ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಪಠ್ಯ- ಪಠ್ಯೇತರ ಚಟುವಟಿಕೆಗಳು ಪರಸ್ಪರ ಪೂಕರವಾಗಿರ ಬೇಕು: ವಂ. ಫಾ. ಡಿ’ಕೋಸ್ಟಾ

ಮಂಗಳೂರು; ಕೆಲರಾಯ್:ಶಾಲಾ ಅವಧಿಯಲ್ಲಿ ಕಲಿಯುವ ಪಾಠಗಳು ಹಾಗೂ ನಡೆಸುವ ಪಠ್ಯೇತರ ಚಟುವಟಿಕೆಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕೆಲರಾಯ್‌ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಂದನೀಯ ಗುರು ಸಿಲ್ವೆಸ್ಟರ್ ಡಿ’ಕೋಸ್ಟಾ ಹೇಳಿದರು.ಕೆಲರಾಯ್‌ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಐದು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜೂನ್ ತಿಂಗಳಿನಿಂದ ಮಾರ್ಚ್ ವರೆಗೆ ವಿದ್ಯಾರ್ಥಿಗಳು ಶಾಲಾ ಕೊಠಡಿಯ ನಾಲ್ಕು ಗೋಡೆಗಳ ನಡುವೆ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆಗೆ ತೆರಳುವ ಮುನ್ನ ಒತ್ತಡಗಳಿಂದ ಮುಕ್ತಗೊಳಿಸಿ ಅವರ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಈ ಶಿಬಿರ ನಿಜವಾಗಿಯೂ ಪ್ರಶಂಸಾರ್ಹ ಎಂದರು.ವೇದಿಕೆಯಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಂದನೀಯ ಗುರು ರೋಶನ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ಜಾನ್‌ ಪಾಯ್ಸ್‌, ಐರಿನ್‌ ಮಿನೇಜಸ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವೀಡಲ್‌ ಫೆರ್ನಾಂಡಿಸ್‌ ಸ್ವಾಗತಿಸಿ, ದಿಶಾ ಎಸ್..ಎನ್. ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಏಪ್ರಿಲ್ 5 ರಿಂದ 6 ರ ವರೆಗೆ ಸುರತ್ಕಲ್ ಸ್ಪೋರ್ಟ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಹಿರಿಯರ ಕ್ರಿಕೆಟ್ ಹಬ್ಬ…!

ಮಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಸುರತ್ಕಲ್ ಸ್ಪೋಟ್ಸ್೯ ಆ್ಯಂಡ್ ಕಲ್ಚರಲ್ ಕ್ಲಬ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಹಿರಿಯರ ಕ್ರಿಕೆಟ್ ಹಬ್ಬವನ್ನು ನಡೆಸಿಕೊಂಡು ಬಂದಿದ್ದು, ಅದರಂತೆಯೆ ಏಪ್ರಿಲ್ 5 ರಿಂದ 6 ರ ವರೆಗೆ ರಾಜ್ಯಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ಓವರ್ ಆರ್ಮ್ ಪಂದ್ಯಾ ಕೂಟ ಸುರತ್ಕಲ್ ಗೋವಿಮದದಾಸ ಕಾಲೇಜ್ ಮೈದಾನಲ್ಲಿ ನಡೆಯಲಿದೆ. ಈ ಕೂಟದಲ್ಲಿ 14 ತಂಡಗಳು ಭಾಗವಹಿಸಲಿದೆ ಎಂದು ಸುರತ್ಕಲ್ ಸ್ಪೋಟ್ಸ್೯ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.5 ಓವರ್‌ ನ ಪಂದ್ಯಾಟ ಇದಾಗಿದ್ದು ಈ ಪಂದ್ಯಾಟದ ವಿಜೆತರಿಗೆ ಪ್ರಥಮ ಬಹುಮಾನ ಟ್ರೋಫಿ ಹಾಗೂ 1 ಲಕ್ಷ ನಗದು, ದ್ವೀತಿಯ ಬಹುಮಾನ ಟ್ರೋಫಿ ಹಾಗೂ 50000 ನಗದು,ತೃತೀಯ ಮತ್ತು ಚತುರ್ಥ ಬಹುಮಾನ ಟ್ರೋಫಿ ಹಾಗೂ ನಗದನ್ನು ನಿಗದಿಪಡಿಸಲಾಗಿದೆ.ಎ. 5 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯುವ ಈ ಪಂದ್ಯಾಟದ ಅಧ್ಯಕ್ಷತೆಯನ್ನು ಕರಾವಳಿ ಕಾಲೇಜ್ ನ ಸಂಸ್ಥಾಪಕ ಎಸ್.ಗಣೇಶ್ ರಾವ್, ದ್ವೀಪ ಪ್ರಜ್ವಲನೆಯನ್ನು ವೇದಮೂರ್ತಿ ಬಿ.ರಮಾನಂದ ಭಟ್, ಹಾಗೂ ಪಂದ್ಯಾಟದ ಉಧ್ಘಾಟನೆ ಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಶಾಸಕ ಡಾ.ವೈ ಭರತ್ ಶೆಟ್ಟಿಯವರು ನಡೆಸಲಿದ್ದಾರೆ.ಈ ಪಂದ್ಯಾವಳಿಯ ಸಮಾರೋಪ ಸಮಾರಂಭ ಏಪ್ರಿಲ್ 6 ರಂದು ಅದಿತ್ಯವಾರ ಸಂಜೆ 5 ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಮುಲ್ಕಿ ಮೂಡಬಿದರೆ ಶಾಸಕ ಉಮನಾಥ ಕೋಟ್ಯಾನ್, ಕೃಷ್ಣ .ಜೆ.ಪಾಲೆಮಾರ್,ಹಾಗೂ ಇನಾಯತ್ ಆಲಿ ಹಾಗೂ ಇನ್ನಿತರರು ಉಪಸ್ಥಿತರಿರುವರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಂಚಾಲಕ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನೀಲ್ ಶೆಟ್ಟಿ ತೇವು ಸೂರಿಂಜೆ, ,ಸುರೇಂದ್ರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮಧ್ಯ, ಕಿರಣ್ ಆಚಾರ್ಯ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

‘ಭಾಷೆ, ಸಂಸ್ಕೃತಿ ಗೌರವಿಸಿ’-ತೆಲುಗು ನಟ ಡಾ. ರಾಜಶೇಖರ್

ಮಂಗಳೂರು ಏಪ್ರಿಲ್ 1,,ಭಾಷೆ, ಸಂಸ್ಕೃತಿ, ಕಲೆ ಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತೆಲುಗು ಸಿನಿಮಾ ನಟ ಡಾ ರಾಜಶೇಖರ್ ಹೇಳಿದರು.ತೆಲುಗು ಕಲಾ ಸಮಿತಿ ವತಿಯಿಂದ ಪಣಂಬೂರು ನವ ಮಂಗಳೂರು ಬಂದರು ಪ್ರಾಧಿಕಾರ ಸಭಾಂಗಣ ದಲ್ಲಿ ಆಯೋಜಿಸಲಾದ ಯುಗಾದಿ ಸಂಭ್ರಮ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತೆಲುಗು ಭಾಷೆ ಮಾತನಾಡುವವರು ಒಟ್ಟಾಗಿ ಸೇರಿ ಎಲ್ಲಾ ರೀತಿಯ ಹಬ್ಬಯನ್ನು ಕುಟುಂಬದ ಹಬ್ಬವಾಗಿ ಆಚರಣೆ ಮಾಡುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದು ಹೇಳಿದರು.ಇದೇ ವೇಳೆ ಸ್ಪಂದನ ಮ್ಯಾಗಜಿನ್ ನನ್ನು ತೆಲುಗು ನಟಿ ಜೀವಿತಾ ರಾಜಶೇಖರ್ ಬಿಡುಗಡೆ ಗೊಳಿಸಿದರು.ನವ ಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ ವೆಂಕಟ ರಮಣ ಅಕ್ಕರಾಜು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಸುಷ್ಮಾ ವೆಂಕಟ ರಮಣ ಅಕ್ಕರಾಜು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿದ್ದರು. ಸಮಿತಿ ಗೌರವಾಧ್ಯಕ್ಷ ಸಾಂಬಶಿವರಾವ್ ನಡೆಲ್ಲಾ,ಅಧ್ಯಕ್ಷ ರಾಮ ಚಂದರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್,ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಿ, ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್ ನಲ್ಲಿ 3 ದಿನಗಳ ಧ್ಯಾನ ಕೂಟ ಆರಂಭ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 3 ದಿನಗಳ ಧ್ಯಾನ ಕೂಟ ಸೋಮವಾರ ಆರಂಭವಾಗಿದೆ.ಶಿವಮೊಗ್ಗ ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಧ್ಯಾನ ಕೂಟ ತಂಡದ ಪ್ರಮುಖರಾದ ಹಾಗೂ ಉತ್ತಮ ಪ್ರವಚನಕಾರರೂ ಆಗಿರುವ ವಂದನೀಯ ಫಾದರ್ ಫ್ರಾಂಕ್ಲಿನ್ ಡಿ ಸೋಜಾ ಅವರು ಧ್ಯಾನ ಕೂಟವನ್ನು ಉದ್ಘಾಟಿಸಿ ಈ ಕಾರ್ಯಕ್ರಮದಿಂದ ಭಕ್ತರಿಗೆ ಆಧ್ಯಾತ್ಮಿಕವಾಗಿ ಪ್ರಯೋಜನ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ ಉಪಸ್ಥಿತರಿದ್ದರು.ಧ್ಯಾನ ಕೂಟವು ಮಾರ್ಚ್ 31 ರಿಂದ ಏಪ್ರಿಲ್ 2 ರ ತನಕ ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.15 ರ ವರೆಗೆ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಕರಂಬಾರು ಇದರ 11ನೇ ವರ್ಷದ ವಾರ್ಷಿಕೋತ್ಸವ

ಅಂಬೇಡ್ಕರ್ ನಗರ ಕರಂಬಾರಿನಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆ ಯನ್ನು ನಂದಕುಮಾರ್ ಶೆಟ್ಟಿ,ಮಾಲಕರು ಎಸ್ ಡಿ ಫುಡ್ಸ್ ಪೇಜಾವರ ಉದ್ಘಾಟಿಸಿ ನಾಗರಿಕ ಸೇವಾ ಸಮಿತಿಯ ಕೆಲಸ ಕಾರ್ಯವನ್ನು ಶ್ಲಾಘನೆ ವ್ಯಕ್ತ ಪಡಿಸಿದರು,ಊರಿನ ಅಭಿವೃದ್ಧಿಯಲ್ಲಿ ನಾಗರಿಕ ಸೇವಾ ಸಮಿತಿಯ ಪಾತ್ರವನ್ನು ಕೊಂಡಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೋಜರಾಜ್ ಕೋಟ್ಯಾನ್ ವಹಿಸಿದ್ದರು.ಅವರು ತಮ್ಮ ಸಮಿತಿಯಿಂದ ಸಮಾಜಮುಖಿ ಕಾರ್ಯಗಳು ಹಿಂದೆಯೂ ಮುಂದೆಯೂ ಹಾಗು ಎಂದೆಂದಿಗೂ ಆಗುತ್ತದೆ ಎಂದು ಭರವಸೆಯನ್ನು ನೀಡಿ ಇನ್ನೂ ಮುಂದೆ ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ನೆರವು ನಮ್ಮ ಸಮಿತಿಯಿಂದ ನೆರವೇರಿಸುವ ಕಾರ್ಯದಲ್ಲಿ ತೊಡಗುವಲ್ಲಿ ನಾವೆಲ್ಲರೂ ಮುಂದಾಗುತ್ತೇವೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಗನ್ನಾಥ್ ಸಾಲ್ಯಾನ್ (ಅಧ್ಯಕ್ಷರು, ಶ್ರೀ ಮಾರಿಯಮ್ಮ ಕೋಟೆ ಬಬ್ಬು ಸ್ವಾಮಿ ದೈವಸ್ಥಾನ ಕರಂಬಾರು, ರಾಜೇಶ್ ಅಮೀನ್ (ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ ಮೂಲ್ಕಿ ಮೂಡಬಿದ್ರೆ ಮಂಡಲ ), ವಾಸು ಪೇಜಾವರ್ ( ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು, ಸತೀಶ್ ದೇವಾಡಿಗ (ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ (ರಿ ) ಕರಂಬಾರು ವಿಶ್ವನಾಥ್ ಕೋಟ್ಯಾನ್ (HPCL ನೌಕರ), ಗೋಪಾಲಕೃಷ್ಣ ಪುನರೂರು ಅಧ್ಯಕ್ಷರು ಬಿಜೆಪಿ sc ಮೋರ್ಚಾ ಮೂಲ್ಕಿ ಮೂಡಬಿದ್ರೆ ಮಂಡಲ, ದಿನೇಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ ಬಿಜೆಪಿ ಬಜಪೆ ಶಕ್ತಿ ಕೇಂದ್ರ ) (ರಮೇಶ್ ಸುವರ್ಣ ( ಮಾಜಿ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಸ್ಥಾಪಿತ ಬಣ ),ಗ್ರೇಶನ್ ಡಿ ಕೋಸ್ತ ( ಅಧ್ಯಕ್ಷರು ನಮ್ಮ ಜವನೆರ್ ಕರಂಬಾರು), ಶಶಿಕಲಾ ರಮೇಶ್ (ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು ), ಮುಂತಾದವರು ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ರಾಜೇಶ್ ಅಮೀನ್ ಹಾಗು ಸವಿತಾ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ತೃಪ್ತಿ ಬಿ ಕೆ ನಿರೂಪಿಸಿ ,ಕೃತಿ ಬಿ ಕೋಟ್ಯಾನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

Dharmapal U. Devadiga: A Visionary Entrepreneur and Philanthropist

Dharmapal U. Devadiga, a renowned entrepreneur and philanthropist, was born on December 10, 1952, in Kaup, Udupi district, Karnataka. He is the eldest son of the late Ummanna Devadiga and Appy U. Devadiga.Early Life and EducationDharmapal pursued his early schooling up to Class VI in a Board Higher Primary School at Kaup. Due to financial constraints, he migrated to Mumbai in 1962, where he continued his studies in a night school run by the National Kannada Education Society while working odd jobs during the day.Career and EntrepreneurshipDharmapal’s exemplary character, honesty, unselfishness, hard work, and determination led him to become a successful entrepreneur. He established Sri Satyanarayan Industrial Suppliers, which later became Sri Satyanarayan Industrial Suppliers Private Limited (SSISPL) in Ambarnath Industrial Area, Thane district.Philanthropy and Social ServiceDharmapal’s philanthropic activities are renowned. He has donated generously to various causes, including helping the poor, ailing, and needy students, as well as contributing to temples and social service organizations. His selfless work has earned him accolades and recognition. Awards and RecognitionDharmapal has received numerous awards, including the Aryabhata Cultural Award (2007), Global Man Award (World Kannada Cultural Convention, Singapore), Indira Gandhi Seva Ratna Puraskar (2011), Kuvempu Global Man International Award (2012), International Man of The Year Award (2012), National Udyog Bharati Award (2013), and Honorary Award by Kannada department of Mumbai University (2014).Associations and MembershipsDharmapal is closely associated with several organizations, including Devadiga Sangha Mumbai, Rotary Club of Mulund (East), Akhila Bharata Tulu Okkota, Jayasrikrishna Parisara Premi Samiti (NGO), and Sri Nityanand Yogashram, Kondevoor.Here’s a polished version:Personal Life –Dharmapal resides in Mumbai with his wife, Sujata D. Devadiga, and their family. Their daughter, Dr. Poonam R. Sherigar, is a distinguished ENT specialist who secured a gold medal. She is married to Rahul Sherigar, an engineer at Accenture, and they have a son, Adrit.Their son, Pavan Devadiga, is an engineer and holds an MBA from Australia. He is married to Nimmi Pavan, who works at Cricil, and they have a daughter, Aranya.[12:42 pm, 31/3/2025] Ashok Shetty News: Now Dharmapal U. Devadiga is President of Vishwa Devadiga Mahamandal and Chairman 100th year Cenntunary program

ಪ್ರಾದೇಶಿಕ ವಾರ್ತೆಗಳು

KANACHUR HOSPITAL – MANGALORE UNIVERSITY – CASK consociate to organise a ‘Psychology Camp’ for MSW Students.

Mangaluru, 28th March: In a collaborative effort between the Department of Post Graduate Studies and Research in Social Work, Mangalore University, Catholic Association of South Canara with the expert support of Department of Psychiatry, Kanachur Hospital & Research Centre – a Psychology Camp was organized for the Industrial Psychology students of MSW – 1st Year, on March 28, 2025.Dr. Rohan S. Monis – Chief Administrative Officer, Kanachur Hospital and Research Centre & Vice President of CASK, welcomed the collaborative teams and students to Kanachur for this interactive episode. He expressed his appreciation to the MSW faculty heads for this student engagement as it would empower them & create a social impact too with an increase understanding of psychological well-being. Dr. Paul G. Aquinas – Chairman, Dept of Social Work, Mangalore University & Editor, Mangalore Magazine, CASK; expressing his gratitude, thanked Kanachur Hospital for providing students with the chance to participate in the camp, acknowledging the valuable learning experience it offered. He vividly expressed how these sessions would help in their professional culture in the years to come.The first session was led by Dr. Aishwarya V. Rao – Senior Resident, Department of Psychiatry at Kanachur Institute of Medical Sciences. Dr. Rao spoke about mental illness awareness, emphasizing practical solutions for dealing with such conditions in daily life.Dr. Rojina Anna Ray – Senior Resident, Department of Psychiatry, Kanachur Hospital conducted an interactive session on stress and time management. Through engaging activities, she provided students with tools to recognize and cope with stress effectively.The event concluded with a vote of thanks delivered by Shreyas Shenoy, a first-year MSW student. The students in their gratitude message expressed that they had a wonderful time of exchange and engagement.

ಪ್ರಾದೇಶಿಕ ವಾರ್ತೆಗಳು

ನಿವೃತ್ತ ಸರಕಾರಿ ನೌಕರರ ಆರ್ಥಿಕ ನಷ್ಟ ಪರಿಹಾರಕ್ಕೆ ಪೂರ್ಣ ಸಹಕಾರ:ದ.ಕ.ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಎಂಎಲ್‌ಸಿ ಐವನ್

ನಿವೃತ್ತ ಸರಕಾರಿ ನೌಕರರು ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ ಬದಲಾಗಿ ತಾವು ದುಡಿದ ಹಕ್ಕಿನ ಮೌಲ್ಯವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುವ ಮೂಲಕ ನಿವೃತ್ತ ಸರಕಾರಿ ನೌಕರರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.ಅವರು ಶನಿವಾರ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ.ಜಿಲ್ಲೆ ಮಂಗಳೂರು ಮತ್ತು ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ೨೬ ಸಾವಿರ ಮಂದಿ ನಿವೃತ್ತ ಸರಕಾರಿ ನೌಕರರಿಗೆ ಸಮಸ್ಯೆಯಗಿದ್ದುö, ದಕದಲ್ಲಿ ೬೦೦ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಗುರಿಯಾಗಿರುವುದು ಬೇಸರದ ವಿಚಾರವಾಗಿದೆ. ಸಮಾಜ ಹಾಗೂ ಸರಕಾರಕ್ಕೆ ಈ ನಿವೃತ್ತ ನೌಕರರ ಸೇವೆ ಅಪಾರವಿದೆ. ಅವರಿಗೆ ಎಂದಿಗೂ ಅನ್ಯಾಯವಾಗಬಾರದು. ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎA.ಷಣ್ಮುಖಯ್ಯ ಮಾತನಾಡಿ, ಜು.೧,೨೦೨೨ರಿಂದ ಜು.೩೧,೨೦೨೪ರ ಅವಧಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರ ವರ್ಗದ ನಿವೃತ್ತರಿಗೆ ೭ನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ರಾಜ್ಯ ಸರಕಾರ ಮಾಡಿದೆ. ಈ ಕಾರಣದಿಂದ ನಿವೃತ್ತ ಸರಕಾರಿ ನೌಕರರ ಜತೆಗೂಡಿಕೊಂಡು ಮೂರನೇ ಬಾರಿಗೆ ಬೆಂಗಳೂರು ಚಲೋ ಮಾಡುತ್ತಿದ್ದೇವೆ. ಏ.೩ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಏ.೪ರಂದು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ನಮ್ಮ ಬೇಡಿಕೆಯನ್ನು ಸಿಎಂ ಮುಂದೆ ಮಂಡಿಸಲಿದ್ದೇವೆ. ಅಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮುಂದೆ ಅನಿರ್ದಿಷ್ಟಾವಧಿಯ ಹೋರಾಟ, ನ್ಯಾಯಾಲಯಕ್ಕೆ ಮೊರೆ ಹೋಗಲು ನಿರ್ಧಾರ ಮಾಡಲಾಗಿದೆ ಎಂದರು. ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ಎ,ಬಿ,ಸಿ,ಡಿ ವರ್ಗದ ನಿವೃತ್ತ ಸರಕಾರಿ ನೌಕರರಿಗೆ ಲಕ್ಷಗಟ್ಟಲೆ ಮೊತ್ತವನ್ನು ಸರಕಾರ ನೀಡದೇ ಅನ್ಯಾಯ ಮಾಡಿದೆ. ಯಾವುದೇ ದುಡ್ಡನ್ನು ನಾವ್ ಬೇಡ್ತಾ ಇಲ್ಲ ನಮ್ಮ ಕೆಲ್ಸದ ಹಣವನ್ನು ಮಾತ್ರ ಕೇಳ್ತಾ ಇದ್ದೇವೆ. ಬೆಂಗಳೂರು ಚಲೋದ ಮೂಲಕ ನಮ್ಮ ಹೋರಾಟ ಮುಂದುವರಿಯಲಿದೆ. ಸರಕಾರ ಈ ಕುರಿತು ಗಮನಹರಿಸಿಕೊಂಡು ನ್ಯಾಯ ನೀಡಬೇಕು ಎಂದರು.ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆಯ ಉಳ್ಳಾಲ ಸಂಚಾಲಕರಾದ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸೀತಾರಾಮ್, , ಮೋಹನ ಬಂಗೇರಾ, ಡೇಸಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಂಚಾಲಕ ಸ್ಟಾ÷್ಯನಿ ತಾವ್ರೋ ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು. ಬಿ.ಮನಮೋಹನ ರಾವ್ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಕ್ಕೂ ಮಿಕ್ಕಿದ ನಿವೃತ್ತ ಸರಕಾರಿ ನೌಕರರು ಸಭೆಯಲ್ಲಿ ಹಾಜರಿದ್ದರು.ಚಿತ್ರö:ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ ಎಂಎಲ್‌ಸಿ ಐವನ್ ಡಿಸೋಜ ಅವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ಮಂಜುಳಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಾರ್ಚ್ 31 – ಏಪ್ರಿಲ್ 2: ಪಾಲ್ದನೆ ಚರ್ಚ್ ನಲ್ಲಿ 3 ದಿನಗಳ ರಿಟ್ರೀಟ್

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 2 ರ ವರೆಗೆ 3 ದಿನಗಳ ಧ್ಯಾನ ಕೂಟವನ್ನು ಏರ್ಪಡಿಸಲಾಗಿದೆ.ಶಿವಮೊಗ್ಗ ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಧ್ಯಾನ ಕೂಟ ತಂಡದ ಪ್ರಮುಖರಾದ ಹಾಗೂ ಉತ್ತಮ ಪ್ರವಚನಕಾರರೂ ಆಗಿರುವ ವಂದನೀಯ ಫಾದರ್ ಫ್ರಾಂಕ್ಲಿನ್ ಡಿ ಸೋಜಾ ಅವರು ಧ್ಯಾನ ಕೂಟವನ್ನು ನಡೆಸಿ ಕೊಡಲಿದ್ದಾರೆ. ಧ್ಯಾನ ಕೂಟವು ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.15 ರ ವರೆಗೆ ಇರುತ್ತದೆ. ಧ್ಯಾನ ಕೂಟವು ಪ್ರವಚನ, ಬಲಿ ಪೂಜೆ, ವಿಶೇಷ ಪ್ರಾರ್ಥನೆ, ಪಾಪ ನಿವೇದನೆ, ಆರಾಧನೆಯನ್ನು ಒಳಗೊಂಡಿರುತ್ತದೆ. ಕೊನೆಯ ದಿನ ಅಂದರೆ ಏಪ್ರಿಲ್ 2 ರಂದು ಪಾಪ ನಿವೇದನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಚರ್ಚಿನ ಪ್ರದಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಂಗನವಾಡಿಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ-ಕೆ.ವಿ.ಪ್ರಭಾಕರ್

ಮಂಗಳೂರು: ಎಳೆಯ ಮಕ್ಕಳಿಗೆ ಶಿಕ್ಷಣ ನೀಡುವ ಅಂಗನವಾಡಿಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಸಿಬ್ಬಂದಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ ಎಂದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಸ್ವಂತ ವೆಚ್ಚದಲ್ಲಿ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಶುದ್ದ ನೀರಿನ ಘಟಕ , ಫ್ಯಾನ್, ಸಮವಸ್ತ್ರ ನೀಡಲಾಗಿದ್ದು , ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಸೌಲಭ್ಯ ನೀಡುವುದಾಗಿ ಕೆ.ವಿ.ಪ್ರಭಾಕರ್ ಈ ಸಂದರ್ಭ ತಿಳಿಸಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸಿಂಧು,ಕೇಂದ್ರದ ಶಿಕ್ಷಕಿ ನಂದಾ, ಸಹಾಯಕಿ ಲಕ್ಷ್ಮಿ,ಆಶಾ ಕಾರ್ಯ ಕರ್ತೆ ಪ್ರಭಾ ಉಪಸ್ಥಿತರಿದ್ದರು.

Scroll to Top