ಮಂಗಳೂರು-2 ದಿನಗಳ ಹಿಂದೆ ನಸುಕಿನ ಜಾವ 4.30ಕ್ಕೆ ಮಂಗಳೂರು ಸ್ಟೇಟ್ ಬ್ಯಾಂಕ್ ನ ಹ್ಯಾಮಿಲ್ಟನ್ ವೃತ್ತದ ಬಳಿ ಹೆಬ್ಬಾವೊಂದು ರಸ್ತೆ ಮಧ್ಯೆ ಹಾದು ಹೋಯಿತು.


ನಾವು ಡ್ಯೂಟಿ ಮುಗಿಸಿ ಬೈಕಲ್ಲಿ ಬರುವಾಗ ಕಂಡೆವು. ನಾವೆಲ್ಲ ಅದು ರಸ್ತೆ ದಾಟುವ ತನಕ ಕಾದು ಕುಳಿತು ಬೈಕ್ ನಿಲ್ಲಿಸಿ ನಂತರ ಹೊರಟೆವೆಂದು ಹೊಗೈ ಬಜಾರ್ ನಿವಾಸಿಯೊಬ್ಬರು ಹೇಳಿದ್ದಾರೆ. ನಗರದಲ್ಲಿ ಹೆಬ್ಬಾವುಗಳು ಹೆಚ್ಚುತ್ತಿದ್ದು, ನಿನ್ನೆ ರಾತ್ರಿ ಕೊಟ್ಟಾರ ಕ್ರಾಸ್ ನ ಪೂವರಿ ಫಾಸ್ಟ್ ಫುಡ್ ಬಳಿ ಹೆಬ್ಬಾವೊಂದು ಪತ್ತೆಯಾದಾಗ ತುಳುನಾಡು ಪ್ರತಿಷ್ಠಾನದ ಅಧ್ಯಕ್ಷ ರಾಜೇಶ್ ಅಮಿನ್ ಮೂಲ್ಕಿ ಮತ್ತು ಸ್ಥಳೀಯರಾದ ರಾಕೇಶ್ ಕೊಟ್ಟಾರ ಕ್ರಾಸ್ ಅವರು ಅದನ್ನು ಹಿಡಿದು ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಇದನ್ನು ಈ ಕೆಳಗಿನ ಲಿಂಕ್ ಬಳಸಿ ನೋಡಬಹುದಾಗಿದೆ.



























































































































































































