ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಐತಿಹಾಸಿಕ ಗೆಲುವು ಸಾಧಿಸಿದ ಡಾ. ದೀಪಕ್ ಶೆಟ್ಟಿ ಅವರಿಂದ ಏಳು ಮಹತ್ವದ ಯೋಜನೆಗಳ ಘೋಷಣೆ. MPMLA’S NEWS EXECLUSSIVE REPORT BY DR ASHOK SHETTY BN

11.8K Views 1h ago

ಬೆಂಗಳೂರು: ಬೆಂಗಳೂರು ಬಂಟರ ಸಂಘದ 2026-28ನೇ ಸಾಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಡಾ.ದೀಪಕ್ ಶೆಟ್ಟಿ ಅವರು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ಡಾ.ದೀಪಕ್ ಶೆಟ್ಟಿ* ಅವರು ಆಯ್ಕೆಯಾಗಿದ್ದು, ಕರಾವಳಿ ಮತ್ತು ಬೆಂಗಳೂರಿನ ಬಂಟ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ.
ವೈಯಕ್ತಿಕ ಪರಿಚಯ:
ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರು*ನವರಾದ ಡಾ. ದೀಪಕ್ ಶೆಟ್ಟಿ ಅವರು ನಿವೃತ್ತ ಶಿಕ್ಷಕರಾದ ಹಿಮಕರ ಶೆಟ್ಟಿ ಮತ್ತು ಶ್ರೀಮತಿ ವನಜಾ ಶೆಟ್ಟಿ ದಂಪತಿಯ ಸುಪುತ್ರ. ಪತ್ನಿ ಶ್ರೀಮತಿ ಸುಮಾ ಡಿ. ಶೆಟ್ಟಿ, ಇಬ್ಬರು ಪುತ್ರರು ಇಂಜಿನಿಯರಿಂಗ್ ಶಿಕ್ಷಣ ಕಲಿಯುತ್ತಿದ್ದಾರೆ.ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ವಿದ್ಯಾರ್ಹತೆ ಮತ್ತು ವೃತ್ತಿ ಮಾದರಿ ವ್ಯಕ್ತಿತ್ವ:
ಡಾ. ದೀಪಕ್ ಶೆಟ್ಟಿ ಅವರು ಕೇವಲ ಸಮಾಜ ಸೇವಕರಲ್ಲ, ಉನ್ನತ ವಿದ್ಯಾವಂತರು.

  • ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ
  • ಎಂಬಿಎ ಪದವೀಧರ
  • ಯಕ್ಷಗಾನದಲ್ಲಿ ಡಾಕ್ಟರೇಟ್ ಪಡೆದಿರುವ ಅಪರೂಪದ ಸಾಧಕರು.
  • ವೃತ್ತಿಯಲ್ಲಿ ಟೊಯೋಟಾ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ಭಾರತ, ಜಪಾನ್ ಥೈಲ್ಯಾಂಡ್ ಸೇರಿದಂತೆ ವಿದೇಶಗಳಲ್ಲಿ ಸೇವೆ ಸಲ್ಲಿಸಿದ ಅಂತಾರಾಷ್ಟ್ರೀಯ ಅಪಾರ ಅನುಭವ ಹೊಂದಿದ್ದಾರೆ.
    ಬಂಟರ ಸಂಘದಲ್ಲಿ 2 ದಶಕಗಳ ಸೇವಾ ಪಯಣ:
    ಬಂಟರ ಸಂಘದಲ್ಲಿ ಅವರದು ಸುಧೀರ್ಘ ಸೇವೆ.
  • ಯುವ ವಿಭಾಗದ ಮೂಲಕ ಸಂಘ ಪ್ರವೇಶ, ನಂತರ ಯುವ ವಿಭಾಗದ ಸಂಚಾಲಕ ಮತ್ತು ಚೇರ್‌ಪರ್ಸನ್ ಆಗಿ ಯಶಸ್ವಿ ನಾಯಕತ್ವ
  • ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯ
  • ಕೋಶಾಧಿಕಾರಿಯಾಗಿ ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.
    ಸಂಸ್ಕೃತಿಯ ಹೋರಾಟಗಾರ:
  • ಕಾರ್ಯಾಧ್ಯಕ್ಷರು – ಯಕ್ಷಧ್ರುವ ಪಟ್ಲ ಫೌಂಡೇಶನ್
  • ಅಧ್ಯಕ್ಷರು – ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು
  • ಯಕ್ಷಗಾನದ ನೂರು ರಾಗಗಳ ದಾಖಲಾತಿಯ “ಶತಸಾನುರಾಗ” ದಾಖಲೀಕರಣದ ರೂವಾರಿ
  • ಯಕ್ಷಗಾನ ವೇಷಗಾರಿಕೆ, ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಸಕ್ರಿಯ ಕಲಾವಿದ
  • ಬೆಂಗಳೂರಿನಲ್ಲಿ ಐತಿಹಾಸಿಕ “ಬೈಂದೂರು ಟು ಬದಿಯಡ್ಕ ಸಮಾಗಮ”, ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆಯೋಜನೆ
  • ಕಂಬಳ ನಿಷೇಧದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಜಾತಿ-ಮತ-ಪಕ್ಷ ಭೇದವಿಲ್ಲದೆ ಕರಾವಳಿಗರನ್ನು ಒಗ್ಗೂಡಿಸಿ ನಡೆಸಿದ ಹೋರಾಟದ ನೇತೃತ್ವ ವಹಿಸಿದ್ದರು.
  • ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ “ಕುಂದಾಪ್ರ ಕನ್ನಡ ಅಧ್ಯಯನ ಪೀಠ” ಸ್ಥಾಪನೆಗೆ ಪ್ರಮುಖ ಕೊಡುಗೆ.
    ಅಂತಾರಾಷ್ಟ್ರೀಯ ಕನ್ನಡ ಸೇವೆ:
    ಜಪಾನ್‌ನಲ್ಲಿ 11 ವರ್ಷಗಳ ಕಾಲ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದ ಕೀರ್ತಿ ಅವರದು.
    ಡಾ. ದೀಪಕ್ ಶೆಟ್ಟಿ ಅವರು ಆಡಳಿತ, ಸಂಘಟನೆ, ಸಂಸ್ಕೃತಿ, ಸಮಾಜಸೇವೆ ಮತ್ತು ನಾಯಕತ್ವದ ಸಮನ್ವಯದ ಪ್ರತೀಕ. ಅನುಭವಿ, ದೂರದೃಷ್ಟಿಯ ನಾಯಕರಾಗಿದ್ದು, ಅವರಿಗೆ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಪಟ್ಟ ಒಲಿದಿರುವುದು ಇಡೀ ಬಂಟ ಸಮುದಾಯಕ್ಕೆ ಹೆಮ್ಮೆಯ ವಿಷಯ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
    ಗೆಲುವಿನ ಬೆನ್ನಲ್ಲೇ ಡಾ. ದೀಪಕ್ ಶೆಟ್ಟಿ ಅವರಿಂದ 7 ಭರ್ಜರಿ ಯೋಜನೆಗಳ ಘೋಷಣೆ*
    ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ದೀಪಕ್ ಶೆಟ್ಟಿ ಅವರು ಗೆಲುವಿನ ಬೆನ್ನಲ್ಲೇ ಸಂಘದ ಭವಿಷ್ಯಕ್ಕಾಗಿ 7 ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.

1.ಬಂಟ ವಿದ್ಯಾನಿಧಿ ಯೋಜನೆ:
ಬಡ ಬಂಟ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಲಕ್ಷ ರೂ. ವಿದ್ಯಾರ್ಥಿ ವೇತನ. IAS, KAS, ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಶೇಷ ನೆರವು.
2.ಬಂಟ ಉದ್ಯೋಗ ಮೇಳ:
ಬೆಂಗಳೂರಿನಲ್ಲಿ ವರ್ಷಕ್ಕೆ 2 ಬಾರಿ ಬೃಹತ್ ಉದ್ಯೋಗ ಮೇಳ. ಟೊಯೋಟಾ ಸೇರಿದಂತೆ 100+ ಕಂಪನಿಗಳನ್ನು ಕರೆತಂದು ನಮ್ಮ ಯುವಕರಿಗೆ ಉದ್ಯೋಗ ಕೊಡಿಸುವ ಗುರಿ.
3.ಬಂಟರ ಭವನ ಮೇಲ್ದರ್ಜೆಗೆ:
ವಿಜಯನಗರದ ಬಂಟರ ಭವನವನ್ನು 5 ಸ್ಟಾರ್ ಸಭಾಂಗಣ, ಅತ್ಯಾಧುನಿಕ ಲೈಬ್ರರಿ, ಡಿಜಿಟಲ್ ಆಫೀಸ್ ಆಗಿ ಮೇಲ್ದರ್ಜೆಗೇರಿಸುವುದು.
4.ಯಕ್ಷಗಾನ ಮತ್ತು ತುಳು-ಕನ್ನಡ ಉಳಿವು:
ಪ್ರತಿ ತಿಂಗಳು ಬಂಟರ ಭವನದಲ್ಲಿ ಯಕ್ಷಗಾನ, ತಾಳಮದ್ದಳೆ, ತುಳು ಲಿಪಿ ಕಾರ್ಯಾಗಾರ, ಕುಂದಾಪ್ರ ಕನ್ನಡ ಪುಸ್ತಕ ಮೇಳ.
5.ಬಂಟ ವೈದ್ಯಕೀಯ ನೆರವು ನಿಧಿ:
ಅನಾರೋಗ್ಯ ಪೀಡಿತ ಬಂಟ ಕುಟುಂಬಗಳಿಗೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ನೆರವು.
6.ವಧು-ವರರ ಸಮ್ಮೇಳನ ಮತ್ತು ಮಹಿಳಾ ಸಬಲೀಕರಣ:
ವರ್ಷಕ್ಕೊಮ್ಮೆ ಬೃಹತ್ ಬಂಟ ವಧು-ವರರ ಸಮ್ಮೇಳನ, ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ.
7.ಜಾಗತಿಕ ಬಂಟರ ಒಕ್ಕೂಟ:
ದುಬೈ, ಜಪಾನ್, ಅಮೆರಿಕದ ಬಂಟರನ್ನು ಬೆಂಗಳೂರು ಬಂಟರ ಸಂಘದೊಂದಿಗೆ ಜೋಡಿಸುವ “Global Bunts Connect” ಯೋಜನೆ.

“ನಾನು ಅಧ್ಯಕ್ಷನಲ್ಲ, ನಿಮ್ಮ ಸೇವಕ. ನಿಮ್ಮೆಲ್ಲರ ಸಹಕಾರದಿಂದ ಬೆಂಗಳೂರುಬಂಟರ ಸಂಘವನ್ನು ಕರ್ನಾಟಕದ ನಂ.1 ಸಮುದಾಯ ಸಂಘವನ್ನಾಗಿ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬಂಟರ ಸಂಘದ ಕೀರ್ತಿಯನ್ನು ತಲುಪುವಂತೆ ಮಾಡುತ್ತೇನೆ “. ಎಂದು ಡಾ. ದೀಪಕ್ ಶೆಟ್ಟಿ ಹೇಳಿದ್ದಾರೆ.MP MLA’S NEWS ಮಹಾಪೋಷಕರಾಗಿರುವ ಡಾ. ದೀಪಕ್ ಶೆಟ್ಟಿ ಅವರಿಗೆ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭಾಶಯ ಸಲ್ಲಿಸಿದ್ದಾರೆ

Read More News

ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ: ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಅನಿವಾಸಿ ತುಳುವರ ಪರವಾಗಿ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ, ಅಬುಧಾಬಿಯ ನಿಕಟಪೂರ್ವ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಭಿನಂದನೆ

MP MLA’S NEWS 🔴ಬ್ರೇಕಿಂಗ್ ನ್ಯೂಸ್ | ಎಕ್ಸ್‌ಕ್ಲೂಸಿವ್ ಸ್ಪಾಟ್ ರಿಪೋರ್ಟ್. ಪ್ರಜಾ ಸೌಧದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಭಾಗಿ: ₹30,000 ಕೋಟಿ ಗುತ್ತಿಗೆದಾರರ ಬಾಕಿ ಪ್ರಶ್ನೆಗೆ ಡಿಸಿಎಂ ಪರಮೇಶ್ವರ್ ಹಿಂದೇಟು, ಹೋಟೆಲ್ ಬಂದ್ ಪ್ರಶ್ನೆಗೆ ಖಾದರ್ ನಿರ್ಲಕ್ಷ್ಯ!

Scroll to Top