ರಸ್ತೆ ಅಪಘಾತದಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಯೆನೇಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ಸರಕಾರದ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಎಲ್ಲಾ ಪಕ್ಷಗಳ ನಾಯಕರು, ಅಪಾರ ಸಂಖ್ಯೆಯ ಅಭಿಮಾನಿಗಳು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ನಾಯಕರು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದು, ಎಲ್ಲರೊಂದಿಗೆ ರೈಯವರು ಆತ್ಮೀಯತೆಯಿಂದ ಮಾತಾಡಿದ್ದಾರೆ. ಅವರು ಆಸ್ಪತ್ರೆಯಿಂದ ನಾಳೆ ಸಂಜೆಯೊಳಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಕರ್ನಾಟಕ ಮಾತ್ರವಲ್ಲ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿ. ರಮಾನಾಥ ರೈ ಅವರಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. 6 ಬಾರಿ ಬಂಟ್ವಾಳದ ಶಾಸಕರಾಗಿ, ಮೂರು ಬಾರಿ ಕ್ಯಾಬಿನೆಟ್ ಮಂತ್ರಿಯಾಗಿ, ಎರಡು ಸಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಾತಿ ಮತ ಪಕ್ಷ ಭೇದವಿಲ್ಲದೆ ಜನಸೇವೆಯಲ್ಲಿ ದಣಿವರಿಯದ ನಿರಾಡಂಬರ ನಿಸ್ವಾರ್ಥ ನಾಯಕರಾಗಿ ಅಜಾತಶತ್ರುವಾಗಿ ಜನ ಮೆಚ್ಚಿದ ಪ್ರಜಾ ಚಕ್ರವರ್ತಿಯಾಗಿ ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾಗಾಂಧಿ, ರಾಜೀವಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ, ಬಿ. ಜನಾರ್ಧನ ಪೂಜಾರಿ, ಎಂ. ವೀರಪ್ಪ ಮೊದಲಾದ ರಾಷ್ಟ್ರ ನಾಯಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ಬಿ.ರಮಾನಾಥ ರೈ ಅವರು ಜನರ ಪ್ರೀತಿಯ ಬೇಬಿಯಣ್ಣರೆಂದೇ ಜನಪ್ರಿಯರು. Mp MLA’s News ಮತ್ತು mpmlasnewstv 24×7 ನ್ಯೂಸ್ ಪೋರ್ಟಲ್ ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು (ಸೆ. 21) ಇಂದು ರಾತ್ರಿ ರೈ ಅವರನ್ನು ಭೇಟಿಯಾದಾಗ ರೈ ಅವರು ಸಂಪಾದಕರಲ್ಲಿ ಆತ್ಮೀಯವಾಗಿ ಮಾತಾಡಿದರಲ್ಲದೆ, ನಾನು ಹುಷಾರಾಗಿದ್ದೇನೆ. ನನ್ನ ಮೇಲೆ ಪ್ರೀತಿ ಇಟ್ಟ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ, ಅಭಿಮಾನ, ದೈವ ದೇವರುಗಳ ಆಶೀರ್ವಾದವೇ ನನ್ನನ್ನು ಕಾಪಾಡಿದೆ.ಈ ಸಂದರ್ಭದಲ್ಲಿ ರೈ ಅವರ ಆತ್ಮೀಯ ಮಿತ್ರರಾದ, ಉಡುಪಿ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಅವರು ಆಸ್ಪತ್ರೆಗೆ ಬಂದು ರೈ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ಪದ್ಮ ಶೇಖರ್ ಜೈನ್,ಪಿಯೂಸ್ ರೋಡ್ರಿಗಸ್,ಬೇಬಿ ಕುಂದರ್,ಪದ್ಮನಾಭ ರೈ, ಶೆಬೀರ್ ಮೊದಲಾದವರು ಉಪಸ್ಥಿತರಿದ್ದರು.

ತದನಂತರ, MPMLAS NEWS ರಸ್ತೆ ಅಪಘಾತದಿಂದ ಕಾಲಿಗೆ ಗಂಭೀರಗೊಂಡಿದ್ದ ರೈಯವರ ಪಿ. ಎ. ಡೆಂಝಿಲ್ ಅವರನ್ನು ಭೇಟಿಯಾಯಿತು. ಡೆಂಝಿಲ್ ಅವರು ಚೇತರಿಸಿಕೊಂಡಿದ್ದು ಅವರ ಕಾಲಿನ ಶಸ್ತ್ರಚಿಕಿತ್ಸೆ ಒಂದೆರಡು ದಿನಗಳಲ್ಲಿ ನಡೆಯಲಿದೆ












































































































































































