ಸಂತ ಜೋಸೆಫರ ವಿಶ್ವವಿದ್ಯಾಲಯ ‘ಓಪನ್ ಡೇ 2026’ (Open Day-2026), ಜುಲೈ 27, ಸೋಮವಾರ

8.4K Views 2h ago

ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಪ್ರತಿಷ್ಠಿತ ಸಂತ ಜೋಸೆಫರ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಶೈಕ್ಷಣಿಕ ಪ್ರದರ್ಶನವಾದ ‘ಓಪನ್ ಡೇ 2026’ ((Open Day-2026) ಅನ್ನು ಜುಲೈ 27, ಸೋಮವಾರ 2026 ರಂದು ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ ಆಯೋಜಿಸಿದೆ. ಮುಂಬರುವ ವರ್ಷಗಳಲ್ಲ್ಲಿ ಈ ವಿಶ್ವವಿದ್ಯಾಲಯವನ್ನು ಪ್ರವೇಶಿಸಲು ಬಯಸುವ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಸಾರ್ವಜನಿಕರಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕೊಡುಗೆಗಳು, ಸಂಶೋಧನೆ ಮತ್ತು ಕ್ಯಾಂಪಸ್ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ, ಶಾಲೆಗಳು, ಕಾಲೇಜುಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕಾ ವಲಯದ ನಾಯಕರನ್ನು ಒಂದೇ ವೇದಿಕೆಯಡಿ ತರುವ ಮೂಲಕ ಶೈಕ್ಷಣಿಕ ಹಾಗೂ ಉದ್ಯಮ ವಲಯದ ನಡುವೆ ಮಹತ್ವದ ಸಂವಾದವನ್ನು ಬೆಳೆಸುವ ವಿಶಿಷ್ಟ ಸಹಯೋಗದ ವೇದಿಕೆಯಾಗಿ ಈ ಕಾರ್ಯಕ್ರಮ ರೂಪುಗೊಳ್ಳಲಿದೆ.
ಈ ಬಾರಿಯ ’ಓಪನ್ ಡೇ 2026’ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಮಾವೇಶ (Principal conclave), ಟೆಡ್‌ಎಕ್ಸ್ (TEDx) ವಿದ್ಯಾರ್ಥಿ ಭಾಷಣಗಳು, ಪ್ರೌಢಶಾಲಾ ವಿದ್ಯಾರ್ಥಿಗಳ ವಸ್ತುಪ್ರದರ್ಶನ ಮತ್ತು ಮೌಲ್ಯಮಾಪನ, ವಿದ್ಯಾರ್ಥಿ ಸಂಸದೀಯ ಅಧಿವೇಶನ, ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭಗಳು ಪ್ರಮುಖ ಆಕರ್ಷಣೆಯಾಗಿರಲಿವೆ.
ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಪಠ್ಯ ಚಟುವಟಿಕೆಗಳ ವ್ಯವಸ್ಥೆಯ ಕುರಿತು ನೇರ ಮಾಹಿತಿ ಪಡೆಯಲು, ಸಂದರ್ಶಕರಿಗೆ ಬೋಧಕವರ್ಗ, ವಿದ್ಯಾರ್ಥಿಗಳು ಮತ್ತು ಉದ್ಯಮ ವಲಯದ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವ ಅವಕಾಶ ಇರುತ್ತದೆ.

Read More News

Scroll to Top