ಜನ ಮೆಚ್ಚುಗೆ ಗಳಿಸಿದ ಬ್ರಹ್ಮರಕೂಟ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90ರ ಸಂಭ್ರಮ

113.8K Views 15 Dec 2025

ಬಂಟ್ವಾಳ: ಬಂಟ್ವಾಳ ತಾಲೂಕು, ಕಳ್ಳಿಗೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇದರ 9೦ರ ಸಂಭ್ರಮ ದಿನಾಂಕ 13-12-2025ರಂದು ಅದ್ದೂರಿಯಾಗಿ ನೆರವೇರಿತು. 1935ರಲ್ಲೇ ಸ್ಥಾಪನೆಗೊಂಡ ಶಾಲೆಯಲ್ಲಿ ಈಗಾಗಲೇ ಅನೇಕ ಸತ್ಪ್ರಜೆಗಳ ನಿರ್ಮಾಣವಾಗಿದೆ. ಇಲಾಖೆಯ ಮಾನ್ಯತೆಯೊಂದಿಗೆ ಕನ್ನಡ ಹಾಗೂ ಇಂಗ್ಲೀಷ್‌ ಮಾಧ್ಯಮದಲ್ಲಿ ತರಗತಿಗಳನ್ನು ದ್ವಿತೀಯ ವರ್ಷ ಯಶಸ್ವಿಯಾಗಿ ನಡೆಸಿದೆ. ಇಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣವನ್ನು ಉಚಿತವಾಗಿ ಪಡೆಯಿರಿ. ಮುಂದಿನ 1೦ ವರ್ಷದಲ್ಲಿ 1೦೦ರ ಸಂಭ್ರಮ ಇನ್ನಷ್ಟು ಪೋಷಕರ ಶಿಕ್ಷಣಾಸಕ್ತರ ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವಿನಲ್ಲಿ ಅತಿ ವಿಜೃಂಭಣೆಯಿಂದ ನೆರವೇರಲಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಇವರು ಉದ್ಘಾಟಿಸಿ,ಮಾತನಾಡಿದರು.
ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಧ್ವಜಾರೋಹಣವನ್ನು ಕಳ್ಳಿಗೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಇವರು ನೆರವೇರಿಸಿ ಶುಭಾಶಯ ನುಡಿದರು. ಬಳಿಕ ವಿದ್ಯಾರ್ಥಿಗಳ ಏರೋಬಿಕ್ ವ್ಯಾಯಾಮ ಪ್ರದರ್ಶನ ವಿಭಿನ್ನ ಮಾದರಿಯಲ್ಲಿ ನಡೆಯಿತು. ಬಳಿಕ ಬೆಳಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ನೆರವೇರಿತು.


ದ.ಕ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಬಿ .ರಮಾನಾಥ ರೈ ಇವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸುವುದರೊಂದಿಗೆ ರೋಟರಿ ಸಹಯೋಗದಲ್ಲಿ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘ ಕೊಡುಗೆಯಾಗಿ ನೀಡಿದ ಪ್ಲೇ ಗ್ರೌಂಡ್‌ ವಸ್ತುಗಳ ಉಪಯೋಗಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ದತ್ತು ಸ್ವೀಕಾರ ಸಮಿತಿಯ ಗೌರವ ಸಲಹೆಗಾರರಾದ ಚಂದ್ರಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯತ್ ಕಳ್ಳಿಗೆ ಇದರ ಉಪಾಧ್ಯಕ್ಷರಾದ ಶ್ರೀಮತಿ ವಾರಿಜ, ಗ್ರಾಮ ಪಂಚಾಯತ್ ಕಳ್ಳಿಗೆ ಸದಸ್ಯರಾದ ರವಿರಾಜ್ ಜೈನ್, ಶ್ರೀಮತಿ ರತ್ನಾವತಿ, ತುಂಬೆ ಕ್ಲಸ್ಟರ್ ಸಿ.ಆರ್.ಪಿ.ರಮೇಶ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜೇಸಿ ಸುರೇಶ್ ಕುಮಾರ್ ಬಿ ನಾವೂರು ವಕೀಲರು, ರೋಟರಿ ಕ್ಲಬ್ ಬಿಸಿ ರೋಡ್ ಅಧ್ಯಕ್ಷರಾದ ಶ್ರೀ ದಿವಾಕರ್ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಅಧ್ಯಕ್ಷರಾದ ಮಧುಸೂದನ್ ಶೆಣೈ, ನಿಯಾಝ್‌ ತಲಪಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೋಗೀಶ್ ದರಿಬಾಗಿಲು, ಕೋಶಾಧಿಕಾರಿ ಪ್ರಶಾಂತ್‌ ಮುಂಡಾಜೆ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಶ್ ಅನಿಲ್ ಪಂಡಿತ್, ಜ್ಯೋತಿಷ್ಯರು, ಮೋಹನ್ ದಾಸ್ ರೈ ಪೆತ್ತಮುಗೇರು, ದಿನೇಶ್ ರೈ ಪೆತ್ರಮುಗೇರು, ಸುರೇಶ್ ರೈ, ಪೆತ್ತಮುಗೇರು, ಶಶಿಧರ ಬ್ರಹ್ಮರಕೂಟ್ಟು, ಶ್ರೀಮತಿ ಶಶಿಪ್ರಭಾ ಗುತ್ತಿನಹಿತ್ತಿಲು, ಶ್ರೀಮತಿ ವಾಣಿ ಪೆರಿಯೋಡಿ , ಪೂವಪ್ಪ ಮೇಸ್ತ್ರಿ ವಳವೂರು, ಹಮೀದ್, ಬ್ರಹ್ಮರಕೂಟ್ಲು, ಸಂಜೀವ ದರಿಬಾಗಿಲು, ಆಕ್ಟರ್ ಅಲಿ, ಶಿಕ್ಷಕರು, ಟಿ. ಇದಿನಬ್ಬ ತಲಪಾಡಿ, ಕೆ.ಎಸ್.ಆರ್.ಟಿ.ಸಿ., ಶ್ರೀಮತಿ ಕುಸುಮ ವಿಶ್ವನಾಥ ಜಾರಂದಗುಡ್ಡೆ, ಶ್ರೀಮತಿ ಪ್ರಿಯದರ್ಶಿನಿ ದರಿಬಾಗಿಲು, ಸಂತೋಷ್ ಬಂಗೇರ, ಜಗದೀಶ್ ಬಂಗೇರ ಕಂಜೆತ್ತೂರು, ಮನೋಹರ ಕಂಜೆತ್ತೂರು, ಸಂದೇಶ್ ದರಿಬಾಗಿಲು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ 2024-25ನೇ ಸಾಲಿನ ಮುಖ್ಯಮಂತ್ರಿಯವರ ಬಂಗಾರದ ಪದಕ ಪ್ರಶಸ್ತಿ ಪುರಸ್ಕೃತರಾದ ಶಾಲೆಯ ಹಳೆ ವಿದ್ಯಾರ್ಥಿ ಸುಧೀರ್ ಜಾರಂದಗುಡ್ಡೆ, ರೋಟರಿ ಜಿಲ್ಲೆ 3181ರ ಸಮಾಜ ಸೇವಾ ಪ್ರಶಸ್ತಿ ವಿಜೇತರು ಹಾಗೂ ಸ. ಹಿ. ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನ ಸಹಶಿಕ್ಷಕರಾದ ಶ್ರೀಮತಿ ಭಾರತಿ, 23ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ – ನಾಲ್ಕು ಪದಕಗಳನ್ನು ಗೆದ್ದ ಸಾಧಕಿ ಶ್ರೀಮತಿ ಅಶ್ಲೀಟ್ ಗ್ರೇಡಿಸ್ ಪಾಯಸ್ ಇವರನ್ನು ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಉದಯ ಕುಮಾರ್ ಜ್ಯೋತಿಗುಡ್ಡೆ ಇವರು ಮಾತನಾಡಿ ಶಾಲೆ ಕೇವಲ ಕಟ್ಟಡ ಅಲ್ಲ. ಅಲ್ಲಿಗೆ ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಕಳಿಸಿದರಷ್ಟೆ ಶಾಲೆ ಉಳಿಯಲು ಸಾಧ್ಯ. ಕಲಿಕೆಯಲ್ಲಿ ಕಲಿಸುವಿಕೆಯಲ್ಲಿ ಈಗಾಗಲೇ ಸರಕಾರಿ ಶಾಲೆಗಳು ಮುಂಚೂಣಿಯಲ್ಲಿರುವಾಗ ಶಾಲೆಗೆ ಸೇರಿಸಲು ಯಾವುದೇ ಸಂಶಯ ಬೇಕಾಗಿಲ್ಲ. 1೦೦ರ ಸಂಭ್ರಮಾಚರಣೆ ಇನ್ನಷ್ಟು ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಇನ್ನೂ ಅದ್ದೂರಿಯಾಗಿ ನಡೆಯಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳ ಪ್ರಾರ್ಥನೆ ಮೂಲಕ ಪ್ರಾರಂಭ ಗೊಂಡ ಉದ್ಘಾಟನಾ ಸಮಾರಂಭಕ್ಕೆ ಬಂದ ವರನ್ನು ಮುಖ್ಯಶಿಕ್ಷಕಿ ಶ್ರೀಮತಿ ಕಲ್ಯಾಣಿ ಜಿ. ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವೇದಾವತಿ ವಂದನಾರ್ಪಣೆ ಸಲ್ಲಿಸಿದರು.
ಅಪರಾಹ್ನ 4 ಘಂಟೆಯಿಂದ ಶಾಲಾ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಸಂಜೆ 6.00ರಿಂದ ಗೀತಾಂಜಲಿ ಆರ್ಕೆಸ್ಟ್ರಾ ಬಳಗ ಬಿ.ಸಿ.ರೋಡ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top