುನ್ನಾನಿ* ಸಂಘಟನೆಯು ಚೆನ್ನೈನಲ್ಲಿರುವ ಶ್ರೀಲಂಕಾ ಉಪ ಹೈಕಮಿಷನ್‌ಗೆ ಮನವಿ ಸಲ್ಲಿಸಿ, ಗಲ್ಲು ಶಿಕ್ಷೆ ರದ್ದುಗೊಳಿಸಿ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದೆ

Read More News

Scroll to Top