ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ: ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಅನಿವಾಸಿ ತುಳುವರ ಪರವಾಗಿ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ, ಅಬುಧಾಬಿಯ ನಿಕಟಪೂರ್ವ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಭಿನಂದನೆ

10K Views 2h ago

ಅಬುಧಾಬಿ/ಮಂಗಳೂರು: ಕರ್ನಾಟಕ ಸರ್ಕಾರವು ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ ನೀಡಿರುವ ಐತಿಹಾಸಿಕ ನಿರ್ಧಾರಕ್ಕೆ ಅಬುಧಾಬಿಯಿಂದ ಭಾರಿ ಸ್ವಾಗತ ವ್ಯಕ್ತವಾಗಿದೆ.
ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ (ISC), ಅಬುಧಾಬಿಯ ಮಾಜಿ ಅಧ್ಯಕ್ಷ ಹಾಗೂ ಪ್ರಮುಖ ಅನಿವಾಸಿ ನಾಯಕ ಮಿತ್ರಂಪಾಡಿ ಜಯರಾಮ್ ರೈ ಅವರು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅಬುಧಾಬಿಯಿಂದ ಮಾತನಾಡಿದ ಅವರು, “ಇದು ತುಳುನಾಡಿನ ಪಾಲಿಗೆ ಐತಿಹಾಸಿಕ ಮತ್ತು ಸುವರ್ಣ ಅಧ್ಯಾಯ. ಕೊಲ್ಲಿ ರಾಷ್ಟ್ರದ ಲಕ್ಷಾಂತರ ಅನಿವಾಸಿ ತುಳುವರ ಪರವಾಗಿ ಎಲ್ಲಾ ತುಳು ಬಾಂಧವರಿಗೆ ಅಭಿನಂದನೆಗಳು” ಎಂದು ಹೇಳಿದರು.
ಈ ದಿಟ್ಟ ಮತ್ತು ಐತಿಹಾಸಿಕ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್* ಮತ್ತು ಇಡೀ ಸಂಪುಟಕ್ಕೆ ಹೃತ್ಪೂರ್ವಕ ಧನ್ಯವಾದಗಳು. ತುಳು ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ನಮ್ಮ ಭಾವನೆ ಮತ್ತು ನಮ್ಮ ಅಸ್ಮಿತೆ. ನಾಗಾರಾಧನೆ, ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಪಾಡ್ದನಗಳೊಂದಿಗೆ ತುಳುವಿಗೆ 2000 ವರ್ಷಗಳಿಗೂ ಮಿಕ್ಕಿದ ಶ್ರೀಮಂತ ಪರಂಪರೆ ಇದೆ” ಎಂದರು.
“ಈ ಗೆಲುವು ಹಲವು ವರ್ಷಗಳಿಂದ ಹೋರಾಡಿದ ಎಲ್ಲಾ ತುಳು ಸಂಘಟನೆಗಳು, ಬರಹಗಾರರು, ಕಲಾವಿದರು ಮತ್ತು ಯುವಕರಿಗೆ ಸಲ್ಲುತ್ತದೆ. ಈ ಹೋರಾಟಕ್ಕೆ ನಿರಂತರ ಬೆಂಬಲ ಮತ್ತು ಅಮೂಲ್ಯ ಕೊಡುಗೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರಿನ ಕ್ರಿಯಾಶೀಲ ಶಾಸಕ ಅಶೋಕ್ ಕುಮಾರ್ ರೈnಮತ್ತು ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ರಾಜಕೀಯ, ಸಾಮಾಜಿಕ, ಸಾಹಿತ್ಯ ಮುಖಂಡರು, ತುಳು ಭಾಷಾ ಹೋರಾಟಗಾರರು, ವಿಶೇಷವಾಗಿ ಶಾಸಕ ಸುನೀಲ್ ಕುಮಾರ್, ಡಾ. ಮಿಜಾರುಗುತ್ತು ಮೋಹನ್ ಆಳ್ವ, ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ತುಳುನಾಡಿನ ಎಲ್ಲಾ ಸಂಘಟನೆಗಳು ಮತ್ತು ನಾಯಕರಿಗೆ ನನ್ನ ವಿಶೇಷ ಧನ್ಯವಾದಗಳು” ಎಂದು ರೈ ಹೇಳಿದರು.
“ಮುಂದಿನ ಪೀಳಿಗೆಗೆ ತುಳುವನ್ನು ಉಳಿಸುವುದು ನಮ್ಮ ದೊಡ್ಡ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯವಾಗಿದೆ.ನಮ್ಮ ಮಕ್ಕಳು ಶಾಲೆಯಲ್ಲಿ ತುಳು ಕಲಿಯಬೇಕು. ತುಳು ಶೀಘ್ರದಲ್ಲೇ ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲಿ ಎಂಬುದು ನಮ್ಮ ಆಶಯ” ಎಂದು ಅವರು ಹೇಳಿದರು.
ತುಳು ನಮ್ಮ ಉಸಿರು, ತುಳು ನಮ್ಮ ಹೆಮ್ಮೆ.

  • ಮಿತ್ರಂಪಾಡಿ ಜಯರಾಮ್ ರೈ, ಮಾಜಿ ಅಧ್ಯಕ್ಷರು, ISC ಅಬುಧಾಬಿ, ಯುಎಇ

Read More News

ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ: ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಅನಿವಾಸಿ ತುಳುವರ ಪರವಾಗಿ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ, ಅಬುಧಾಬಿಯ ನಿಕಟಪೂರ್ವ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಭಿನಂದನೆ

MP MLA’S NEWS 🔴ಬ್ರೇಕಿಂಗ್ ನ್ಯೂಸ್ | ಎಕ್ಸ್‌ಕ್ಲೂಸಿವ್ ಸ್ಪಾಟ್ ರಿಪೋರ್ಟ್. ಪ್ರಜಾ ಸೌಧದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಭಾಗಿ: ₹30,000 ಕೋಟಿ ಗುತ್ತಿಗೆದಾರರ ಬಾಕಿ ಪ್ರಶ್ನೆಗೆ ಡಿಸಿಎಂ ಪರಮೇಶ್ವರ್ ಹಿಂದೇಟು, ಹೋಟೆಲ್ ಬಂದ್ ಪ್ರಶ್ನೆಗೆ ಖಾದರ್ ನಿರ್ಲಕ್ಷ್ಯ!

Scroll to Top