ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ರೂ. 2 ಕೋಟಿ ದೇಣಿಗೆ ನೀಡಿದ ಶ್ರೀ ತೋನ್ಸೆ ಆನಂದ್ ಎಂ. ಶೆಟ್ಟಿ

114.5K Views 3w ago

ಮಂಗಳೂರು: ಖ್ಯಾತ ಉದ್ಯಮಿ ಸಾಮಾಜಿಕ ಕಳಕಳಿಯ ದಾನಿ ಆರ್ಗಾನಿಕ್ ಗ್ರೂಪ್ ಆಫ್ ಸಂಸ್ಥೆಯ ಸಿಎಂಡಿ ತೋನ್ಸೆ ಆನಂದ ಶೆಟ್ಟಿ ಮುಂಬೈ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ 2018ರಲ್ಲಿಯೇ ಪ್ರಥಮ ದೇಣಿಗೆಯಾಗಿ ರೂ. 25 ಲಕ್ಷ ವನ್ನು ನೀಡುವ ಮೂಲಕ ಉತ್ತಮ ಚಾಲನೆ ನೀಡಿದ್ದು ಕ್ರಮೇಣ 8 ವರ್ಷಗಳ ಕಾಲ ಒಕ್ಕೂಟದ ಎಲ್ಲಾ ಜನಪರ ಕಾಳಜಿಯ ಸಾಮಾಜಿಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಸುಮಾರು 1.65 ಕೋಟಿಯಷ್ಟು ದೇಣಿಗೆಯನ್ನು ಈಗಾಗಲೇ ನೀಡಿದ್ದಾರೆ ಇದೀಗ ಸಭಾಭವನದ ಮುಖ್ಯ ವೇದಿಕೆಗೆ ಅವರ ಧರ್ಮಪತ್ನಿ ತೋನ್ಸೆ ಶಶಿರೇಖಾ ಆನಂದ್ ಶೆಟ್ಟಿ ಯವರ ಹೆಸರನ್ನಿರಿಸುವ ಸಲುವಾಗಿ ಇನ್ನುಳಿದ ರೂ. 35 ಲಕ್ಷ ದೇಣಿಗೆಯ ಚೆಕ್ಕನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿ ಒಟ್ಟು ರೂ. 2 ಕೋಟಿಯಷ್ಟು ದೇಣಿಗೆ ನೀಡಿ ಸಹಕಾರ ನೀಡಿದ್ದಾರೆ. ಆನಂದ ಶೆಟ್ಟಿ ಅವರ ಧರ್ಮಪತ್ನಿ ಶಶಿರೇಖಾ ಆನಂದ್ ಶೆಟ್ಟಿಯವರು ಸಹ ಒಕ್ಕೂಟದ ಎಲ್ಲಾ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ. ಇವರಿಗೆ ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ತೋನ್ಸೆ ಆನಂದ್ ಶೆಟ್ಟಿಯವರನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ ಕೃತಜ್ಞತೆ ಸಲ್ಲಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು.

Read More News

Scroll to Top