ಸತ್ಯದ ಅನಾವರಣ ಮಾಧ್ಯಮದ ಜವಾಬ್ದಾರಿ-ಪಿ.ಬಿ.ಹರೀಶ್ ರೈ

11.6K Views 7h ago

ಮಂಗಳೂರು: ಮಾಧ್ಯಮವು ಸಮಾಜದ ಕೈಗನ್ನಡಿ. ಮಾಧ್ಯಮಗಳು ಸಮಾಜದ ನೈಜ ಚಿತ್ರಣವನ್ನು, ಆಗುಹೋಗುಗಳನ್ನು, ಸಾಧನೆ ಮತ್ತು ಸಮಸ್ಯೆಗಳನ್ನುನೇರವಾಗಿ ಜನತೆಗೆ ತಲುಪಿಸುತ್ತಿವೆ. ಸತ್ಯದ ಅನಾವರಣ ಮಾಧ್ಯಮದ ಜವಾಬ್ದಾರಿ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.
ರೋಟರಿ ಕ್ಲಬ್ ಮಂಗಳೂರು ನಾರ್ತ್ ಇದರ ವತಿಯಿಂದ ನಗರದ ಮಲ್ಲಿಕಟ್ಟೆಯ ರೋಟರಿ ಬಾಲ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮ ಮತ್ತು ಸಮಾಜ ವಿಷಯದ ಬಗ್ಗೆ ಉಪನ್ಯಾಸ ನೀಡಿದರು,
ಇಂದಿನ ವಿದ್ಯಾಥಿಗಳು , ಯುವ ಜನತೆ ಓದಿನಿಂದ ವಿಮುಖರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಚಾರಗಳು ಸತ್ಯ ಎಂದು ನಂಬುವ ಸ್ಥಿತಿ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದಿನ ಪತ್ರಿಕೆಗಳು ನೈಜ ಸುದ್ದಿಯ ಜತೆಗೆ ಜ್ಞಾನದ ಆಗರವಾಗಿದೆ. ಪತ್ರಿಕೆ ಓದುವಂತೆ ಮಕ್ಕಳನ್ನು ಪ್ರೇರೇಪಿಸುವುದು
ಹಿರಿಯರ ಜವಾಬ್ದಾರಿ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷ ಡಾ.ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಂಭವಿ ಪ್ರಭು, ನಿಕಟಪೂರ್ವ ಅಧ್ಯಕ್ಷ ಮೋಹನ್ ನಾಯರ್, ನಿಯೋಜಿತ ಅಧ್ಯಕ್ಷ ಸುದರ್ಶನ್ ನಾಯಕ್ , ಡಾ.ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಆರ್.ಎಂ.ಗೊಗೆರಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಗಣೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Read More News

Scroll to Top