ವಿಶೇಷ ವರದಿ-ಡಾ.ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಕೆಎಂಸಿ ಆಸ್ಪತ್ರೆಯು ಹಲವು ಪ್ರಖ್ಯಾತ ವೈದ್ಯರುಗಳನ್ನೊಳಗೊಂಡಿದ್ದು ,ಅತ್ಯಾಧುನಿಕ ಮಾದರಿಯ ಚಿಕಿತ್ಸಾ ವಿಧಾನಗಳಿಂದ ಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಜನಮನ್ನಣೆ ಪಡೆದಿದೆ.


ಕೆಎಂಸಿ ಅತ್ತಾವರ ಮತ್ತು ಕೆಎಂಸಿ ಜ್ಯೋತಿ ಆಸ್ಪತ್ರೆಗಳಲ್ಲಿ ವಿವಿಧ ಖಾಯಿಲೆಗಳಿಗೆ ಹಲವು ನುರಿತ ತಜ್ಞರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು ಇದು ಜನಮನ್ನಣೆ ಗಳಿಸಿದೆ. ಮಂಗಳೂರಲ್ಲಿ ಬಹುತೇಕ ಮಂದಿಗೆ ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಸಾಮಾನ್ಯ ಕಾಯಿಲೆಗಳು ಇದ್ದು ,ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಉತ್ತಮ ವೈದ್ಯಕೀಯ ತಜ್ಞರ ಅಗತ್ಯತೆ ಇರುತ್ತದೆ. ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಜ್ಯೋತಿಯಲ್ಲಿ ಹಲವು ಉತ್ತಮ ವೈದ್ಯಕೀಯ ತಜ್ಞರಿದ್ದು ಇವರ ಪೈಕಿ ,ಮೆಡಿಸಿನ್ ವಿಭಾಗದ ಅಡಿಷನಲ್ ಪ್ರೊಫೆಸರ್ ಮತ್ತು ಕೆಎಂಸಿ ಆಸ್ಪತ್ರೆಯ ಉಪ ಅಧೀಕ್ಷಕರಾಗಿರುವ ದೀಪಕ್ ಆರ್. ಮಡಿಯವರು ಗಮನಸೆಳೆಯುತ್ತಾರೆ. ಜನಮನ್ನಣೆ ಗಳಿಸಿದ್ದಾರೆ.


ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ, ಮಂಗಳವಾರ, ಗುರುವಾರ, ಶನಿವಾರದಂಡು ಓಪಿಡಿ ವಿಭಾಗದಲ್ಲಿ ಹೊರರೋಗಿಗಳಿಗೆ ಲಭ್ಯವಿರುವ ದೀಪಕ್ ಮಡಿಯವರು ವೈದ್ಯಕೀಯ ಜಗತ್ತು ಕಂಡಿರುವಂತಹ ಅತ್ಯುತ್ತಮ ಮತ್ತು ಅನುಭವೀ ತಜ್ಞ ವೈದ್ಯರಾಗಿದ್ದರೆ. ಇವರು ರೋಗಿಗಳನ್ನು ಪರೀಕ್ಷಿಸುವ ರೀತಿ ಮತ್ತು ಅವರಿಗೆ ಧೈರ್ಯ ತುಂಬುವ ಹಾಗೂ ವಿಶ್ವಾಸ ಭರಿಸುವ ವಿಧಾನ ಎಲ್ಲರಿಗೂ ಇಷ್ಟವಾಗುತ್ತದೆ. ಎಂತಹ ಕ್ಲಿಷ್ಕಕರ ಕಾಯಿಲೆ ಇದ್ದರೂ ದೀಪಕ್ ಮಡಿಯವರು ರೋಗಿಗಳನ್ನು ಪರೀಕ್ಷಿಸಿದರೆಂದರೆ ರೋಗಿಗಳ ಮುಕ್ಕಾಲು ಪಾಲು ಕಾಯಿಲೆ ವಾಸಿಯಾದದ್ದಂತೆ. ಅಷ್ಟೊಂದು ಧೈರ್ಯವನ್ನು ಅವರು ತುಂಬುತ್ತಾರೆ. ತನ್ನ ಬಳಿಗೆ ಬರುವ ರೋಗಿಗಳನ್ನು ಆತ್ಮೀಯತೆಯಿಂದ ಕಾಣುವ ಇವರು ರೋಗಿಗಳ ಪಾಲಿಗೆ ಪ್ರತ್ಯಕ್ಷ ದೇವರಿದ್ದಂತೆ. ನಿಸ್ವಾರ್ಥ ವೈದ್ಯಕೀಯ ಸಮಾಜಸೇವಾ ಮನೋಭಾವದ ದೀಪಕ್ ಮಡಿಯವರು ಸಾವಿರಾರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಅವರ ಕೈಗುಣವು ಉತ್ತಮವಾಗಿದೆ. “ವೈದ್ಯೋ ದೇವೋಭವ” ಎನ್ನುತ್ತೇವೆ. ಇದು ದೀಪಕ್ ಮಡಿಯವರ ಪಾಲಿಗೆ ಅಕ್ಷರಶಃ ಸತ್ಯವಾಗಿದೆ.



















































































































































































