ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತ-ರಂಗನಟ ನರೇಂದ್ರ ಕೆರೆಕಾಡು ಅವರಿಗೆ ಮಾತೃ ವಿಯೋಗ

ಮಂಗಳೂರು: ಪತ್ರಕರ್ತ ಹಾಗೂ ಸಿನಿಮಾ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಅವರ ಮಾತೃಶ್ರೀ ಮೂಲ್ಕಿಯ ಕೆರೆಕಾಡು ಸ್ವಾತಂತ್ರ್ಯ ಸೇನಾನಿ ದಿ.ಸೋಮಪ್ಪ ಪೂಜಾರಿ ಅವರ ಮನೆತನದ “ನಮ್ಮನೆ” ನಿವಾಸಿ ಮೋನಪ್ಪ ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಪೂಜಾರ್ತಿ (81) ಅವರು ಹೃದಯಾಘಾತದಿಂದ ಆಗಸ್ಟ್ 22ರಂದು ನಿಧನರಾಗಿದ್ದಾರೆ.ಅವರು ಪುತ್ರ ನರೇಂದ್ರ ಕೆರೆಕಾಡು ಸಹಿತ ಪುತ್ರಿ ಜಾಗೂ ಪತಿಯನ್ನು ಅಗಲಿದ್ದಾರೆ.ಅವರ ಅಂತ್ಯ ಸಂಸ್ಕಾರದ ಅಂತಿಮ ವಿಧಿ ವಿಧಾನವು ಬಪ್ಪನಾಡುವಿನ ಬಡಗುಹಿತ್ಲುವಿನಲ್ಲಿ ನಡೆದು ಕೆರೆಕಾಡು ಸಾರ್ವಜನಿಕ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಯಿತು. ಕುಟುಂಬಿಕರು, ಆಪ್ತರು ಅಂತಿಮ ದರ್ಶನ ಪಡೆದರು.ಮೃತರ ಆತ್ಮಕ್ಕೆ ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕ ಗುರುಗಳಾದ ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾರ್ಡ್, ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ನ್ಯಾಯವಾದಿ ಬಿಪಿನ್ ಪ್ರಸಾದ್ ಮೂಲ್ಕಿ, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಮೂಲ್ಕಿ-ಮೂಡಬಿದಿರೆಯ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ಶ್ರೀಮತಿ ಚರಿಷ್ಮಾ ಶ್ರೀನಿವಾಸ್ ಬಪ್ಪನಾಡು, ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಸಮಾಜ ಸೇವಕ ಗೋಪಿನಾಥ ಪಡಂಗ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ಬಪ್ಪನಾಡು, ಕಿನ್ನಿಗೋಳಿ ವಿಜಯಾ ಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಕುಮಾರ್ ಪಿ.ಆರ್. ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಎಂ.ರತ್ನಕಾಂತಿ ಶೆಟ್ಟಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಮಾಜಿ ಉಸ್ತುವಾರಿ ಸಚಿವ ಬೆಳ್ಳಿಪಾಡಿ ರಮಾನಾಥ ರೈ.

ಮಂಗಳೂರು: ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್,ನಮ್ಮ ಟಿ.ವಿ.ಯ ಆಡಳಿತ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ ಮತ್ತು ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿಯವರ ಮಾತೃಶ್ರೀ, ಕಾಲೇಜು ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕಿ, ಪ್ರೇಮಕಾಂತಿ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಎಂ.ರತ್ನಕಾಂತಿ ಶೆಟ್ಟಿಯವರು ಇತ್ತೀಚಿಗೆ ನಿಧನರಾಗಿದ್ದು, ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಟಿ. ಎಂ.ಎ. ಪೈ ಕನ್ವೆನ್ಷನಲ್ ಸೆಂಟರ್ ನಲ್ಲಿ ಆಗಸ್ಟ್ 21ರಂದು ಅವರ ಉತ್ತರಕ್ರಿಯೆ ಪ್ರಯುಕ್ತ ಶ್ರದ್ಧಾಂಜಲಿ ಸಭೆ ನಡೆದಾಗ ಕರ್ನಾಟಕ ಸರಕಾರದ ಅರಣ್ಯ, ಸಾರಿಗೆ, ಬಂದರು ಮತ್ತು ಮೀನುಗಾರಿಕೆ, ಜೀವವಿಜ್ಞಾನ ಮತ್ತು ಪರಿಸರ ಖಾತೆ ಮಾಜಿ ಮಂತ್ರಿ ಮತ್ತು ದ. ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಡಾ. ಎ ಜೆ ಶೆಟ್ಟಿ, ಡಾ.ಎ. ಸದಾನಂದ ಶೆಟ್ಟಿ,ಐಕಳ ಹರೀಶ್ ಶೆಟ್ಟಿ,. ಗಣೇಶ್ ರಾವ್, ಡಾ. ಶಾಂತರಾಮ ಶೆಟ್ಟಿ, ಗಣೇಶ್ ರಾವ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್. ಕೆ. ಮೊದಲಾದ ಗಣ್ಯರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.ಚಿತ್ರ :ತಿಲಕ್ ಮಂಚಿ

ಪ್ರಾದೇಶಿಕ ವಾರ್ತೆಗಳು

ಭಾರತ್ ಸಿನೆಮಾಸ್ ಗೆ ವರ್ಷದ ಪ್ರಾದೇಶಿಕ ಉದಯೋನ್ಮುಖ ಸಿನೆಮಾ ಸರಣೆ ಪ್ರಶಸ್ತಿ

“ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ” ಪ್ರಶಸ್ತಿಗೆ ಭಾರತ್ ಸಿನಿಮಾಸ್ ಭಾಜನವಾಗಿದೆ.ಚೆನ್ನೈನಲ್ಲಿ ನಡೆದ ಬಿಗ್ ಸಿನಿ ಎಕ್ಸ್‌ಪೋ ಸಂದರ್ಭದಲ್ಲಿ ಆಗಸ್ಟ್ 18, 2026ರಂದು ಆಯೋಜಿಸಲಾಗಿದ್ದ ಐಮ್ಯಾಕ್ಸ್ ಬಿಗ್ ಸಿನಿ ಪ್ರಶಸ್ತಿ ಸಮಾರಂಭದಲ್ಲಿ, ಭಾರತ್ ಸಿನಿಮಾಸ್‌ಗೆ “ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ” ಎಂಬ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪರವಾಗಿ ಭಾರತ್ ಸಿನಿಮಾಸ್‌ನ ನಿರ್ದೇಶಕರಾದ ಶ್ರೀ ಬಾಲ ಶೆಟ್ಟಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.ಕರ್ನಾಟಕದಾದ್ಯಂತ ಪ್ರೇಕ್ಷಕರಿಗೆ ಆಧುನಿಕ ಸಿನಿಮಾ ಅನುಭವ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ ಮನರಂಜನೆಯನ್ನು ತಲುಪಿಸುವಲ್ಲಿ ಭಾರತ್ ಸಿನಿಮಾಸ್ ಮಾಡುತ್ತಿರುವ ನಿರಂತರ ಪ್ರಯತ್ನಗಳಿಗೆ ಈ ಗೌರವ ಸಂದಿದೆ. ವಿಶೇಷವಾಗಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ವಿಶ್ವಮಟ್ಟದ ಸಿನಿಮಾ ಅನುಭವವನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಈ ಪ್ರಶಸ್ತಿ ಗುರುತಿಸಿದೆ.ಭಾರತ್ ಸಿನಿಮಾಸ್ ತನ್ನ ವಿಸ್ತರಣೆಯ ಪಯಣದಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದು, ಅತ್ಯಾಧುನಿಕ ಚಿತ್ರಪ್ರದರ್ಶನ ಮತ್ತು ಧ್ವನಿ ತಂತ್ರಜ್ಞಾನ, ಆರಾಮದಾಯಕ ಆಸನಗಳು, ಆಧುನಿಕ ವಿನ್ಯಾಸ ಹಾಗೂ ಗ್ರಾಹಕಕೇಂದ್ರಿತ ಸೇವೆಗಳ ಮೂಲಕ ಕೈಗೆಟುಕುವ ದರದಲ್ಲಿ ಉತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ.ಈ ಸಂದರ್ಭದಲ್ಲಿ ಮಾತನಾಡಿದ ಭಾರತ್ ಸಿನಿಮಾಸ್‌ನ ನಿರ್ದೇಶಕರಾದ ಶ್ರೀ ಬಾಲ ಶೆಟ್ಟಿ ಅವರು,“ಈ ಗೌರವವು ಇಡೀ ಭಾರತ್ ಸಿನಿಮಾಸ್ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಸಂಪೂರ್ಣ ತಂಡದ ಸಮರ್ಪಣೆ ಮತ್ತು ಪರಿಶ್ರಮ, ತಂತ್ರಜ್ಞಾನ ಪಾಲುದಾರರ ಸಹಕಾರ ಹಾಗೂ ಮುಖ್ಯವಾಗಿ ನಮ್ಮ ಪ್ರೇಕ್ಷಕರು ನಮ್ಮ ಮೇಲೆ ಇಟ್ಟಿರುವ ನಿರಂತರ ನಂಬಿಕೆ ಮತ್ತು ಬೆಂಬಲಕ್ಕೆ ದೊರೆತಿರುವ ಮಾನ್ಯತೆ ಇದಾಗಿದೆ. ಇನ್ನಷ್ಟು ನಗರಗಳು ಮತ್ತು ಸಮುದಾಯಗಳಿಗೆ ವಿಶ್ವಮಟ್ಟದ ಸಿನಿಮಾ ಅನುಭವವನ್ನು ತಲುಪಿಸುವ ನಮ್ಮ ಬದ್ಧತೆ ಮುಂದುವರಿಯಲಿದೆ.”ಈ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಸಿನಿಮಾ ಪ್ರದರ್ಶನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಸ್ಥೆಗಳು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಗೌರವವು ಪ್ರಮುಖ ಮಹಾನಗರಗಳ ಹೊರತಾಗಿಯೂ ಗುಣಮಟ್ಟದ ಮನರಂಜನಾ ಅನುಭವವನ್ನು ತಲುಪಿಸುವಲ್ಲಿ ಭಾರತ್ ಸಿನಿಮಾಸ್ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ.ಭಾರತ್ ಸಿನಿಮಾಸ್ ಕುರಿತು:ಭಾರತ್ ಸಿನಿಮಾಸ್ ಕರ್ನಾಟಕದ ವಿವಿಧ ನಗರಗಳಲ್ಲಿ ತನ್ನ ಸಾನ್ನಿಧ್ಯವನ್ನು ವಿಸ್ತರಿಸುತ್ತಿರುವ ಪ್ರಮುಖ ಸಿನಿಮಾ ಪ್ರದರ್ಶನ ಸಂಸ್ಥೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಸಿನಿಮಾ ಅನುಭವ, ಆರಾಮದಾಯಕ ಚಿತ್ರಮಂದಿರಗಳು ಹಾಗೂ ಗ್ರಾಹಕಕೇಂದ್ರಿತ ಸೇವೆಗಳನ್ನು ಒದಗಿಸುವುದರ ಜೊತೆಗೆ, ಬೆಳೆಯುತ್ತಿರುವ ನಗರಗಳು ಮತ್ತು ಮಾರುಕಟ್ಟೆಗಳಲ್ಲಿ ಗುಣಮಟ್ಟದ ಸಿನಿಮಾ ಮೂಲಸೌಕರ್ಯವನ್ನು ನಿರ್ಮಿಸುವತ್ತ ಸಂಸ್ಥೆ ನಿರಂತರವಾಗಿ ಗಮನಹರಿಸುತ್ತಿದೆ.

ಪ್ರಾದೇಶಿಕ ವಾರ್ತೆಗಳು

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ. ಮಂಗಳೂರು :ಇತ್ತೀಚೆಗೆ ನಿಧನರಾದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ, ಪ್ರೇಮಕಾಂತಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ, ಶಿಕ್ಷಣ ತಜ್ಞೆ ಎ.ರತ್ನಕಾಂತಿ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಶುಕ್ರವಾರ ನಗರದ ಕೊಡಿಯಾಲಬೈಲಿನ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಿತು.ಮಾಜಿ ಸಚಿವ ರಮಾನಾಥ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎ.ಸದಾನಂದ ಶೆಟ್ಟಿ, ಸುರಭಿ ಹೋಟೆಲ್ ಮಾಲಕ ಸುಧೀರ್ ಶೆಟ್ಟಿ, ಸಂಗೀತ ನಿರ್ದೇಶಕ ವಿ. ಮನೋಹರ್, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಪ್ರೇಮಾನಂದ ಶೆಟ್ಟಿ,ಡಾ| ಎಂ.ಶಾಂತಾರಾಮ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಷ್ಪನಮನ ಸಲ್ಲಿಸಿದರು.ಪುತ್ರರಾದ ಡಾ| ಗುರುಕಿರಣ್ ಶೆಟ್ಟಿ,,ದೇವಿಚರಣ್ ಶೆಟ್ಟಿ, ಡಾ| ಶಿವಶರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಸೇರಿದಂತೆ ಮನೆಯವರು, ಕುಟುಂಬಸ್ಥರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

Career Guidance Programme at St. Rita English Medium School, Casia Jeppu

Mangalore, 20th August 2026: A Career Guidance Programme was organized at St. Rita English Medium School, Casia Jeppu to create awareness among students about career opportunities and professional courses.The programme began with a Welcome Address by Headmistress Mrs. Matilda D’Costa. She welcomed the gathering and emphasized the importance of career planning at the school level. The resource person for the session was CA Vinayak Pai K, Chartered Accountant and Company Secretary, and Proprietor of M/s K V Pai & Co, Mangalore.Addressing the students, CA Vinayak Pai K, who has 4 years of experience in Company Audits and Tax Consultancy, shared his journey of clearing all levels of the CA course in the first attempt and qualifying as a Chartered Accountant at the age of 22. He also informed students about his recent qualification as a Company Secretary in February 2026. Speaking on behalf of the Institute of Chartered Accountants of India [ICAI], he guided students on career options after 10th and 12th, with special focus on professional course that is CA. He explained the scope, eligibility, job opportunities and skills required to succeed in this field.Apart from professional practice, CA Vinayak Pai K also serves as a Guest Lecturer at various institutions, teaching Taxation, Law and Audit to CA Intermediate students, and regularly conducts career counselling sessions for High school students.The programme was compered by Ms. Nisha.The Vote of Thanks was proposed by Mrs. Vidya V D’Souza.Teachers and students appreciated the valuable insights and motivation provided during the session.

ಪ್ರಾದೇಶಿಕ ವಾರ್ತೆಗಳು

ಸಾಲೆತ್ತೂರು ಬಂಟರ ಸಂಘದ ಕ್ರೀಡೋತ್ಸವದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಸನ್ಮಾನ

ಮಂಗಳೂರು: ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ ಜರಗಿದ “ಬಂಟರ ಕ್ರೀಡೋತ್ಸವ ಮತ್ತು ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ದಿವ್ಯ ವಸಂತ ಶೆಟ್ಟಿ, ಜಗನ್ನಾಥ ಚೌಟ ಬದಿಗುಡ್ಡೆ, ಭುಜಂಗ ರೈ ಪಡಾರುಗುತ್ತು, ಶ್ರೀಮತಿ ಸುಜಾತ ರೈ ಕಲ್ಲಡ್ಕ, ಡಾ. ಪೂವಪ್ಪ ಶೆಟ್ಟಿ ಅಳಕೆ, ಲಕ್ಷ್ಮೀಶ ರೈ ಎರ್ಮೆನಿಲೆ, ರಮೇಶ್ ಶೆಟ್ಟಿ ಕುಡ್ತಮುಗೇರು, ವಿದ್ಯಾಧರ ರೈ ಚೆoಬರಡ್ಕ, ಗೋಪಾಲಕೃಷ್ಣ ಶೆಟ್ಟಿ ಪುದ್ದೋಟ್ಟು ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಾಲೆತ್ತೂರು ವಲಯ ಬಂಟರ ಸಂಘದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಚಾಲಕರು ಮತ್ತು ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಶೆಟ್ಟಿ ತಿರುವಾಜೆ, ಬಂಟ್ವಾಳ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ ರೈ ಕುಳಾಲು, ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ, ಅಧ್ಯಕ್ಷ ಉದಯಕುಮಾರ್ ರೈ ಅಗರಿ, ಉಪಾಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಮಹಿಳಾ ಗೌರವಾಧ್ಯಕ್ಷರಾದ ಗಾಯತ್ರಿ ಎಸ್ ರೈ ಕೊಲ್ಲಾಡಿ, ಅಧ್ಯಕ್ಷರಾದ ಸುನಿತಾ ಯು ರೈ ಗೌರಿಕೋಡಿ , ಕಾರ್ಯದರ್ಶಿ ವಿನುತಾ ಎ ಶೆಟ್ಟಿ ಕೊಲ್ಲಾಡಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ: ಅನಂತ ಪದ್ಮನಾಭ ಅಸ್ರಣ್ಣ. ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಿಲಾನ್ಯಾಸ

ಸುರತ್ಕಲ್: ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಗ್ರಾಮಸ್ಥರ ಸಹಮತದಿಂದ ದೇವಳದ ಸಾನಿಧ್ಯ ವೃದ್ದಿಯಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ನುಡಿದರು.ಅವರು ಪುನರ್ ನಿರ್ಮಾಣಗೊಳ್ಳಲಿರುವ ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಷ್ಟಿ ಕಾಣಿಕೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವರ ಕೆಲಸವನ್ನು ಎಲ್ಲರೂ ಸಮಾನ ಮನಸ್ಸಿನ ಮೂಲಕ ಒಗ್ಗಟ್ಟಿನಿಂದ ಮಾಡಿದರೆ ಶೀಘ್ರವಾಗಿ ಪರಿಪೂರ್ಣ ಸಾನಿಧ್ಯ ನಿರ್ಮಾಣವಾಗುತ್ತದೆ ಎಂದರು.ಮುಖ್ಯ ಅತಿಥಿಯಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ನಮ್ಮ ಸುತ್ತಲಿನ ಬದುಕಿನೊಂದಿಗೆ ನಮ್ಮ ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅನುಭವಗಳಿಗೆ ಕಲ್ಪನೆ ಮತ್ತು ಸೃಜನ ಶೀಲತೆಯ ಸ್ವರ್ಶ ನೀಡಿದಾಗ ಉತ್ತಮವಾದ ದೇವಸ್ಥಾನ ನಿರ್ಮಾಣವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಂಬಯಿ ವಿ.ಕೆ,ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಮಾತನಾಡಿ ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಹಿರಿಯರ ಮಾರ್ಗದರ್ಶನದಿಂದ ಈ ದೇವಸ್ಥಾನವು ಮಾದರಿ ದೇವಸ್ಥಾನವಾಗಿ ಮೂಡಿ ಬರಲಿದೆ. ಇದರಿಂದ ಇಡೀ ಗ್ರಾಮವು ಬೆಳಗಲಿದೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ಶಿಬರೂರು ವಾಸುದೇವ ತಂತ್ರಿ, ಹಯವದನ್ ಭಟ್ ಕೈಯೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಕೃಷ್ಣಮೂರ್ತಿ ಭಟ್ ಮಧ್ಯ, ಗಡಿ ಪ್ರಧಾನರಾದ ಶಂಕರ ಹೆಗಡೆ ಮಧ್ಯ, ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ, ಮುಂಬಯಿ ಉದ್ಯಮಿ ಡಿ.ಕೆ,ಶೆಟ್ಟಿ ಸೂರಿಂಜೆ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಮಹಾಬಲ ಪೂಜಾರಿ ಕಡಂಬೋಡಿ, ರಾಜಾರಾಮ್ ಸಾಲ್ಯಾನ್ ಪಡುಪದವು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚೇಳೈರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ! ಜ್ಯೋತಿ ಚೇಳೈರು, ಕಾಟಿಪಳ್ಳ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್, ಮಾಧವ ಶೆಟ್ಟಿ ಕಾಟಿಪಳ್ಳ, ಕರುಣಾಕರ ಶೆಟ್ಟಿ ಪಡುಪದವು, ಮನೋಹರ ಅಂಚನ್ ಪಡುಪದವು, ಚಾಮುಂಡೆಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ರಾಘವ ಶೆಟ್ಟಿ ಕುಲ್ಲಂಗಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಕುಲ್ಲಂಗಾಲು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮೋಹಿನಿ ಶೆಟ್ಟಿ ಮುಂಬಯಿ, ಮಹಿಳಾ ಸಮಿತಿ ಅಧ್ಯಕ್ಷೆ ಪೂರ್ಣಿಮ ಯತೀಶ್ ರೈ, ಪ್ರಸಾದ್ ಶೆಟ್ಟಿ ಕುಲ್ಲಂಗಾಲು, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು, ರಾಧಾಕೃಷ್ಣ ಭಂಡಾರ್ಕರ್, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಶೆಟ್ಟಿ ಪಕ್ಕಳ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುಷ್ಷರಾಜ್ ಕಣ್ವತೀರ್ಥ, ಕೋಶಾಧಿಕಾರಿ ಹರೀಶ್ ಭಂಡಾರಿ ಉಪಸ್ಥಿತರಿದ್ದರು. ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು . ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು ಶೇಖರ ದೇವಾಡಿಗ ಪ್ರಾರ್ಥಿಸಿದರು.

ಪ್ರಾದೇಶಿಕ ವಾರ್ತೆಗಳು

Alva’s Pragati 2026 creates a wider employmentecosystem with 332 companies, 15,539 candidates and2416 spot offersand 6183 shortlists : Vivek Alva

Moodubidire: Alva’s Pragati 2026, the 16th edition of the megaplacement drive organised by Alva’s Education Foundation,concluded on a highly successful note, reaffirming its position as thelargest employment initiatives in the India. The two-day eventwitnessed the participation of 332 companies and attracted 15,539candidates from diverse educational and professional backgrounds.The recruitment drive resulted in 2,416 spot offers and 6183shortlists, creating significant employment opportunities acrossmultiple sectors.The results of 301 participating companies have already beenpublished on the official website (www.alvaspragati.com).Candidates who attended interviews can verify their selection orshortlisting status through the portal. The results of the remainingcompanies and candidates will be announced as and when they arereceived from the recruiters.The recruitment details of SSLC, PUC,and ITI candidates who registered on the spot during the Job Fair arebeing communicated directly to them by the Alva’s team throughphone calls and SMS.Recruiters who participated in the event appreciated the uniqueplatform created by Alva’s Pragati, which brought together candidatesfrom different academic disciplines, skill sets and geographicalregions under one roof, enabling organisations to identify suitabletalent efficiently and effectively. Strong performance across SectorsThe manufacturing sector emerged as one of the major contributorsto employment generation, with 75 companies participating andproducing 924 shortlists and 523 selections. Tata ElectronicsSystems led the sector by selecting 216 candidates, the majority ofwhom were women. HL Mando recruited 99 engineering graduatesfrom EEE, ECE and Mechanical disciplines for positions in Chennaiwith an annual package of ₹3.4 lakh. Toyota Kirloskar Motorshortlisted a Chartered Accountant candidate with a package of ₹11lakh per annum, while Exicom Tele-Systems Ltd. selected 30 womencandidates with an annual package of ₹3 lakh.The IT and IT-enabled Services (IT/ITeS) sector continued to offerpromising opportunities, recording 1,301 shortlists and 96 spotselections across 34 participating companies. Woodrock Infotechextended work-from-home opportunities to 17 shortlisted candidates.Protalk Solutions selected 39 candidates for Chennai-based positions,while Elogixa offered an international onsite opportunity in Congo,Africa, to one candidate.The Banking, Financial Services and Insurance (BFSI) sectorgenerated substantial opportunities with 913 candidates shortlistedand 211 candidates selected on the spot. EXL Services, a leadingmultinational company, recruited 38 candidates for roles in HumanResources, Accounts Receivable and Accounts Payable.In the pharmaceutical sector, companies including Eurofins, R LFine Chem, Solara Active Pharma Sciences, Medorganics India,SAMI Nutraceuticals, Vasudha Life Science, Biocon and GroupPharmaceuticals collectively shortlisted 159 candidates and selected40 candidates.The healthcare sector also witnessed encouraging recruitmentactivity, with Bethany Hospital, Mumbai, selecting 103 candidates.Scenic Summit Resort recruited graduates from naturopathyprogrammes for Wellness Therapist positions, reflecting the diversityof opportunities available through the placement drive.International and Inclusive Employment OpportunitiesAlva’s Pragati 2026 also facilitated international employmentprospects. GBMT Structural Steel Manufacturing Industries selectednine ITI, Diploma and Degree holders for opportunities in the UAEwith an annual package of ₹6 lakh. Expertise contracting shortlisted117 candidates and made 13 spot selections for projects in theKingdom of Saudi Arabia and Adani Mundra, Gujarat.Demonstrating its commitment to inclusive employment, Grow PWDselected two persons with disabilities (PwD). Codeyoung offeredattractive packages of ₹8.36 lakh per annum to six selectedcandidates. LuLu International Shopping Malls Pvt. Ltd. shortlisted45 candidates, with four receiving final offers for positions inBengaluru. The wide participation of organisations from manufacturing, IT/ITeS,BFSI, pharmaceuticals, healthcare, hospitality, retail and allied sectorshighlights the robust employment ecosystem fostered through Alva’sPragati 2026.Follow-Up MeasuresTo ensure maximum placement outcomes, sector coordinators areactively engaging with recruiters and monitoring the subsequentstages of the recruitment process. Alva’s Education Foundation alsoplans to establishdistrict &taluk-level coordination units to remainconnected with candidates from different regions, understand theiremployment requirements and facilitate suitable opportunities.The comprehensive candidate database generated through Alva’sPragati 2026 will continue to be utilised throughout the year toconnect eligible candidates with both niche and large-scalerecruitment opportunities offered by industry partners.Press Meet Participants

ಪ್ರಾದೇಶಿಕ ವಾರ್ತೆಗಳು

ಉದ್ಯೋಗಾವಕಾಶಗಳ ಮಹಾಸಂಗಮ: ಆಳ್ವಾಸ್ ಪ್ರಗತಿ-2026 2,416 ಅಭ್ಯರ್ಥಿಗಳಿಗೆ ಸ್ಪಾಟ್‌ಆಫರ್, 6183 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ : ವಿವೇಕ್ ಆಳ್ವ

ಮೂಡುಬಿದಿರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದಆಯೋಜಿಸಲಾದ 16ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2026’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳು ಹಾಗೂ ನೂರಾರು ಉದ್ಯೋಗದಾತ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಸಮಾಗಮಗೊಳಿಸುವ ಮೂಲಕ, ದೇಶದ ಪ್ರಮುಖ ಉದ್ಯೋಗಮೇಳಗಳ ಸಾಲಿನಲ್ಲಿ ತನ್ನ ವಿಶಿಷ್ಟ ಛಾಪನ್ನು ಮತ್ತಷ್ಟು ಗಟ್ಟಿಗೊಳಿಸಿದೆ.ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಹಿನ್ನೆಲೆಯ 332 ಕಂಪನಿಗಳು ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಒಟ್ಟು 2416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‌ ದೊರೆತಿದ್ದು, 6183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ(www.alvaspragati.com) ಪ್ರಕಟಿಸಲಾಗಿದೆ. ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ತಮ್ಮಆಯ್ಕೆ ಅಥವಾ ಶಾರ್ಟ್‌ಲಿಸ್ಟ್‌ನಕುರಿತು ಈ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಉಳಿದ ಕಂಪನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದೆಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾಪನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಉದ್ಯೋಗಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಅವರಿಗೆ ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ಎಸ್‌ಎಮ್‌ಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ.ವಿವಿಧ ಶೈಕ್ಷಣಿಕ ವಿಭಾಗಗಳು, ಕೌಶಲ್ಯಗಳು ಹಾಗೂ ಭೌಗೋಳಿಕ ಪ್ರದೇಶಗಳಿಂದ ಬಂದ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸೂಕ್ತ ಪ್ರತಿಭೆಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು ‘ಆಳ್ವಾಸ್ ಪ್ರಗತಿ’ ನೆರವಾಗುತ್ತಿದೆ ಎಂದು ಭಾಗವಹಿಸಿದ ಕಂಪೆನಿಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ನೇಮಕಾತಿಉತ್ಪಾದನಾ ವಲಯವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖಕೊಡುಗೆ ನೀಡಿದ್ದು, 75 ಕಂಪನಿಗಳು ಭಾಗವಹಿಸಿ 924 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಟಾಟಾಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಲ್ಲಿ ಬಹುತೇಕರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಎಚ್‌ಎಲ್ ಮಾಂಡೊ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆಆಯ್ಕೆ ಮಾಡಿದ್ದು, ವಾರ್ಷಿಕ ₹3.4 ಲಕ್ಷ ವೇತನ ಪ್ಯಾಕೇಜ್ ನೀಡಿದೆ. ಮೋಟರ್ ಟೊಯೋಟಾಕಿರ್ಲೋಸ್ಕರ್ ಸಂಸ್ಥೆಯುಚಾರ್ಟಡ್್ರ ಅಕೌಂಟೆಂಟ್ ಅಭ್ಯರ್ಥಿಯೊಬ್ಬರನ್ನು ವಾರ್ಷಿಕ ₹11 ಲಕ್ಷ ಪ್ಯಾಕೇಜ್‌ಗೆ ಶಾರ್ಟ್‌ಲಿಸ್ಟ್ ಮಾಡಿದೆ. ಎಕ್ಸಿಕಾಮ್‌ಟೆಲಿ-ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು 30 ಮಹಿಳಾ ಅಭ್ಯರ್ಥಿಗಳನ್ನು ವಾರ್ಷಿಕ 3 ಲಕ್ಷ ಪ್ಯಾಕೇಜ್‌ಗೆಆಯ್ಕೆ ಮಾಡಿದೆ.ಐಟಿ ಮತ್ತುಐಟಿಇಎಸ್‌ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ಗೊಂಡಿದ್ದು, ಜೊತೆಯಲ್ಲಿ 96 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‌ ದೊರೆತಿದೆ. ವುಡ್‌ರಾಕ್‌ ಇನ್ಫೋಟೆಕ್‌ ಕಂಪೆನಿಯು 17 ಜನರನ್ನು ಶಾರ್ಟ್‌ಲಿಸ್ಟ್‌ಗೊಳಿಸಿದ್ದು, ಆ ಅಭ್ಯರ್ಥಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಪ್ರೋಟಾಕ್ ಸೊಲ್ಯೂಷನ್‌ ಚೆನ್ನೈಯಲ್ಲಿಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ, ಅಂತಾರಾಷ್ಟ್ರೀಯ ಉದ್ಯೋಗಾವಕಾಶವೊಂದನ್ನು ಒರ್ವ ಅಭ್ಯರ್ಥಿಗೆ ಒದಗಿಸಿದೆ.913 ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮಾ (BFSI)ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್‌ ಸ್ಟಗೊಳಿಸಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡಿದೆ. ಪ್ರಮುಖ ಬಹುರಾಷ್ಟ್ರೀಯಕಂಪೆನಿಯಾದ EXL Services ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತುಅಕೌಂಟ್ಸ್ ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.ಔಷಧೀಯಕ್ಷೇತ್ರದಲ್ಲಿಯೂರೋಫಿನ್ಸ್, ৫.১৫. ಫೈನ್‌ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್‌ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ಹಲವು ಸಂಸ್ಥೆಗಳು ಒಟ್ಟಾಗಿ 159 ಅಭ್ಯರ್ಥಿಗಳನ್ನು ಶಾರ್ಟ್ನಸ್ಟ್ ಮಾಡಿದ್ದು, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ.ಆರೋಗ್ಯಕ್ಷೇತ್ರದಲ್ಲೂಉತ್ತಮ ನೇಮಕಾತಿ ನಡೆದಿದ್ದು, ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮಿಟ್‌ರೆಸಾರ್ಟ್ ಸಂಸ್ಥೆಯು ಪ್ರಕೃತಿಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್‌ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳು‘ಆಳ್ವಾಸ್ ಪ್ರಗತಿ-2026’ ಮೂಲಕ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳಿಗೂ ವೇದಿಕೆ ಕಲ್ಪಿಸಲಾಗಿದೆ. ಜಿಬಿಎಂಟಿ ಸ್ಪೆಕ್ಟರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆಯುಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದ 9 ಅಭ್ಯರ್ಥಿಗಳನ್ನು ಯುಎಇಯಲ್ಲಿನ ಉದ್ಯೋಗಾವಕಾಶಗಳಿಗೆ ಆಯ್ಕೆ ಮಾಡಿದ್ದು, ವಾರ್ಷಿಕ 26 ಲಕ್ಷ ಪ್ಯಾಕೇಜ್ ನೀಡಿದೆ. ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಸಂಸ್ಥೆಯು 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸೌದಿ ಅರೇಬಿಯಾ ಹಾಗೂ ಗುಜರಾತ್‌ನಅದಾನಿ ಮುಂದ್ರಾದ ಯೋಜನೆಗಳಿಗೆ 13 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿದೆ.ಸಮಾಜದಎಲ್ಲಾ ವರ್ಗಗಳಿಗೂ ಉದ್ಯೋಗಾವಕಾಶಕಲ್ಪಿಸುವ ಬದ್ಧತೆಯನ್ನು ಪ್ರದರ್ಶಿಸಿರುವ ‘ಆಳ್ವಾಸ್ ಪ್ರಗತಿ’ಯಲ್ಲಿ Grow PWD ಸಂಸ್ಥೆಯುಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್ಯಂಗ್ ಸಂಸ್ಥೆಯು ಆಯ್ಕೆಯಾದಆರು ಅಭ್ಯರ್ಥಿಗಳಿಗೆ ವಾರ್ಷಿಕ ₹8.36 ಲಕ್ಷದಆಕರ್ಷಕ ಪ್ಯಾಕೇಜ್ ನೀಡಿದೆ. ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಪ್ರೈವೇಟ್ ಲಿಮಿಟೆಡ್ 45 ಅಭ್ಯರ್ಥಿಗಳನ್ನು ಶಾರ್ಟ್‌ ಮಾಡಿದ್ದು, ಅವರಲ್ಲಿ ನಾಲ್ವರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ನೀಡಿದೆ.ಉತ್ಪಾದನೆ, ಐಟಿ/ಐಟಿಇಎಸ್, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಔಷಧ, ಆರೋಗ್ಯ, ಆತಿಥ್ಯ, ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಸಂಸ್ಥೆಗಳ ವ್ಯಾಪಕ ಭಾಗವಹಿಸುವಿಕೆ ‘ಆಳ್ವಾಸ್ ಪ್ರಗತಿ’ಯನ್ನು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮ ವಲಯದ ನಡುವಿನ ಪರಿಣಾಮಕಾರಿಕೊಂಡಿಯಾಗಿ, ವೈವಿಧ್ಯಮಯ ಹಾಗೂ ವಿಸ್ಟತ ಉದ್ಯೋಗಾವಕಾಶಗಳ ಪರಿಸರವನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.ಉದ್ಯೋಗಾವಕಾಶಗಳ ನಿರಂತರ ಸಂಪರ್ಕಕ್ಕೆತಾಲೂಕು ಮಟ್ಟದ ಘಟಕಗಳ ಸ್ಥಾಪನೆಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗಾವಕಾಶದೊರೆಯುವಂತೆ ಮಾಡಲು ವಿವಿಧ ವಲಯಗಳ ಸಂಯೋಜಕರು ನೇಮಕಾತಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೇಮಕಾತಿಯ ಮುಂದಿನ ಹಂತಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.ವಿವಿಧಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಭ್ಯರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಅವರಉದ್ಯೋಗ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೂಕ್ತ ಅವಕಾಶಗಳನ್ನು ಒದಗಿಸುವಉದ್ದೇಶದಿಂದತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ.‘ಆಳ್ವಾಸ್ ಪ್ರಗತಿ-2026’ ಮೂಲಕ ಲಭಿಸಿದ ಸಮಗ್ರ ಅಭ್ಯರ್ಥಿಗಳ ದತ್ತಾಂಶವನ್ನು ವರ್ಷಪೂರ್ತಿ ಸಕ್ರಿಯವಾಗಿ ಬಳಸಿಕೊಳ್ಳಲಾಗುವುದು. ಭಾಗವಹಿಸಿದ ಕಂಪೆನಿಗಳಿಂದ ಲಭ್ಯವಾಗುವ ನಿರ್ದಿಷ್ಟ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳಿಂದ ಹಿಡಿದು ಬೃಹತ್ ಪ್ರಮಾಣದ ನೇಮಕಾತಿಗಳವರೆಗೆ, ಅರ್ಹ ಅಭ್ಯರ್ಥಿಗಳನ್ನು ಸೂಕ್ತ ಸಂಸ್ಥೆಗಳೊಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಕಾರ್ಯವನ್ನು ನಿರಂತರವಾಗಿ ಸಂಪರ್ಕಿಸಿ. ಮುಂದುವರಿಸಲಾಗುವುದೆಂದು ವಿವೇಕ್ ಆಳ್ವ ತಿಳಿಸಿದ್ದಾರೆಪತ್ರಿಕಾಗೋಷ್ಠಿಯಲ್ಲಿ.ವಿವೇಕ್ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ,ಡಾ. ಕುರಿಯನ್, ಪ್ರಾಂಶುಪಾಲರು, ಆಳ್ವಾಸ್ (ಸ್ವಾಯತ್ತ)ಕಾಲೇಜು,ಡಾ. ಕುಮಾರಸ್ವಾಮಿ, ಮುಖ್ಯಸ್ಥರು, ಉತ್ಪಾದನಾ ವಲಯ, ಆಳ್ವಾಸ್ ಪ್ರಗತಿ-2026ಕುಮಾರಿ,ರಂಜಿತಾ ಆಚಾರ್ಯ, ಮುಖ್ಯಸ್ಥರು, ಉದ್ಯೋಗ ನಿಯೋಜನಾ ವಿಭಾಗ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಶ್ಪ್ರಸಾದ್ ಶೆಟ್ಟಿ, ಮುಖ್ಯಸ್ಥರು, ಆಳ್ವಾಸ್ ಪತ್ರಿಕೋದ್ಯಮ ವಿಭಾಗಶ್ರೀಮತಿ ದಿಶಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೊದಲಾದವರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮ ಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ 7 ನೇ ಕರಡು ಅಧಿಸೂಚನೆ ಹೊರಡಿಸಿರುವುದು ಸರಕಾರದ ಗಮನದಲ್ಲಿರುವ ಹಾಗೂ ಕರಡು ಅಧಿಸೂಚನೆಯ ಬಗ್ಗೆ ಸ್ಥಳೀಯ ಗ್ರಾಮ ನಿವಾಸಿಗಳು ಮತ್ತೊಮ್ಮೆ ಅತಂಕಿತರಾಗಿರುವುದರಿಂದ ಜನರ ಜೀವನೋಪಾಯ ಮತ್ತು ಅಭಿವೃದ್ಧಿ ವಿಚಾರಗಳ ಸ್ಪಷ್ಟನೆ ಬಗ್ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸರಾದ ಶ್ರೀ ಗುರುರಾಜ್ ಗಂಟಿ ಹೊಳೆಯವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ರಾಜ್ಯ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಶ್ರೀ ರಾಮ ಲಿಂಗರೆಡ್ಡಿಯವರು ಭಾರತ ಸರಕಾರವು ದಿನಾಂಕ 27.07.2026ರಂದು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ 7ನೇ ಕರಡು ಅನುಸೂಚನೆಯನ್ನು ಹೊರಡಿಸಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿರುತ್ತದೆ ಹಾಗೂ ಪ್ರಸ್ತುತ ಕಸ್ತೂರಿ ರಂಗನ್ ವರದಿ ಅಧರಿಸಿ ಕೇಂದ್ರ ಸರ್ಕಾರವು 27 ನೇ ಜುಲೈ 2026 ರಂದು ಹೊರಡಿಸಿರುವ 7 ನೇ ಕರಡು ಅಧಿಸೂಚನೆಯನ್ನು ಸರ್ಕಾರದ ಹಂತದಲ್ಲಿರುತ್ತದೆ ಎಂದಿದ್ದಾರೆ.ಹಿಂದಿನ 6 ನೇ ಅಧಿಸೂಚನೆಯನ್ನು ಸಾರಸಗಟ ತಳ್ಳಿ ಹಾಕಿದ ನಿಲುವನ್ನು ಪುನರುಚ್ಚರಿಸಿದ ರಾಜ್ಯ ಸರಕಾರ :ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳು ಈಗಾಗಲೇ ರಕ್ಷಿತ ಪ್ರದೇಶಗಳು ಅಧಿಸೂಚಿತ ಅರಣ್ಯಗಳು ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲ್ಪಟ್ಟು ಸರ್ಕಾರದ ರಕ್ಷಣೆ ಅಡಿಯಲ್ಲಿದ್ದು,ಈ ಪ್ರದೇಶಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದು ಸಂರಕ್ಷಣೆಯ ಉದ್ದೇಶಗಳಿಗೆ ಪ್ರತಿಕೂಲವಾಗುವುದಾಗಿ ಹಾಗೂ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ರಾಜ್ಯ ಸಚಿವ ಸಂಪುಟ ಸಭೆಗಳಲ್ಲಿ ಸದರಿ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಹಿಂದಿನ ಕರಡು ಅಧಿಸೂಚನೆಗಳನ್ನು ಸಂಪೂರ್ಣವಾಗಿ ನಿರಾಕರಿಸಲು ನಿರ್ಣಯಿಸಲಾಗಿರುತ್ತದೆ. ರಾಜ್ಯ ಸಚಿವ ಸಂಪುಟ ಸಭೆಗಳ ನಿರ್ಣಯಗಳನ್ನು ಅನುಸರಿಸಿ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯ ಶಿಫಾರಸುಗಳನ್ನು ನಿರಾಕರಿಸಿ ಸದರಿ ವರದಿ ಅನುಷ್ಠಾನದ ಸಂಬಂಧ ಹೊರಡಿಸಿದ ಕರಡು ಅಧಿ ಸೂಚನೆಗಳನ್ನು ತಿರಸ್ಕರಿಸುವ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು 30-09-2024 ರಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂಬುದನ್ನು ಇದೇ ಸಂದರ್ಭದಲ್ಲಿ ಶಾಸಕರ ಪ್ರಶ್ನೆಗೆ ಪೂರಕವಾಗಿ ಸಚಿವರು ಸ್ಪಷ್ಟನೆಯನ್ನು ನೀಡಿರುತ್ತಾರೆ.ಒಂದು ಬಾರಿಗೆ ಭೌತಿಕ ಸರ್ವೇಯನ್ನು ಸರಕಾರದ ಮೂಲಕ ಕೈಗೊಳ್ಳಲು ಸರಕಾರಕ್ಕೆ ಶಾಸಕರ ಆಗ್ರಹ :ಈ ಹಿಂದಿನ 6 ಅಧಿಸೂಚನೆ ಸೇರಿದಂತೆ ಪ್ರಸ್ತುತ 7ನೇ ಅಧಿಸೂಚನೆಯೂ ಕೂಡ ವೈಮಾನಿಕ ಸಮೀಕ್ಷೆಯ ಆಧಾರದ ಮೂಲಕ ಕೈಗೊಳ್ಳಲಾಗಿದ್ದು, ಅಧಿಸೂಚನೆಯಲ್ಲಿ ಗ್ರಾಮಗಳಲ್ಲಿ ಬರಬಹುದಾದ ಪ್ರದೇಶಗಳ ಅಕ್ಷಾಂಶ ಹಾಗೂ ರೇಖಾಂಶಗಳ ವಿವರಗಳನ್ನು ನಮೂದಿಸಿದ್ದರೂ ಪ್ರಸ್ತುತ ಸದರಿ ಗಡಿ ರೇಖೆ ಯಾವ ಭಾಗದಲ್ಲಿ ಹಾದು ಹೋಗುತ್ತದೆ ಎಂಬ ಬಗ್ಗೆ ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿಗಳು ಇಲ್ಲದೆ ಇರುವ ಕಾರಣ ಹಾಗೂ ಈ ಬಗ್ಗೆ ನಿರಂತರವಾಗಿ ಆತಂಕವನ್ನು ತೋರ್ಪಡಿಸುತ್ತಿರುವುದರಿಂದ ಕರಡು ಅಧಿ ಸೂಚನೆಯಲ್ಲಿ ಇರುವ ಗ್ರಾಮಗಳ ಭೌತಿಕ ಸಮೀಕ್ಷೆಯನ್ನು ಒಂದು ಬಾರಿಗೆ ರಾಜ್ಯ ಸರ್ಕಾರದ ಮೂಲಕ ಕೈಗೊಂಡು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿಯೊಂದಿಗೆ ಅವರಲ್ಲಿರುವ ಆತಂಕ ನಿವಾರಣೆ ಮಾಡಿ ತದನಂತರ ಕ್ಷೇತ್ರಿಯ ಜನ ಜೀವನೋಪಾಯದ ಪೂರಕ ಸಂಪೂರ್ಣ ಮಾಹಿತಿಯೊಂದಿಗೆ ಕೇಂದ್ರ ಸರಕಾರದೊಂದಿಗೆ ಈ ವಿಚಾರದಲ್ಲಿ ಸಮನ್ವಯ ಸಾಧಿಸಲು ಹಾಗೂ ಹಕ್ಕು ಮಂಡಿಸಲು ಪೂರಕ ವಾತಾವರಣ ಸೃಷ್ಟಿಸಲು ಆಗುವುದರಿಂದ ಅಧಿಸೂಚಿತ ಗ್ರಾಮಗಳಲ್ಲಿ ಸರಕಾರದ ಮೂಲಕ ಒಂದು ಬಾರಿಗೆ ಭೌತಿಕ ಸರ್ವೇ ನಡೆಸಲು ಕ್ರಮ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಶಾಸಕರು ಸರಕಾರವನ್ನು ಆಗ್ರಹ ಪಡಿಸಿದ್ದಾರೆ

Scroll to Top