BIG BRAKING -ಹನಿಟ್ರ್ಯಾಪ್ ಪ್ರಕರಣದಲ್ಲಿ 5 ಕೋಟಿ ಡೀಲ್ ಬೆನ್ನಲ್ಲೇ ಭೂಗತ ದೊರೆಯಿಂದ ಧಮ್ಕಿ. ಹಣ ವಾಪಾಸ್ಸು ನೀಡಿದ ಟಿವಿ ಚಾನೆಲ್‍ವೊಂದರ ಪತ್ರಕರ್ತ. ಅದನ್ನು ಆಪ್ತರಿಗೆ ಹಂಚಿದ ಉದ್ಯಮಿ

119.7K Views 15 Jan 2026

ಬೆಂಗಳೂರು: ಮುಂಬಯಿ ಉದ್ಯಮಿಯೊಬ್ಬರು ಚಲನಚಿತ್ರ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧದಲ್ಲಿದ್ದ ವೀಡಿಯೋವೊಂದನ್ನು ಅ ಚಲನಚಿತ್ರ ನಟಿ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತರೊಬ್ಬರಿಗೆ ನೀಡಿ, ಹನಿಟ್ರ್ಯಾಪ್ ಮಾಡಿದ್ದಳು.
ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನ ಟಿವಿ ಚಾನೆಲ್‍ವೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ಆ ಪತ್ರಕರ್ತ ಮುಂಬಯಿ ಉದ್ಯಮಿಗೆ ಫೋನು ಮಾಡಿ ನಿಮ್ಮ ವೀಡಿಯೋ ಸಿಕ್ಕಿದೆ. 5 ಕೋಟಿ ರೂಪಾಯಿ ನೀಡಿ, ಇಲ್ಲದಿದ್ದರೆ ಟಿವಿ ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತೇನೆಂದು ಬ್ಲ್ಯಾಕ್‍ಮೇಲ್ ಮಾಡಿದ್ದ.
ಕೂಡಲೇ ಆ ಮುಂಬಯಿ ಉದ್ಯಮಿ 5 ಕೋಟಿ ರೂಪಾಯಿಯನ್ನು ಪತ್ರಕರ್ತನಿಗೆ ಮುಟ್ಟಿಸಿದರು. ಆ ಬಳಿಕ ಚುರುಕಾದ ಮುಂಬೈ ಉದ್ಯಮಿ ತನ್ನ ಆಪ್ತರೊಬ್ಬರ ಮೂಲಕ ದುಬೈಯಲ್ಲಿರುವ ಭೂಗತ ದೊರೆಗೆ ವಿಷಯ ಮುಟ್ಟಿಸಿದರು. ಭೂಗತ ದೊರೆ ಮಂಗಳೂರು ಮೂಲದವರೇ ಆಗಿರುವ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತನಿಗೆ ಫೋನು ಮಾಡಿ ಹಣ ವಾಪಾಸ್ ನೀಡುವಂತೆ ಬೆದರಿಕೆ ಹಾಕಿದರು. ಬೆದರಿದ ಆ ಪತ್ರಕರ್ತ 5 ಕೋಟಿ ರೂಪಾಯಿ ಹಣವನ್ನು ಮುಂಬಯಿ ಉದ್ಯಮಿಗೆ ವಾಪಾಸ್ಸು ನೀಡಿದರು. ಅದನ್ನವರು ತನಗೆ ಸಹಾಯ ಮಾಡಿದ ಆಪ್ತರಿಗೆ ಹಂಚಿದರು. ಅವರ ಆಪ್ತರು ಯಾರೆಂಬುದು ಕೂಡಾ ಮಾಹಿತಿ ಲಭ್ಯವಾಗಿದೆ

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top