ಮೊಂತಿ ಫೆಸ್ತ್ ಗೆ ಸಿದ್ಧತೆ: ಪಾಲ್ದನೆ ಚರ್ಚ್ ನಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆ ಆರಂಭ

8.4K Views 1h ago

ಮಂಗಳೂರು: ಕರಾವಳಿಯ ಕ್ಯಾಥೊಲಿಕ್ ಕ್ರೈಸ್ತರು ಸಪ್ಟೆಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನದ ಪ್ರಯುಕ್ತ ಮೊಂತಿ ಫೆಸ್ತ್ ಆಚರಿಸುತ್ತಿದ್ದು, ಅದರ ಅಂಗವಾಗಿ 9 ದಿನಗಳ ನೋವೇನಾ ಪ್ರಾರ್ಥನೆ ಆಗಸ್ಟ್ 30 ರಂದು ರವಿವಾರ ಆರಂಭವಾಗಿದೆ.
ನೋವೇನಾ ಸಂದರ್ಭ ಮೊದಲಿಗೆ ಬಲಿ ಪೂಜೆ ಹಾಗೂ ಬಳಿಕ ಮಕ್ಕಳು ವಿವಿಧೆಡೆಗಳಿಂದ ಸಂಗ್ರಹಿಸಿ ತಂದ ಹೂವುಗಳನ್ನು ಮೇರಿ ಮಾತೆಗೆ ಗಾಯನದೊಂದಿಗೆ ಭಕ್ತಿ ಪೂರ್ವಕವಾಗಿ ಅರ್ಪಿಸಲಾಗುತ್ತದೆ.
ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಮೊದಲ ದಿನದ ನೋವೇನಾವನ್ನು ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ನಡೆಸಿ ಕೊಟ್ಟರು.
ಸಕ್ಕಡ್ ಸಾಂಗಾತಾ ಮೇಳ್ಯಾಂ, ಸಕ್ಕಡ್ ಲಾಗಿಂ ಸರ್ಯಾಂ, ಆಮ್ಚೆ ತಾಳೆ ಏಕ್ ಕರ್ಯಾಂ, ಮರಿಯೆಕ್ ಹೊಗೊಳ್ಸಿಯಾಂ ಎಂಬ ಜನಪ್ರಿಯ ಕೊಂಕಣಿ ಭಕ್ತಿ ಗೀತೆಯೊಂದಿಗೆ ನೋವೇನಾ ಆರಂಭವಾಯಿತು. ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕ ಆಸ್ಟಿನ್ ಮೊಂತೇರೊ ಮುಂತಾದವರು ಉಪಸ್ಥಿತರಿದ್ದರು. ನೋವೇನಾ ಪ್ರಾರ್ಥನೆಯ ಬಳಿಕ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top