ಮಂಗಳೂರು, ಜೂ.17; ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟಿನ ಜಿಲ್ಲಾಧ್ಯಕ್ಷರಾದ ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಇವರು ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಾಲ್ಮೀಕಿ ಆಶ್ರಮ ಶಾಲೆ, ಕದ್ರಿ ಪದವು ಮಂಗಳೂರು ಇಲ್ಲಿ 250ನೇ ಉಚಿತ ಶಿಬಿರವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ದ. ಕ. ಜಿಲ್ಲೆ ಆಯುಷ್ ವಿಭಾಗ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಯೋಗ ಶಿಬಿರ ಆರಂಭಗೊಂಡಿದೆ.

ಯೋಗ ಗುರು ಡಾ. ಜಗದೀಶ್ ಶೆಟ್ಟಿ ಮಕ್ಕಳಿಗೆ ವಿಶೇಷ ಯೋಗದ ಪ್ರಾತ್ಯಕ್ಷಿಕತೆ ಮತ್ತು ವಿವರಣೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್ ಇವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾ ಡುತ್ತಾ,ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಪೂರಕ ಎಂದರು.ಮುಖ್ಯ ಅತಿಥಿ ಜಿಲ್ಲಾ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಪ್ರಕಾಶ್ ಎ. ಜೆ.ಮಾತನಾಡುತ್ತಾ, ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಪರಿಣಾಮಕಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಶಿಕ್ಷಕಿ ಭಾರತಿ ಶೆಟ್ಟಿ, ಶಾಲೆಯ ವಾರ್ಡನ್ ಸರಸ್ವತಿ, ಮುಖ್ಯ ಶಿಕ್ಷಕಿ ಸುನೀತಾ, ನಿರ್ಮಲ, ಧನ್ಯ, ದಿವ್ಯ, ಸವಿತ, ಸುಶ್ಮಿತ, ಚೇತನಾ, ಪ್ರಕಾಶ ಹಾಗೂ 200ಕ್ಕೂ ಮಿಕ್ಕಿ ಮಕ್ಕಳು ಉಪಸ್ಥಿತರಿದ್ದರು.
























































































































































































