ಬಂಟ್ವಾಳ: ಮೊಗಾರ್ನಾಡ್ ಚರ್ಚ್ ನಲ್ಲಿ 26 ಮಕ್ಕಳಿಗೆ ಪ್ರಥಮ ಪರಮ ಪವಿತ್ರ ಪ್ರಸಾದ

111.1K Views 13 May 2025

ಬಂಟ್ವಾಳ ತಾಲೂಕು ಮೊಗರ್ನಾಡ್ ದೇವ ಮಾತಾ ಚರ್ಚ್ ನ 26 ಮಂದಿ ಮಕ್ಕಳು ಮೇ 11 ರಂದು ನಡೆದ ಸಮಾರಂಭದಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.
ಚರ್ಚ್ ನ ಧರ್ಮಗುರು ಫಾ. ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾ. ನವೀನ್ ಪಿಂಟೊ, ಫಾ. ಆಸ್ಟಿನ್ ಫೆರ್ನಾಂಡಿಸ್, ನೂತನ ಧರ್ಮಗುರು ಫಾ. ಮೆಲ್ವಿನ್ ಡಿ ಸೋಜಾ, ಅಥಿತಿ ಗುರು ಉರ್ವ ಚರ್ಚಿನ ಧರ್ಮ ಗುರು ಫಾ. ಬೆಂಜಮಿನ್ ಪಿಂಟೊ ಅವರು ಬಲಿ ಪೂಜೆಯನ್ನು ನಡೆಸಿದರು. ಹೊಸ ಗುರು ಫಾ ಮೆಲ್ವಿನ್ ಡಿ ಸೋಜಾ ಅವರು ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು. ಪರಮ ಪ್ರಸಾದದ ಮಹತ್ವವನ್ನು ವಿವರಿಸಿದ ಅವರು, ಪ್ರತಿ ಬಾರಿ ನಾವು ಪರಮ ಪವಿತ್ರ ಪ್ರಸಾದ ಸ್ವೀಕರಿಸಿದಾಗ ನಾವು ಯೇಸು ಕ್ರಿಸ್ತರಂತೆ ಆಗುತ್ತೇವೆ ಎಂದು ಹೇಳಿ ಪ್ರಥಮ ಬಾರಿಗೆ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದ ಮಕ್ಕಳಿಗೆ ಶುಭ ಹಾರೈಸಿದರು.
ಪ್ರಥಮ ಬಾರಿಗೆ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದ ಬಳಿಕ ಮಕ್ಕಳು ಸ್ತುತಿ ಗೀತೆಯನ್ನು ಹಾಡಿ ಕೃತಜ್ಞತೆ ಸಲ್ಲಿಸಿದರು.
ಚರ್ಚಿನ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top