ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

BIG BRAKING -ಹನಿಟ್ರ್ಯಾಪ್ ಪ್ರಕರಣದಲ್ಲಿ 5 ಕೋಟಿ ಡೀಲ್ ಬೆನ್ನಲ್ಲೇ ಭೂಗತ ದೊರೆಯಿಂದ ಧಮ್ಕಿ. ಹಣ ವಾಪಾಸ್ಸು ನೀಡಿದ ಟಿವಿ ಚಾನೆಲ್‍ವೊಂದರ ಪತ್ರಕರ್ತ. ಅದನ್ನು ಆಪ್ತರಿಗೆ ಹಂಚಿದ ಉದ್ಯಮಿ

ಬೆಂಗಳೂರು: ಮುಂಬಯಿ ಉದ್ಯಮಿಯೊಬ್ಬರು ಚಲನಚಿತ್ರ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧದಲ್ಲಿದ್ದ ವೀಡಿಯೋವೊಂದನ್ನು ಅ ಚಲನಚಿತ್ರ ನಟಿ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತರೊಬ್ಬರಿಗೆ ನೀಡಿ, ಹನಿಟ್ರ್ಯಾಪ್ ಮಾಡಿದ್ದಳು.ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನ ಟಿವಿ ಚಾನೆಲ್‍ವೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ಆ ಪತ್ರಕರ್ತ ಮುಂಬಯಿ ಉದ್ಯಮಿಗೆ ಫೋನು ಮಾಡಿ ನಿಮ್ಮ ವೀಡಿಯೋ ಸಿಕ್ಕಿದೆ. 5 ಕೋಟಿ ರೂಪಾಯಿ ನೀಡಿ, ಇಲ್ಲದಿದ್ದರೆ ಟಿವಿ ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತೇನೆಂದು ಬ್ಲ್ಯಾಕ್‍ಮೇಲ್ ಮಾಡಿದ್ದ.ಕೂಡಲೇ ಆ ಮುಂಬಯಿ ಉದ್ಯಮಿ 5 ಕೋಟಿ ರೂಪಾಯಿಯನ್ನು ಪತ್ರಕರ್ತನಿಗೆ ಮುಟ್ಟಿಸಿದರು. ಆ ಬಳಿಕ ಚುರುಕಾದ ಮುಂಬೈ ಉದ್ಯಮಿ ತನ್ನ ಆಪ್ತರೊಬ್ಬರ ಮೂಲಕ ದುಬೈಯಲ್ಲಿರುವ ಭೂಗತ ದೊರೆಗೆ ವಿಷಯ ಮುಟ್ಟಿಸಿದರು. ಭೂಗತ ದೊರೆ ಮಂಗಳೂರು ಮೂಲದವರೇ ಆಗಿರುವ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತನಿಗೆ ಫೋನು ಮಾಡಿ ಹಣ ವಾಪಾಸ್ ನೀಡುವಂತೆ ಬೆದರಿಕೆ ಹಾಕಿದರು. ಬೆದರಿದ ಆ ಪತ್ರಕರ್ತ 5 ಕೋಟಿ ರೂಪಾಯಿ ಹಣವನ್ನು ಮುಂಬಯಿ ಉದ್ಯಮಿಗೆ ವಾಪಾಸ್ಸು ನೀಡಿದರು. ಅದನ್ನವರು ತನಗೆ ಸಹಾಯ ಮಾಡಿದ ಆಪ್ತರಿಗೆ ಹಂಚಿದರು. ಅವರ ಆಪ್ತರು ಯಾರೆಂಬುದು ಕೂಡಾ ಮಾಹಿತಿ ಲಭ್ಯವಾಗಿದೆ

ಪ್ರಾದೇಶಿಕ ವಾರ್ತೆಗಳು

ಆಸೈಗೋಳಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಶೇಟ್ ಅವರಿಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಂದ ಬೆಳ್ಳಿಪದಕ ನೀಡಿ ಸನ್ಮಾನ

ಧರ್ಮಸ್ಥಳ-ಗೃಹ ರಕ್ಷಕ ದಳದಲ್ಲಿ ಗೃಹರಕ್ಷಕ ಅಧಿಕಾರಿಯಾಗಿ ಕಳೆದ 38ವರ್ಷಗಳಿಂದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸುರೇಶ್ ಶೇಟ್ ಅಸೈಗೋಳಿ ಅವರಿಗೆ ಧರ್ಮಸ್ಥಳ ಲಕ್ಷದೀಪದಲ್ಲಿ ಕಳೆದ 4 ದಶಕಗಳಿಂದ ಸಲ್ಲಿಸಿದ ವಿಶಿಷ್ಟ ಧಾರ್ಮಿಕ ಸೇವೆಗಾಗಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬೆಳ್ಳಿಪದಕ ನೀಡಿ ಸನ್ಮಾನಿಸಿರುತ್ತಾರೆ. ಈ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಸುರೇಶ್ ಶೇಟ್ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿರುತ್ತಾರೆ. ರೋಟರಿ ಕ್ಲಬ್ ಸೇರಿದಂತೆ ಹಲವಾರು ಸಂಘ – ಸಂಸ್ಥೆಗಳು ಸುರೇಶ್ ಶೇಟ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಸುರೇಶ್ ಶೇಟ್ ಅವರು ಆಸೈಗೋಳಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸದ್ರಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಅಭಿವೃದ್ಧಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ. ನೇರ ನಡೆ ನುಡಿಯ ನಿಷ್ಕಳಂಕ ವ್ಯಕ್ತಿತ್ವದ ಸುರೇಶ್ ಶೇಟ್ ಅವರು ನಮ್ಮ ಸಮಾಜ ಕಂಡಿರುವ ತುಳುನಾಡಿನ ಹೆಮ್ಮೆಯ ಸುಪುತ್ರರಾಗಿದ್ದಾರೆ

ಪ್ರಾದೇಶಿಕ ವಾರ್ತೆಗಳು

Children and Teachers Take Centre Stage on Sixth Day of Novena

Bikarnakatte, Jan 10, 2026: The sixth day of the Infant Jesus Novena, dedicated to children and teachers, was observed with deep devotion and vibrant participation at the Infant Jesus Shrine, Bikarnakatte. The day’s reflections were centred on the theme, “Father, if you will, remove this chalice,” drawing inspiration from the spiritual teachings of St John of the Cross and inviting the faithful to reflect on trust, surrender, and perseverance in the face of life’s trials.The day was marked by a series of Novena Masses, with nine Eucharistic celebrations offered in multiple languages, reflecting the inclusive and welcoming spirit of the shrine and drawing devotees from diverse backgrounds. The 10:30 a.m. solemn Mass was presided over by Rt. Rev. Dr Henry D’Souza, Bishop of Bellary. Following the Eucharistic celebration, a special Eucharistic Adoration was held, with focused prayers offered for the well-being, growth, and future of children. As an expression of fellowship and Christian charity, a common meal (Anna Santarpane) was served to all the devotees present. A special highlight of the day was the open-air evening Mass, which added a joyful and devotional character to the celebrations. Children, dressed as the Infant Jesus and Mother Mary, actively participated in the liturgy, assuming various roles with reverence and enthusiasm. The Mass was presided over by Fr Stephen Lobo and was specially dedicated to the Carmelite priests serving in Canada. A children’s choir further enriched the celebration, creating a deeply prayerful and festive atmosphere.The first Mass of the day at 6:00 a.m. was celebrated by Fr Vincent Sequeira, Secretary of the Bible Commission in the Diocese of Mangaluru, followed by the 7:30 a.m. Mass celebrated by Fr Deep Fernandes. The 9:00 a.m. Mass was presided over by Fr Joseph Martis, Parish Priest of Derebail Church. The 1:00 p.m. Mass was celebrated by Fr Ajith Rodrigues, OCD, Dean of Dhyanavana.The 5:00 p.m. English Mass was celebrated by Fr Rathan Almeida, Director of Dhyanavana, Mysuru. The 6:00 p.m. open-air Mass, featuring the special participation of children dressed as the Infant Jesus and Mother Mary, brought a joyful and lively dimension to the liturgy. The final Mass of the day in Kannada at 7:45 p.m. was celebrated by Fr Joseph Pinto, Episcopal Vicar for Religious in the Diocese of Chikkamagaluru.The sixth day of the Novena thus became a beautiful blend of prayer, childlike joy, and deep spiritual reflection, leaving a lasting impression on the faithful and underlining the Shrine’s special concern for children and those entrusted with their formation.

ಪ್ರಾದೇಶಿಕ ವಾರ್ತೆಗಳು

ಬಾಲ ಯೇಸುವಿನ ಪುಣ್ಯಕ್ಷೇತ್ರದ ಪ್ರತಿಷ್ಠಾಪನೆಯ 30ನೇ ವಾರ್ಷಿಕೋತ್ಸವದ ಸ್ಮರಣೆ: ನೊವೇನಾದ ಏಳನೇ ದಿನದ ಸಂಭ್ರಮ

ಬಿಕರ್ನಕಟ್ಟೆ, ಜನವರಿ 11, 2026: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಭಾನುವಾರ ತನ್ನ ಪ್ರತಿಷ್ಠಾಪನೆಯ 30ನೇ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ಒಂದು ಪ್ರಮುಖ ಆಧ್ಯಾತ್ಮಿಕ ಮೈಲಿಗಲ್ಲನ್ನು ಗುರುತಿಸಿತು. ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೊವೇನಾದ ಏಳನೇ ದಿನದಂದು ಈ ಸಂಭ್ರಮವು ನಡೆದಿದ್ದು ವಿಶೇಷವಾಗಿತ್ತು. ಈ ದಿನವನ್ನು ‘ಧಾರ್ಮಿಕರ ಮತ್ತು ವೃತ್ತಿ ಪ್ರೋತ್ಸಾಹದ ದಿನ’ವನ್ನಾಗಿ ಆಚರಿಸಲಾಗಿದ್ದು, ಆಚರಣೆಯು ಐತಿಹಾಸಿಕವಾಗಿ ಮಹತ್ವಪೂರ್ಣವಾಗಿ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧವಾಗಿತ್ತು. ಈ ದಿನದ ಆಚರಣೆಗಳು ಸಂತ ಶಿಲುಬೆಯ ಯೋಹಾನರ ಆಧ್ಯಾತ್ಮಿಕತೆಯಿಂದ ಪ್ರೇರಿತವಾದ “ನಾನು ಮರುಭೂಮಿಯಲ್ಲಿ ತೊರೆಗಳನ್ನು ಹರಿಸುವೆನು” ಎಂಬ ಶೀರ್ಷಿಕೆಯ ಮೇಲೆ ಕೇಂದ್ರೀಕೃತವಾಗಿದ್ದವು. ಇದು ಕಷ್ಟಕಾಲ ಮತ್ತು ಆಧ್ಯಾತ್ಮಿಕ ಶುಷ್ಕತೆಯ ಸಂದರ್ಭದಲ್ಲೂ ಜೀವನ, ಭರವಸೆ ಮತ್ತು ನವಚೈತನ್ಯವನ್ನು ತರುವ ದೇವರ ರೂಪಾಂತರದ ಕೃಪೆಯನ್ನು ಎತ್ತಿ ತೋರಿಸಿತು.ದಿನವಿಡೀ ವಿವಿಧ ಭಾಷೆಗಳಲ್ಲಿ ಒಟ್ಟು ಒಂಬತ್ತು ಪವಿತ್ರ ಬಲಿಪೂಜೆಗಳನ್ನು ನೆರವೇರಿಸಲಾಯಿತು, ಇದರಿಂದಾಗಿ ವಿವಿಧ ಭಾಷಾ ಹಿನ್ನೆಲೆಯ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಯಿತು. ಪ್ರಾರ್ಥನೆಯಲ್ಲಿ ಧಾರ್ಮಿಕ ಗುರುಗಳನ್ನು ಮತ್ತು ಭಗಿನಿಯರನ್ನು ವಿಶೇಷವಾಗಿ ಸ್ಮರಿಸಲಾಯಿತು. ವಿಶ್ವಾಸಿಗಳು ಪೌರೋಹಿತ್ಯ ಮತ್ತು ಧಾರ್ಮಿಕ ಜೀವನವನ್ನು ನಂಬಿಕೆಯ ಶರಣಾಗತಿ ಮತ್ತು ನಿಸ್ವಾರ್ಥ ಸೇವೆಯ ಮಾರ್ಗಗಳಾಗಿ ಸ್ವೀಕರಿಸಲು ಹಾಗೂ ಈ ವೃತ್ತಿಗಳ ಬಗ್ಗೆ ಆಳವಾಗಿ ಚಿಂತಿಸಲು ಪ್ರೋತ್ಸಾಹಿಸಲಾಯಿತು. ಬೆಳಗ್ಗೆ 10:30ರ ಸಂಭ್ರಮದ ಬಲಿಪೂಜೆಯ ನಂತರ, ಗುರುಗಳು, ಧಾರ್ಮಿಕರು ಮತ್ತು ಹೊಸ ಧಾರ್ಮಿಕ ಕರೆಗಳಿಗಾಗಿ ಪ್ರಾರ್ಥಿಸಲು ವಿಶೇಷ ಪರಮಪ್ರಸಾದ ಆರಾಧನೆಯನ್ನು ಆಯೋಜಿಸಲಾಗಿತ್ತು.ಅಪೂರ್ವ ವಾಸ್ತುಶಿಲ್ಪದ ಹೆಗ್ಗುರುತಾಗಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರವನ್ನು ಜನವರಿ 11, 1996 ರಂದು ವಂದನೀಯ ಬೆಸಿಲ್ ಡಿಸೋಜಾ ಅವರು ಆಶೀರ್ವದಿಸಿ ಲೋಕಾರ್ಪಣೆ ಮಾಡಿದ್ದರು. ಇದರ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕಳೆದ ಮೂರು ದಶಕಗಳಿಂದ ಪುಣ್ಯಕ್ಷೇತ್ರದ ಆಧ್ಯಾತ್ಮಿಕ ಸಚಿವಾಲಯದ ಮೂಲಕ ಲಭಿಸಿದ ಹೇರಳವಾದ ಅನುಗ್ರಹ ಮತ್ತು ಆಶೀರ್ವಾದಗಳಿಗಾಗಿ ದೇವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸಲಾಯಿತು. ದಿನದ ಮೊದಲ ಬಲಿಪೂಜೆಯನ್ನು ಬೆಳಿಗ್ಗೆ 6:00 ಗಂಟೆಗೆ ಮತ್ತು ಮಧ್ಯಾಹ್ನ 1:00 ಗಂಟೆಯ ಬಲಿಪೂಜೆಯನ್ನು ಉಡುಪಿಯ ವಂದನೀಯ ಜಾನ್ ಸಿಕ್ವೇರಾ (ಒಸಿಡಿ) ನೆರವೇರಿಸಿದರು. ಬೆಳಿಗ್ಗೆ 7:30ರ ಬಲಿಪೂಜೆಯನ್ನು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯದ ಸೆಮಿನಾರಿಯ ಪ್ರಾಧ್ಯಾಪಕ ವಂದನೀಯ ಐವನ್ ಡಿಸೋಜಾ ನೆರವೇರಿಸಿದರು. ಬೆಳಿಗ್ಗೆ 9:00 ಗಂಟೆಯ ಬಲಿಪೂಜೆಯ ನೇತೃತ್ವವನ್ನು ಮುಲ್ಕಿಯ ಡಿವೈನ್ ಕಾಲ್ ಸೆಂಟರ್‌ನ ವಂದನೀಯ ಅಬ್ರಹಾಂ ಡಿಸೋಜಾ (ಎಸ್‌ವಿಡಿ) ವಹಿಸಿದ್ದರು. ಬೆಳಿಗ್ಗೆ 10:30ರ ಸಂಭ್ರಮದ ಬಲಿಪೂಜೆಯನ್ನು ಗೋವಾದ ಮಾಪ್ಸಾದ ಎಮ್ಮಾಸ್ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕ ವಂದನೀಯ ಪ್ರವೀಣ್ ಡಿಸೋಜಾ (ಒಸಿಡಿ) ನೆರವೇರಿಸಿದರು. ಬೆಳಗ್ಗೆ 11:30ರ ಆರಾಧನೆಯನ್ನು ಸಂತ ಜೋಸೆಫ್ ಆಶ್ರಮದ ವಂದನೀಯ ಜಾನ್ ಪಿಂಟೋ (ಒಸಿಡಿ) ಮುನ್ನಡೆಸಿದರು.ಸಂಜೆ 5:00 ಗಂಟೆಗೆ ಇಂಗ್ಲಿಷ್‌ನಲ್ಲಿ ನಡೆದ ಬಲಿಪೂಜೆಯ ನೇತೃತ್ವವನ್ನು ತಪೋವನದ ಕಾರ್ಮೆಲೈಟ್ ನೊವಿಶಿಯೇಟ್‌ನ ಸುಪೀರಿಯರ್ ವಂದನೀಯ ಜೋಸೆಫ್ ಡಿಸೋಜಾ (ಒಸಿಡಿ) ವಹಿಸಿದ್ದರು. ಸಂಜೆ 6:00 ಗಂಟೆಯ ಬಲಿಪೂಜೆಯನ್ನು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ನಿರ್ದೇಶಕ ವಂದನೀಯ ಪ್ರವೀಣ್ ಲಿಯೋ ಲಸ್ರಾದೊ ನೆರವೇರಿಸಿದರು. ದಿನದ ಕೊನೆಯ ಬಲಿಪೂಜೆಯನ್ನು ರಾತ್ರಿ 7:45ಕ್ಕೆ ಕನ್ನಡದಲ್ಲಿ ಬೆಂಗಳೂರಿನ ವಂದನೀಯ ಅಲ್ಫೋನ್ಸ್ ಬ್ರಿಟ್ಟೋ (ಎಸ್‌ವಿಡಿ) ನೆರವೇರಿಸಿದರು.ಪುಣ್ಯಕ್ಷೇತ್ರದ ಪ್ರತಿಷ್ಠಾಪನೆಯ 30 ವರ್ಷಗಳ ಸ್ಮರಣೆ ಮತ್ತು ಧಾರ್ಮಿಕ ವೃತ್ತಿ ಪ್ರೋತ್ಸಾಹ ದಿನದ ಆಚರಣೆಯು ನೊವೇನಾದ ಏಳನೇ ದಿನವನ್ನು ಆಧ್ಯಾತ್ಮಿಕವಾಗಿ ಮೌಲ್ಯಯುತವಾಗಿಸಿತು. ಇದು ಭಕ್ತರಲ್ಲಿ ಪ್ರಾರ್ಥನೆ, ಸೇವೆ ಮತ್ತು ದೇವರ ಮಾರ್ಗದರ್ಶನದ ಕೃಪೆಯ ಮೇಲಿನ ವಿಶ್ವಾಸದ ಬದ್ಧತೆಯನ್ನು ನವೀಕರಿಸಿತು.

ಪ್ರಾದೇಶಿಕ ವಾರ್ತೆಗಳು

ರಕ್ತದಾನ ಅತ್ಯಂತ ಪುಣ್ಯದ ಕಾರ್ಯ-ಡಾ. ದುರ್ಗಾ ಪ್ರಸಾದ್

ಮಂಗಳೂರು: ರಕ್ತದಾನ ಅತ್ಯಂತ ಪುಣ್ಯದ ಕಾರ್ಯವಾಗಿದ್ದು , ತುರ್ತು ಸಂದರ್ಭ ಜೀವ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅವಶ್ಯ ಎಂದು ಲೇಡಿಗೋಶನ್ ಅಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಹೇಳಿದರು.ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ಲೇಡಿಗೋಶನ್ ಅಸ್ಪತೆಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಬಿರ ಉದ್ಘಾಟಿಸಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಮಾತನಾಡಿ ‘ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಅವಶ್ಯ ಇರುವವರಿಗೆ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ವತಿಯಿಂದ ಸಂಪೂರ್ಣ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ’ ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ. ರೆಡ್‌ಕ್ರಾಸ್ ಜಿಲ್ಲಾ ಘಟಕದ ನಿರ್ದೇಶಕ ಗುರುದತ್ ಕಾಮತ್ , ಲೇಡಿಗೋಶನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್, ಕೆಎಂಸಿ ಅಸ್ಪತ್ರೆಯ ಡಾ.ಅನುಪಮ ಸುರೇಶ್ ಮುಖ್ಯ ಅತಿಥಿಗಳಾಗಿದ್ದರು.ಶುಶ್ರೂಷಕ ಅಧೀಕ್ಷಕಿ ತ್ರೇಸಿಯಮ್ಮ , ಸಹಾಯಕ ಆಡಳಿತಾಧಿಕಾರಿ ಅನಿತಾ ಸತ್ಯನ್, ಕಚೇರಿ ಅಧೀಕ್ಷಕ ಶಂಕರ್, ಮೇಲ್ವಿಚಾರಕಿ ಮಲ್ಲಿಕಾ ಉಪಸ್ಥಿತರಿದ್ದರು. ಶುಶ್ರೂಷಕ ಅಧಿಕಾರಿಗಳಾದ ಡಿನ್ಸಿಮೊನ್ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು, ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಿಎಂ ಸಿದ್ದರಾಮಯ್ಯ ಅವರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ

ವಿವಿಧ ಕಾರ್ಯಕ್ರಮದ ಅಂಗವಾಗಿ ಮಂಗಳೂರುಗೆ ಆಗಮಿಸಿದ ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಜಿಲ್ಲಾ ಏನ್ ಎಸ್ ಯು ಐ ಉಪಾಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ರವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿಕೊಂಡ ಸಂದರ್ಭ.

ಪ್ರಾದೇಶಿಕ ವಾರ್ತೆಗಳು

ಜ. 11ರಂದು ವಾರ್ಷಿಕ ಕ್ರೀಡೋತ್ಸವ

ಪುಣೆ: ಬಂಟರ ಸಂಘ ಪುಣೆ ವತಿಯಿಂದ ಸಮಾಜಬಾಂಧವರಿಗಾಗಿ ವಾರ್ಷಿಕ ಕ್ರೀಡೋತ್ಸವವು ಜ. 11ರಂದು ಬೆಳಿಗ್ಗೆ 8ರಿಂದ ಮುಕುಂದ್ ನಗರದ ಮಹಾರಾಷ್ಟ್ರೀಯ ಮಂಡಲ ಕಟಾರಿಯಾ ಕಾಲೇಜ್ ಗ್ರೌಂಡ್‍ನಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಲಿದೆ.ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಗೌರವ ಉಪಸ್ಥಿತಿಯಲ್ಲಿ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರುಗುತ್ತು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8ರಿಂದ ಉದ್ಘಾಟನಾ ಸಮಾರಂಭ ಜರಗಲಿದೆ. ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರೋಹಿತ್ ಶೆಟ್ಟಿ ಕಟೀಲು, ಗೌರವ ಅತಿಥಿಯಾಗಿ ಮುಂಬಯಿಯ ಮಾಲ್ವಾನ್ ತಡ್ಕ ಗ್ರೂಫ್ ಆಫ್ ರೆಸ್ಟೋರೆಂಟ್‍ನ ಸಿಎಂಡಿ ಆದರ್ಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘದ ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಕ್ರೀಡಾದಾತ ಯೋಜನೆಯ ಪ್ರಾಯೋಜಕ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಪ್ರೈ.ಲಿ. ಅಹಿಲ್ಯಾ ನಗರ್ ಸಿಎಂಡಿ ಕೆ.ಕೆ. ಶೆಟ್ಟಿ ಗೌರವ ಅತಿಥಿಯಾಗಿ ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಭಾಗವಹಿಸಲಿದ್ದಾರೆ.ಬಂಟರ ಸಂಘದ ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ ಇಸಾರಮಕ್ಕಿ ನೇತೃತ್ವದಲ್ಲಿ ಬಂಟರ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳು ಮತ್ತು ಸರ್ವೆ ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ನಡೆಯಲಿರುವ ಕ್ರೀಡೋತ್ಸವದಲ್ಲಿ ಸಮಾಜ ಬಾಂಧವರ ವಯೋಮಿತಿಗೆ ಅನುಗುಣವಾಗಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳು ಜರಗಲಿವೆ. ಮಕ್ಕಳಿಗಾಗಿ ವಿವಿಧ ರೀತಿಯ ಓಟ, ಪುರುಷ, ಮಹಿಳೆಯರಿಗಾಗಿ ರನ್ನಿಂಗ್ ರೇಸ್, ಶಾಟ್‍ಪುಟ್ ಇನ್ನಿತರ ಕ್ರೀಡೆಗಳು ನಡೆಯಲಿವೆ. ವಿಶೇಷ ಆಕರ್ಷಣೆಯಾಗಿ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗಾಗಿ ತ್ರೋಬಾಲ್, ಪುರುಷರು, ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪುಣೆ ಬಂಟರ ಸಂಘ ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ ಇಸಾರಮಕ್ಕಿ (9822011736) ಅವರನ್ನು ಸಂಪರ್ಕಿಸಬಹುದು. ಬಂಟ ಕ್ರೀಡಾ ಸ್ಪರ್ಧಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರುಗುತ್ತು, ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ. ಹೆಗ್ಡೆ, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ ಇಸಾರಮಕ್ಕಿ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ವಿನಯಾ ಯು. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವಿನೋದಾ ಶೆಟ್ಟಿ, ಪ್ರೇಮಾ ಶೆಟ್ಟಿ, ಶಾಲಿನಿ ಶೆಟ್ಟಿ, ನಯನಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜ.೧೨ರಂದು ರೆಡ್‌ಕ್ರಾಸ್‌ನಿಂದ ರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮತ್ತು ಯೂತ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ೧೬೪ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಜ.೧೨ರಂದು ಬೆಳಗ್ಗೆ ೧೦ಕ್ಕೆ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ. ರೆಡ್‌ಕ್ರಾಸ್ ಜಿಲ್ಲಾ ಸಮಿತಿಯಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್.ಡಿ., ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ರಹ್ಮಣ್ಯ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುವ ಸಾಧಕರಾದ ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ವಿಶ್ವ ದಾಖಲೆಯ ವಿಧುಷಿ ದೀಕ್ಷಾ.ಎಸ್. ಮತ್ತು ರಾಷ್ಟ್ರಪತಿ ರೋವರ್ಸ್ ಅವಾರ್ಡ್ ವಿಜೇತ ಪ್ರೀತೇಶ್ ಇವರುಗಳನ್ನು ಸನ್ಮಾನಿಸಲಾಗುವುದೆಂದು ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ಎನ್ .ವಿನಯ ಹೆಗ್ಡೆಯವರಿಗೆ ನುಡಿ ನಮನ

Qನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್ ವಿನಯ್ ಹೆಗ್ಡೆಯವರ ಶ್ರದ್ಧಾಂಜಲಿ ಸಭೆಯು ಕೊಂಚಾಡಿಯ ಶ್ರೀ ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡಿನ ಪದಾಧಿಕಾರಿಗಳ ಸಮೇತ ವಿವಿಧ ಗಣ್ಯರು ಅಗಲಿದ ಶಿಕ್ಷಣ ತಜ್ಞ ಎನ್.ವಿನಯ ಹೆಗ್ಡೆಯವರಿಗೆ ನುಡಿನಮನ ಸಲ್ಲಿಸಿದರು.ಎನ್ ವಿನಯ ಹೆಗ್ಡೆ ಅವರಿಗೆ ಸುಮಾರು 25 ವರ್ಷಗಳಿಂದ ಯೋಗ ಗುರುಗಳಾಗಿದ್ದ ಶ್ರೀ ರಾಧಾಕೃಷ್ಣರವರು ಮಾತನಾಡಿ ಶ್ರದ್ಧೆ ಮತ್ತು ನಿಷ್ಠೆಯ ಪ್ರತಿರೂಪದಂತಿದ್ದ ವಿನಯ ಹೆಗ್ಡೆಯವರು ತನ್ನ ಬಿಡುವಿಲ್ಲದ ಕೆಲಸ ಕಾರ್ಯದ ಮಧ್ಯೆ ಬಿಡುವು ಮಾಡಿಕೊಂಡು ಕದ್ರಿ ಕೈ ಬಟ್ಟಲಿನಲ್ಲಿರುವ ನನ್ನ ಯೋಗ ಕೇಂದ್ರದಲ್ಲಿ ಯೋಗ ತರಗತಿಗೆ ಹಾಜರಾಗುತ್ತಿದ್ದರು. ಸರಳ ವ್ಯಕ್ತಿತ್ವದ ಅವರು ನನ್ನ ಇಷ್ಟಮಿತ್ರರಾಗಿದ್ದರು ಎಂದು ಮಾತಿನಲ್ಲಿ ನೆನಪಿಸಿಕೊಂಡರು.ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡಿನ ಅಧ್ಯಕ್ಷರಾಗಿರುವ ಡಾ ಸುಕುಮಾರ್ ದಂಡೆಕೇರಿಯವರು ಮಾತನಾಡಿ ಆದರ್ಶ ಮತ್ತು ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಅಸಾಮಾನ್ಯ ಸಾಧಕರಾಗಿ ಗಮನ ಸೆಳೆದ ಎನ್. ವಿನಯ ಹೆಗ್ಡೆಯವರು ನಡೆದು ಬಂದ ಹಾದಿ ಇತರರಿಗೂ ಮಾದರಿ ಎಂದರು.ಮತ್ತೊಬ್ಬ ಅತಿಥಿ ಸೀತಾರಾಮ ಎಂಬವರು ಮಾತನಾಡಿ ಶ್ರೀರಾಮಾಶ್ರಮ ವಿದ್ಯಾಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವಂತ ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡಿನ ಹಿರಿಯ ಸದಸ್ಯರಾಗಿರುವ ಧೂಮಪ್ಪ ಮೇಸ್ತ್ರಿ ದಂಡಕೇರಿ ಮತ್ತು ಎನ್ ವಿನಯ ಹೆಗ್ಡೆಯವರು ಆತ್ಮೀಯರಾಗಿದ್ದು, ನಿಟ್ಟೆ ವಿದ್ಯಾ ಸಂಸ್ಥೆಯ ಕಟ್ಟಡವನ್ನು ವಿನಯ ಹೆಗ್ಡೆಯವರ ಕೋರಿಕೆಯಂತೆ ಧೂಮಪ್ಪಮೇಸ್ತ್ರಿ ಅವರು ನಿರ್ಮಿಸಿ ಕೊಟ್ಟದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ಖ್ಯಾತ ಉದ್ಯಮಿ ರಾಜೇಶ್ ದಂಡಕೇರಿಯವರು ಮಾತನಾಡಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೆಗ್ಡೆ ಅವರಿಗಿದ್ದ ಕಾಳಜಿ ಅಪಾರ ಎಂದರು.ಈ ಸಂದರ್ಭದಲ್ಲಿ ಕೊಂಚಾಡಿ ಎಜ್ಯುಕೇಶನ್ ಟ್ರಸ್ಟ್ ಬೋರ್ಡ್ ಟ್ರಸ್ಟಿಗಳಾಗಿರುವ ಕೆ.ಲೋಕೇಶ್,ಸಂತೋಷ್ ದಂಡಕೇರಿ,ಕಿಶೋರ್ ದಂಡಕೇರಿ,ಕಮಲಾಕ್ಷ ಬಂಗೇರ ,ಪತ್ರಕರ್ತ ರಾಜೇಶ್ ಕದ್ರಿ, ನೋಟರಿ ವಕೀಲರಾಗಿರುವ ವರದರಾಜು,ಜಯಂತ್ ಕೊಪ್ಪಲಕಾಡ್ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜಪ್ಪ ಜಿ.ಎಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಶ್ರೀರಾಮಾಶ್ರಮ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ಡಾ. ಎನ್. ವಿ .ಕಿಶೋರ್ ಸ್ವಾಗತಿಸಿದರು. ಸಹ ಶಿಕ್ಷಕಿ ಸುಷ್ಮಾ ಸುಬ್ರಹ್ಮಣ್ಯ ನಿರೂಪಿಸಿ ಮುಖ್ಯ ಶಿಕ್ಷಕ ಬಾಲಚಂದ್ರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪುಣೆ: ಬಂಟ್ಸ್ ಅಸೋಸಿಯೇಶನ್ ಪುಣೆ ವತಿಯಿಂದ ಸಮಸ್ತ ಬಂಟ ಬಾಂಧವರಿಗಾಗಿ ಮಲ್ಪಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ. 11ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಕ್ಯಾಂಪಸ್‍ನ ಗುರುನಾನಕ್ ಮೆಡಿಕಲ್ ಫೌಂಡೇಶನ್‍ನ ಗುರುನಾನಕ್ ದರ್ಬಾರ್‍ಹಾಲ್ (ಹಾಲಿವುಡ್ ಗುರುದ್ವಾರ)ನಲ್ಲಿ ಆಯೋಜಿಸಲಾಗಿದೆ.ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಶಿಬಿರದಲ್ಲಿ ಮಲ್ಪಿಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ ಮಕ್ಕಳ ರೋಗ ತಪಾಸಣೆ, ನೇತ್ರ, ದಂತ ತಪಾಸಣೆ, ಔಷಧ ಮತ್ತು ರೋಗಿಗಳಿಗೆ ಉಚಿತ ಇಸಿಜಿ ಮತ್ತು ಉಚಿತ ಮಧುಮೇಹ ತಪಾಸಣೆ ನಡೆಯಲಿದೆ.ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಸಂಯೋಜನೆಯಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವೈದ್ಯಕೀಯ ಸಲಹೆಗಾರ ಸಮಿತಿಯ ಪ್ರಮುಖರಾದ ಡಾ| ಹಂಸರಾಜ್ ಶೆಟ್ಟಿ ಎಂಬಿಇ, ಡಾ| ಸಂಜಯ್ ಕುಲಕರ್ಣಿ, ಡಾ| ಸುಜಯ್ ಹೆಗ್ಡೆ, ಡಾ| ಜ್ಯೋತಿ ಶೆಟ್ಟಿ, ಡಾ| ಪ್ರವೀಣ್ ಕುಮಾರ್ ಆರ್. ಶೆಟ್ಟಿ, ಡಾ| ವಿವೇಕ್ ಹೆಗ್ಡೆ, ಡಾ| ಸಂಜಯ್ ತೆಕಪಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರಾದ ಡಾ| ಚಿತ್ತರಂಜನ್ ಶೆಟ್ಟಿ, ಡಾ| ಸುಧಾಕರ್ ಶೆಟ್ಟಿ, ಡಾ| ಉರ್ವಿ ಕೊಠಾರಿ, ಡಾ| ರೋಬರ್ಟ್ ಲೋಬೊ, ಡಾ| ವಿಕಾಸ್ ಮೆಂತೋಲಿ, ಡಾ| ಸಮಿತಾ ಮೂಲಾನಿ, ಡಾ| ಸತ್ಯಶೀಲಾ ನಾೈಕ್ ಪಾಲ್ಗೊಂಡು ಸಲಹೆ ನೀಡಲಿದ್ದಾರೆ.ವಿವಿಧ ವಿಭಾಗಗಳ ವೈದ್ಯರು ಪಾಲ್ಗೊಂಡು ಆರೋಗ್ಯ ತಪಾಸಣೆಗೈದು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ ರೋಹಿತ್ ಶೆಟ್ಟಿ (9960337625), ಡಾ| ಸುಧಾಕರ್ ಶೆಟ್ಟಿ (9657616322), ದಿನೇಶ್ ಶೆಟ್ಟಿ (9823019020) ರೇಷ್ಮಾ ಆರ್. ಶೆಟ್ಟಿ ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸುವಂತೆ ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರಾದ ಡಾ| ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರೇಷ್ಮಾ ಆರ್. ಶೆಟ್ಟಿ ಯುವವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Scroll to Top