ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಆಶ್ರಯದಲ್ಲಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಹಯೋಗದೊಂದಿಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ಹಾಗೂ ಧ್ವನಿ ವರ್ಧಕ ವಿತರಣ ಕಾರ್ಯಕ್ರಮ ಮತ್ತು 216 ಗಂಟೆಗಳ ಕಾಲ ನಿರಂತರ ಭರತ ನಾಟ್ಯ ಮಾಡುವ ಮೂಲಕ GOLDEN BOOK OF WORLD RECORD ನಲ್ಲಿ ವಿಶ್ವ ದಾಖಲೆ ಮಾಡಿರುವ ಸಾಧಕಿ ವಿಧುಷಿ ದೀಕ್ಷಾ ವಿ. ಅವರಿಗೆ ಅಭಿನಂದನಾ “ಪುರಸ್ಕಾರ” ಸಮಾರಂಭ ಇಂದು (ದಿನಾಂಕ 27/11/2025 ನೇ ಗುರುವಾರ) ಸಂಜೆ ಗಂಟೆ 6ಕ್ಕೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.






ಈ ಮಹತ್ವ ಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ ನೆರವೇರಿಸಲಿದ್ದು , NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಅಧಕ್ಷತೆವಹಿಸಲಿರುವ ಈ ಕಾರ್ಯಕ್ರಮದಲ್ಲಿ, ಬೆಂಗಳೂರು ಮೂಲದ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ ವಿಶೇಷ ಚೇತನಾ ಕಲಾವಿದರಿಗೆ ಸಂಗೀತ ಪರಿಕರ ಮತ್ತು ಧ್ವನಿವರ್ಧಕಗಳನ್ನು ಹಸ್ತಾಂತರಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಸಮಾಜ ಸೇವಕ ರಂಜನ್ ಮತ್ತು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (KSSAP) ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
“ಒಂದೇ ಮಾತರಂ ” ಗೀತೆಯೊಂದಿಗೆ ಆರಂಭ ಗೊಳ್ಳಲಿರುವ ಈ ಪ್ರಾರ್ಥನಾ ಗೀತೆಯನ್ನು ದೃತಿ ಪಿ.ಶೆಟ್ಟಿ, ಶಿಲ್ಪಾ ಜೆ. ಸಕಲೇಶಪುರ ಮತ್ತು ರೇಖಾ ಸುದೇಶ್ ರಾವ್ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಮಂಗಳೂರಿನ ಜನಪ್ರಿಯ ನಿರೂಪಕಿ, ಮಾತಿನ ಮಲ್ಲಿ ರಶ್ಮಿ ಸನಿಲ್ ನಿರ್ವಹಿಸಲಿದ್ದಾರೆ ಎಂದು NSCDF ಪ್ರಧಾನ ಕಾರ್ಯದರ್ಶಿ ದಿನಕರ ಡಿ. ಬಂಗೇರ ಮಾಧ್ಯಮ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.



























































































































































































