ಬಹುಮುಖೀ ಸಾಂಸ್ಕೃತಿಕ ಸಕ್ರಿಯನ ಪುಷ್ಪವೃಷ್ಟಿ

119.8K Views 22 Feb 2025

ಸೃಷ್ಟಿ ಸಿರಿಯಲಿ ಪುಷ್ಪ ವೃಷ್ಟಿ.
ಪ್ರಾ.ಭಾಸ್ಕರ ರೈ ಕುಕ್ಕುವಳ್ಳಿ.
ಪುಟ 136.
ರಾಜ್ ಪ್ರಕಾಶನ ಮೈಸೂರು.2024
ರೂ 150.

ತುಳು ಕನ್ನಡ ಲೇಖಕ, ಕವಿ – ಅರ್ಥದಾರಿ, ಅಧ್ಯಾಪಕ, ವಾಗ್ಮಿ. ಗ್ರಂಥ ಸಂಪಾದಕ, ವಾಹಿನಿ ನಿರ್ವಾಹಕ, ನಿರೂಪಕ, ನಟ, ಪ್ರಾ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಈ ಕವಿತಾ ಸಂಕಲನವು ವೈವಿಧ್ಯ ಯುತ ಗುಚ್ಛ; ಸೃಷ್ಟಿಯ ಸಿರಿಯ ಸ್ಪಂದನ. ಇದರಲ್ಲಿ ಕಾವ್ಯ ಸಿರಿ, ಭಾವ ಸಿರಿ, ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ 80 ಕ್ಕೂ ಮಿಕ್ಕಿ ಕವಿತೆಗಳಿವೆ.
ವಿಸ್ತಾರ ವ್ಯಾಪ್ತಿ ಮತ್ತು ಉದಾರ ನಿಲುವಿನ, ಭಾವದೊಳ್ ಒಳಗೊಂಬ ಕವಿತ್ವದ ಕುಕ್ಕುವಳ್ಳಿ ಮನನ ಗಾಯನ ಎರಡಕ್ಕೂ ಒದಗುವ ರಚನೆಗಳನ್ನು ನೀಡಿದ್ದಾರೆ. ಮಾವಿನ ಮರಗಳು ಹೂ ಬಿಡುವ ಕಾಲದಲ್ಲಿ ಈ ಪುಷ್ಪ ವೃಷ್ಟಿ ಸಂಕಲನ ಹೊರಬರುತ್ತಿವುದು ಅಭಿನಂದನೀಯ.


ಚೆಲುವು,ಜಾಗ್ರತಿ, ಆಶಯ, ಆರಾಧನೆ, ಭಾವ ಸೂಕ್ಷ್ಮ, ಪುರಾಣ ರೂಪಕ, ಸಮಾಜ ಪರತೆ, ಪ್ರೀತಿ , ದೈವ ಚಿಂತನ ತುಂಬಿರುವ ಹಲವು ಕವಿತೆಗಳಿವೆ.
ಅಗಸ್ತ್ಯ ಕೋಪ, ನಗುಚೆಲ್ಲಿ ಹೋಯ್ತೆಲ್ಲಿ, ಅಷ್ಟಾವಂಕನ ಅಳಲು, ವಿದ್ಯಾರಣ್ಯ ಸ್ಫೂರ್ತಿ, ಚಿಟ್ಟೆ ಹಿಡಿಯುವ ಹುಡುಗಿ, ವೀರಯತಿ ವಿವೇಕಾನಂದ, ಭಾಗ್ಯದ, ದುಗುಡವಿದೇತಕೆ, ರಾಮನಾಗು, ನಾಗಬ್ರಹ್ಮನೆ ಮೊದಲಾದ ಕವನಗಳು ವಿಶಿಷ್ಟ ವಾಗಿವೆ.


ಪ್ರತಿಭೆಯ ಸಮ್ರೃದ್ಧಿ, ಭಾವ, ಅನುಭಾವ ವೈವಿಧ್ಯ ಇರುವ, ಕವಿ ಕುಕ್ಕುವಳ್ಳಿ ಈಗಾಗಲೇ ತುಳು ಕವಿತಾ ಸಂಕಲನ ‘ಸೀಯನ’ ತಂದಿದ್ದಾರೆ.. 30 ಕ್ಕೂ ಮಿಕ್ಕಿದ ಗದ್ಯ ಪದ್ಯ ನಾಟಕಾದಿ ಕೃತಿಗಳ ಕರ್ತೃ, ರೈಗಳ ಬಾಲ್ಯೊ ಟ್ಟು ಗುತ್ತು ದೈವ ಸಿರಿ ಸಿಹಿಯಾನ ಪಸರಿಸಿ ಮಾಧುರ್ಯ ನೀಡುತ್ತಿರಲಿ..

  • ಡಾ.ಎಂ.ಪ್ರಭಾಕರ ಜೋಶಿ

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top