ವೇಣೂರು ಚರ್ಚ್: ಪ್ರತಿಭಾನ್ವಿತ ಬಾಲಕಿಗೆ ಸನ್ಮಾನ

116.5K Views 17 Jun 2025

ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ಸದಸ್ಯೆ ನಿಶೆಲ್‌ ಫೆರ್ನಾಂಡಿಸ್‌ ಅವರನ್ನು ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಯುಕ್ತ ಕ್ಯಾಥೊಲಿಕ್‌ ಸಭಾ ವತಿಯಿಂದ ಸನ್ಮಾನಿಸಲಾಯಿತು. ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಎಡ್ವಿನ್‌ ಸಂತೋಷ್‌ ಮೋನಿಸ್‌ ಅವರು ಮಾತನಾಡಿ ನಿಶೆಲ್ ಅವರು ಬಹುಮುಖ ಪ್ರತಿಭೆ ಹೊಂದಿದ್ದು, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಚರ್ಚಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿ ಆಕೆಯನ್ನು ಮತ್ತು ಅಕೆಯ ಹೆತ್ತವರನ್ನು ಆಭಿನಂದಿಸಿದರು.
ಸಮಾರಂಭದಲ್ಲಿ ವಂದನೀಯ ಫಾ. ಲಾಯ್‌ಸ್ಟನ್‌ ಕೊರ್ಡೇರೊ, ಚರ್ಚಿನ ಉಪಾಧ್ಯಕ್ಷ ಡೆನ್ನಿಸ್‌ ಸಿಕ್ವೇರಾ, ಕಾರ್ಯದರ್ಶಿ ಜೆತ್ರುದ್‌ ಡಿ’ಸೋಜಾ, ಕ್ಯಾಥೊಲಿಕ್‌ ಸಭಾ ಘಟಕದ ಅಧ್ಯಕ್ಷ ಅರುಣ್‌ ಡಿ’ಸೋಜಾ, ಕಾರ್ಯದರ್ಶಿ ಗ್ರೇಸಿ ನೊರೊನ್ಹಾ ಅವರು ಜತೆಗೂಡಿ ಫಲ, ಪುಷ್ಪ ನೀಡಿ ಶಾಲು ಹೊದಿಸಿ ನಿಶೆಲ್‌ ಅವರನ್ನು ಸನ್ಮಾನಿಸಿದರು. ಕ್ಯಾಥೊಲಿಕ್‌ ಸಭಾ ಮಾಜಿ ಕೇಂದ್ರೀಯ ಅಧ್ಯಕ್ಷ ಎಲ್.ಜೆ. ಫೆರ್ನಾಂಡಿಸ್‌ ಮತ್ತಿತರರು ಉಪಸ್ಥಿತರಿದ್ದರು. ನಿಶೆಲ್‌ ಅವರು ಚರ್ಚ್ ಗಾಯನ ಮಂಡಳಿಯಲ್ಲಿ ಕೀ ಬೋರ್ಡ್ ನುಡಿಸಿ ಸಹಕರಿಸುತ್ತಿದ್ದಾರೆ. ಅವರು ಚರ್ಚಿನ ಗಾಯನ ಮಂಡಳಿಯ ಮುಖ್ಯಸ್ಥ ಆಲ್ವಿನ್‌ ಫೆರ್ನಾಂಡಿಸ್‌ ಮತ್ತು ಅನಿತಾ ಡಾಯಸ್‌ ಅವರ ಪುತ್ರಿ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top