ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್(R), ದೆಹಲಿ (International human development council, New Delhi) ಇದರ ವತಿಯಿಂದ ದಿನಾಂಕ 24-06-2026ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಲೆ ಹಾಗೂ ಸಮಾಜ ಸೇವೆ ಯನ್ನು ಗುರುತಿಸಿ ಪ್ರತಿಭಾವಂತ ಸರಕಾರಿ ಅಧಿಕಾರಿ ನಾಗೇಂದ್ರ ಅವರಿಗೆ ಪ್ರೈಡ್ ಆಫ್ ಇಂಡಿಯಾ (*pride of INDIA* ) ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಈಗಾಗಲೇ ನಾಗೇಂದ್ರ ಇವರಿಗೆ ವಿಶ್ವೇಶ್ವರ ಅಂತರಾಷ್ಟ್ರೀಯ ಪ್ರಶಸ್ತಿ, ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ, ಒಂದು ಬಾರಿ ರಾಜ್ಯ ಪ್ರಶಸ್ತಿ, ಹಾಗೂ ಜಿಲ್ಲಾ ಮಟ್ಟದಲ್ಲಿ ರೋಟರಿ ಇಂಟರ್ನ್ಯಾಷನಲ್ ವತಿಯಿಂದ ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ, ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಇನ್ನು ಮುಂತಾದವುಗಳು ದೊರೆತಿರುವುದು ಅವರ ಗಮನಾರ್ಹ ಸಾಧನೆಯಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮಹೇಶ್ ಗೌಡ,ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ರಾಷ್ಟ್ರೀಯ ಜಾನಪದ ಗಾಯಕಿಯಾದ ಡಾ. ಪದ್ಮಾವತಿ, ಗೌರವಾನ್ವಿತ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಳದಲೇ, ಬೆಂಗಳೂರು ಸಿಟಿಯ ಡೆಪ್ಯುಟಿ ಪೊಲೀಸ್ ಕಮಿಷನರ್ ಹೆಚ್. ಮಂಜುನಾಥ್ ಬಾಬು,ಜಿಕೆವಿಕೆ ಅಗ್ರಿಕಲ್ಚರ್ ಸೈನ್ಸ್ ಯುನಿವರ್ಸಿಟಿಯ ಮಾಜಿ ಉಪಕುಲಪತಿಗಳಾದ ಡಾ. ನಾರಾಯಣಗೌಡ, ಚಲನಚಿತ್ರ ನಟಿ ಸಂಯುಕ್ತ ಹೊರನಾಡು, ಸಾಗರ ಗಂಗೋತ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕಲಾ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಈ ಬಗ್ಗೆ ಡಾ.ರಾಜಕುಮಾರ್ ಅಭಿಮಾನಿಗಳ ವೇದಿಕೆ ಬಳಗದಿಂದ, ರೋಟರಿ ಸಂಸ್ಥೆಯ ಸದಸ್ಯರುಗಳಿಂದ, ಇವರ ಸ್ನೇಹಿತರಿಂದ ಹಾಗೂ ಪ್ರೀತಿಯ ಅಭಿಮಾನಿಗಳಿಂದ ಪ್ರಶಂಸೆ, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.



























































































































































































