ಬಂಟ ಸಮಾಜ ಬಾಂಧವವರೇ,ನಿಮ್ಮ ಅಮೂಲ್ಯವಾದ ಮತವನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ದೀಪಕ್ ಶೆಟ್ಟಿ ಮತ್ತವರ ಟೀಮ್ ಗೆ ನೀಡಿ ಗೆಲ್ಲಿಸಬೇಕಾಗಿ ನಿಮ್ಮಲ್ಲಿ ವಿನಮ್ರ ವಿನಂತಿ.

9.7K Views 2h ago

ಡಾ. ದೀಪಕ್ ಶೆಟ್ಟಿ ಅವರು ಆಡಳಿತ, ಸಂಘಟನೆ, ಸಂಸ್ಕೃತಿ, ಸಮಾಜಸೇವೆ ಮತ್ತು ನಾಯಕತ್ವ ಸಮನ್ವಯದ ಪ್ರತೀಕವಾಗಿದ್ದಾರೆ. ಬೆಂಗಳೂರು ಬಂಟರ ಸಂಘದ ಬೆಳವಣಿಗೆಗೆ ಹಲವು ದಶಕಗಳಿಂದ ಶ್ರಮಿಸುತ್ತಾ, ಕರಾವಳಿ ಸಂಸ್ಕೃತಿ, ಯಕ್ಷಗಾನ, ಕನ್ನಡ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಅವರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಮರ್ಥ, ಅನುಭವಿ ಹಾಗೂ ದೂರದೃಷ್ಟಿಯ ನಾಯಕರು.

ಡಾ. ದೀಪಕ್ ಶೆಟ್ಟಿ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್,
ಎಂಬಿಎ,ಯಕ್ಷಗಾನ ಡಾಕ್ಟರೇಟ್ ಉನ್ನತ ಪದವಿ ಪಡೆದಿದ್ದಾರೆ.ಟೊಯೋಟಾ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ದೀಪಕ್ ಶೆಟ್ಟಿ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಬಾರ್ಕೂರು.
ತಂದೆ ಹಿಮಕರ ಶೆಟ್ಟಿ (ನಿವೃತ್ತ ಶಿಕ್ಷಕರು),ತಾಯಿ ಶ್ರೀಮತಿ ವನಜಾ ಶೆಟ್ಟಿ (ನಿವೃತ್ತ ಶಿಕ್ಷಕಿ),ಪತ್ನಿ ಶ್ರೀಮತಿ ಸುಮಾ ಡಿ. ಶೆಟ್ಟಿ ಮತ್ತುಇಬ್ಬರು ಪುತ್ರರಿದ್ದಾರೆ
ವೃತ್ತಿಪರ ಸಾಧನೆ-: ಡಾ. ದೀಪಕ್ ಶೆಟ್ಟಿ ಅವರು ಟೊಯೋಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು,ಭಾರತ ಹಾಗೂ ವಿವಿಧ ವಿದೇಶಗಳಲ್ಲಿ ವೃತ್ತಿಪರ ಸೇವೆ ಸಲ್ಲಿಸಿ ವಿಶಿಷ್ಟ ಅನುಭವ ಹೊಂದಿದ್ದಾರೆ.ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಬೆಂಗಳೂರು ಬಂಟರ ಸಂಘದಲ್ಲಿ ಸೇವಾ ಪಯಣ: ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರು ಬಂಟರ ಸಂಘದ ಯುವ ವಿಭಾಗದ ಮೂಲಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯ ಪ್ರವೇಶ ಮಾಡಿ,ಯುವ ವಿಭಾಗದ ಸಂಚಾಲಕರಾಗಿ ಮತ್ತು ಯುವ ವಿಭಾಗದ ಚೇರ್‌ಪರ್ಸನ್ ಆಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದಾರೆ. ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ, ಕೋಶಾಧಿಕಾರಿಯಾಗಿ ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡಿದ್ದಾರೆ. ಸಂಘದ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಪ್ರಮುಖ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಂಸ್ಕೃತಿಕ ನಾಯಕತ್ವ ಮತ್ತು ಸಾಮಾಜಿಕ ಸೇವೆ ಹಾಗೂ ಸಂಘಟನಾತ್ಮಕ ಜವಾಬ್ದಾರಿಗಳು: ಡಾ. ದೀಪಕ್ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.ಅಧ್ಯಕ್ಷರಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರುನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಯ್ಯಾರ ಕಿಞ್ಞಣ್ಣ ರೈ ಜನ್ಮಶತಮಾನೋತ್ಸವದ ಪ್ರಧಾನ ಸಂಚಾಲಕತ್ವ, ಡಿ.ಕೆ. ಚೌಟರ ಅಮೃತ ಮಹೋತ್ಸವದ ಮುಂದಾಳತ್ವ ವಹಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ
ಯಕ್ಷಗಾನ ಕ್ಷೇತ್ರದಲ್ಲಿ ಕೊಡುಗೆ:
ಡಾ. ದೀಪಕ್ ಶೆಟ್ಟಿ ಅವರು ಯಕ್ಷಗಾನ ವೇಷಗಾರಿಕೆ ಮತ್ತು ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಲಾವಿರರಾಗಿ ಕಲಾಸೇವೆ ಸಲ್ಲಿಸಿದ್ದಾರೆ.ತೆಂಕು ಹಾಗೂ ಬಡಗು ತಿಟ್ಟಿನ ಹಿರಿಯ ಕಲಾವಿದರ ಸಂದರ್ಶನ ಮತ್ತು ವೀಡಿಯೋ ದಾಖಲಾತಿ,-ಯಕ್ಷಗಾನದ ನೂರು ರಾಗಗಳ ದಾಖಲಾತಿಯಾದ “ಶತಸಾನುರಾಗ” ದಾಖಲೀಕರಣ ರೂವಾರಿಯಾಗಿ ಹೊಸ ಇತಿಹಾಸ, ದಾಖಲೆ ಬರೆದಿದ್ದಾರೆ.ಯಕ್ಷಗಾನ ಕಲಾವಿದರು, ಸಂಘಟಕರು ಹಾಗೂ ಕಲಾಸಂಸ್ಥೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಕಲಾ ಪೋಷಕರಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಮತ್ತು ನಾಡು-ನುಡಿ ಹೋರಾಟಗಳು:
ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರಿನಲ್ಲಿ “ಬೈಂದೂರು ಟು ಬದಿಯಡ್ಕ ಸಮಾಗಮ” ಎಂಬ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿ ಆಯೋಜನೆ ಮಾಡಿದ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಭವ್ಯ ಆಯೋಜನೆ,ತುಳು ಲಿಪಿ ಕಾರ್ಯಗಾರದ ಪ್ರಥಮ ಆಯೋಜನೆ. ಕನ್ನಡ ಮತ್ತು ತುಳು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳದ ಯಶಸ್ವಿ ಸಂಘಟನೆ. ಕಂಬಳ ನಿಷೇಧದ ಸಂದರ್ಭದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದೆ ಕರಾವಳಿಯ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕರಾವಳಿಗರ ಹೋರಾಟದ ನೇತೃತ್ವ,ಕುಂದಾಪ್ರ ಕನ್ನಡ ಪ್ರತಿಷ್ಠಾನದ ಆರಂಭ ಮತ್ತು ಅಧ್ಯಕ್ಷರಾಗಿ ಯಶಸ್ವಿ ನಾಯಕತ್ವ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ “ಕುಂದಾಪ್ರ ಕನ್ನಡ ಅಧ್ಯಯನ ಪೀಠ” ಸ್ಥಾಪನೆಗೆ ಮಹತ್ವದ ಕೊಡುಗೆ ಸಲ್ಲಿಸಿ ದ್ದಾರೆ.
ಅಂತರರಾಷ್ಟ್ರೀಯ ಕನ್ನಡ ಸೇವೆ: ಡಾ.ದೀಪಕ್ ಶೆಟ್ಟಿ ಅವರು ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿ ಹೊಸ ಶಕೆ ಬರೆದಿದ್ದಾರೆ.ನಿರಂತರ 11 ವರ್ಷಗಳ ಕಾಲ ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವ ಜಾರಿ ಮಾಡಿ ಕನ್ನಡ ಅಭಿಮಾನ, ಕನ್ನಡ ದ ಜಾಗೃತಯನ್ನು ವಿದೇಶ ದಲ್ಲೂ ಮಾಡಿ ಜನ ಮನ್ನಣೆ ಗೆ ಪಾತ್ರರಾಗಿದ್ದಾರೆ.
ಸಮಾಜಮುಖಿ ಸೇವೆ : ಡಾ. ದೀಪಕ್ ಶೆಟ್ಟಿ ಅವರು ಬಡವರ ಬಂಧು.ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ನೆರವು ನೀಡಿದ್ದಾರೆ.ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವಾರು ಕಲಾವಿದರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಿಗೆ ಬೆಂಬಲ ನೀಡಿದ್ದಾರೆ. ಯುವಜನರನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ನಿರಂತರ ಪ್ರಯತ್ನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಪ್ರತಿಧ್ವನಿ, ರಾಷ್ಟ್ರೀಯ ಪತ್ರಿಕೆ ಎಂಪಿ ಎಂಎಲ್ ಎ ನ್ಯೂಸ್ ನ್ ಮಹಾಪೋಷಕರಾಗಿರುವ ಡಾ. ದೀಪಕ್ ಶೆಟ್ಟಿ ಅವರು ನುಡಿದಂತೆ ನಡೆವ ಸಮರ್ಥ ನಾಯಕ. ಬೆಂಗಳೂರು ಬಂಟರ ಸಂಘದ ಸಮಸ್ತ ಮತದಾರ ಬಾಂಧವರೇ, ನಿಮ್ಮ ಅಮೂಲ್ಯ ಮತವನ್ನು ಡಾ. ದೀಪಕ್ ಶೆಟ್ಟಿ ಮತ್ತವರ ಟೀಮ್ ಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿ ಈ ಮೂಲಕ ವಿನಂತಿ

Read More News

Scroll to Top